| ಹರೀಶ್​ ಮೋಟುಕಾನ ಮಂಗಳೂರು
ಕೇಂದ್ರ ಸರ್ಕಾರದ “ಪೋಷಣ್​’ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲು ತೀರ್ಮಾನಿಸಲಾಗಿದ್ದ ಸೀರೆಯ ಸಮವಸ್ತ್ರ ಯಾರಿಗೂ ಬೇಡವಾಗಿ ಇಲಿ, ಹೆಗ್ಗಣಗಳಿಗೆ ಆಹಾರವಾಗುತ್ತಿದೆ!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅನುಷ್ಠಾನವಾಗುತ್ತಿರುವ ಈ ಅಭಿಯಾನದ ಉದ್ದೇಶ ಗರ್ಭಧಾರಣೆಯಿಂದ ಆರಂಭಿಸಿ ಶಿಶು ಮತ್ತು ತಾಯಿಗೆ 1 ಸಾವಿರ ದಿನ ಪೌಷ್ಟಿಕ ಆಹಾರ ಲಭಿಸುವಂತೆ ಮಾಡುವುದಾಗಿದೆ. ಅಂಗನವಾಡಿ ಸಿಬ್ಬಂದಿ ಇದರ ಭಾಗವಾಗಿದ್ದಾರೆ. ಅಭಿಯಾನದ ಅಂಗವಾಗಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ 2ರಂತೆ ಸಮವಸ ಸೀರೆ ನೀಡಲು ನಿರ್ಧರಿಸಲಾಗಿತ್ತು. ರಾಜ್ಯ ಮಟ್ಟದಲ್ಲಿ ಟೆಂಡರ್​ ಆಗಿ ಬಣ್ಣ, ಗುಣಮಟ್ಟ, ವಿನ್ಯಾಸ ಇತ್ಯಾದಿ ನಿರ್ಧರಿಸಿ ತಲಾ 385.75 ರೂ. ಬೆಲೆಯ ಸೀರೆಗಳನ್ನು ಇಲಾಖೆಗೆ ಸರಬರಾಜು ಮಾಡಲಾಗಿದೆ. ಆದರೆ ಸೀರೆ ಯಾರಿಗೂ ಬೇಡವಾಗಿದೆ.
| ಡಾ.ಕುಮಾರ್​ ದಕ್ಷಿಣ ಕನ್ನಡ ಜಿಪಂ ಸಿಇಒ
ನಿರಾಕರಣೆ ಯಾಕೆ?ಸೀರೆಯಲ್ಲಿ ದೊಡ್ಡದಾಗಿ “ಪೋಷಣ್​ ಅಭಿಯಾನ್​’ ಎಂದು ಮುದ್ರಿಸಲಾಗಿದೆ. ಅಭಿಯಾನದ ಮುದ್ರೆ ಹೂಗಳ ವಿನ್ಯಾಸದಲ್ಲಿದ್ದು, ಬ್ಯಾನರ್​ನಂತೆ ಕಾಣುತ್ತದೆ. ಸೌಂದರ್ಯಕ್ಕೆ ಪೂರಕ ಸೀರೆ ಕೊಟ್ಟರೆ ಮಾತ್ರ ಧರಿಸುತ್ತೇವೆ ಎಂದು ಅಂಗನವಾಡಿ ನೌಕರರ ಒಕ್ಕೂಟದವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಏಳು ತಿಂಗಳಾದರೂ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ. ಇತ್ತ ಸೀರೆಗಳು ಗೋದಾಮುಗಳಲ್ಲೇ ಕೊಳೆಯುತ್ತಿವೆ.
2.50 ಲಕ್ಷ ಸೀರೆರಾಜ್ಯದ 204 ವಲಯಗಳಲ್ಲಿ 62,580 ಅಂಗನವಾಡಿ ಕೇಂದ್ರಗಳಿವೆ. ಇಲ್ಲಿನ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ 2ರಂತೆ ಮತ್ತು 3,331 ಮಿನಿ ಅಂಗನವಾಡಿಗಳಲ್ಲಿರುವ ಕಾರ್ಯಕರ್ತೆಯರಿಗೆ ತಲಾ 2ರಂತೆ ಒಟ್ಟು 2,56,982 ಸೀರೆ ಸರಬರಾಜು ಮಾಡಲಾಗಿದೆ. 9.91 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಅನೇಕ ಕಡೆ ಇನ್ನೂ ಬಿಲ್​ ನೀಡಿಲ್ಲರಾಜ್ಯದ 204 ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿಗೆ 7 ತಿಂಗಳ ಹಿಂದೆ ಸೀರೆಗಳು ಬಂದಿವೆ. ಬಿಲ್​ ಪಾವತಿಗೆ ಸೂಚನೆ ಬಂದಿದ್ದರೂ, ಸೀರೆ ನಿರಾಕರಿಸಲ್ಪಟ್ಟ ಕಾರಣ ಅನೇಕ ಕಡೆ ಪಾವತಿಸಿಲ್ಲ.
| ಜಯಲಕ್ಷಿ$್ಮ ಬಿ.ಆರ್​. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂದ ಗೌರವಾಧ್ಯಕ್ಷೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
