ಬೆಂಗಳೂರು:ಇದೇ ಮಾರ್ಚ್ 27ರಂದು ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಆಯೋಜಿಸಿರೋ ಚಿತ್ರಸಂತೆ ನಡೆಯಲಿದೆ. ಹೀಗಾಗಿ ನಗರದ ಕೆಲ ರಸ್ತೆಗಳು ಬಂದ್ ಆಗಲಿವೆ.
ಈ ಬಗ್ಗೆ ಸಂಚಾರಿ ಜಂಟಿ ಪೊಲೀಸ್ ಆಯಕ್ತ ರವಿಕಾಂತೇ ಗೌಡ ಅವರು ಆದೇಶ ಹೊರಡಿಸಿದ್ದಾರೆ. 27ರ ಬೆಳಗ್ಗೆ 6ರಿಂದ ರಾತ್ರಿ 9ಗಂಟೆವರೆಗೂ ಕುಮಾರಕೃಪ ರಸ್ತೆ ಬಂದ್ ಆಗಲಿದೆ. ಕುಮಾರಕೃಪ ರಸ್ತೆಯ ವಿನ್ಸನ್ ಮ್ಯಾನರ್ ವೃತ್ತದಿಂದ ರೇಸ್ ವ್ಯೂವ್ ಜಂಕ್ಷನ್ ರಸ್ತೆವರೆಗೂ ಎರಡೂ ಬದಿ ರಸ್ತೆಗಳು ಬಂದ್ ಆಗಲಿವೆ.
ಪರ್ಯಾಯ ಮಾರ್ಗವಾಗಿ ಟ್ರಿಲೈಟ್ ಜಂಕ್ಷನ್, ಬಸವೇಶ್ವರ ಸರ್ಕಲ್, ಹಳೇ ಹೈಗ್ರೌಂಡ್ಸ್ ಮ್ಯಾನರ್ ಸರ್ಕಲ್ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಟಿ ಚೌಡಯ್ಯ ರಸ್ತೆ ಮಾರ್ಗದಿಂದ ಬರುವ ವಾಹನಗಳಿಗೆ ಹಳೇ ಹೈಗ್ರೌಂಡ್ ಜಂಕ್ಷನ್, ಎಲ್​​ಆರ್​​ಡಿಇ ಹಾಗೂ ಬಸವೇಶ್ವರ ಸರ್ಕಲ್, ರೇಸ್ ಕೋರ್ಸ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಚಿತ್ರಸಂತೆಗೆ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ:
ರೈಲ್ವೇ ಪ್ಯಾರಲಲ್ ರಸ್ತೆ ಹಾಗೂ ಪ್ರೆಸೆಂಟ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ಧನ ಹೋಟೆಲ್ ವರೆಗೂ ಹಾಗೂ ಟ್ರಿಲೈಟ್ ಜಂಕ್ಷನ್ ನಿಂದ ಮೌರ್ಯ ಜಂಕ್ಷನ್ ವರೆಗೂ ಕಾರುಗಳ ಪಾರ್ಕಿಂಗ್​​ಗೆ ಅವಕಾಶ ಕಲ್ಪಿಸಲಾಗಿದೆ. ಕೆ.ಕೆ ರಸ್ತೆ ಜಂಕ್ಷನ್‌ನಿಂದ ಜ್ಯುಡಿಷಿಯಲ್ ಅಕಾಡೆಮಿ ಕ್ರಾಸ್ ವರೆಗೂ ಹಾಗೂ ಬಿಡಿಎ ಆವರಣದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕೊಡಲಾಗಿದೆ.
ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು; ಆದ್ರೆ ಈ ಷರತ್ತುಗಳು ಅನ್ವಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
