ಬಳ್ಳಾರಿ:ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸಹೋದರಿಬ್ಬರು ಸಾವಿನಲ್ಲಿ ಒಂದಾದ ದುರಂತ ಘಟನೆ ನಡೆದಿದೆ. ಕೆ.ಸಿದ್ದೇಶ (22) ಎನ್ನುವ ಯುವಕ ಕೈಗಾರಿಕೆ ಇಂಡಷ್ಟ್ರಿಯೊಂದರಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ, ಬಿಪಿ ಜಾಸ್ತಿಯಾಗಿ ಸಿದ್ದೇಶ ಮೃತಪಟ್ಟಿದ್ದಾನೆ.
ಈ ಸುದ್ದಿ ತಿಳಿದ ಬೆಂಗಳೂರಿನಲ್ಲಿ ಇಂಜಿನಿಯರ್​ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರ ದೊಡ್ಡಬಸವ (25) ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ್ದಾನೆ. ತಮ್ಮನ ವಿಧಿ-ವಿಧಾನ ಕಾರ್ಯ ಮುಗಿಯುವರೆಗೂ ಜತೆಗಿದ್ದು, ಸ್ಮಶಾನದಿಂದ ಮರಳಿ ಮನೆಗೆ ಬರುವ ಸಮಯದಲ್ಲಿ ಈ ಯುವಕನಿಗೆ ಹೃದಯಘಾತವಾಗಿದೆ. ಬಳ್ಳಾರಿಯ ವಿಮ್ಸ್​ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ:ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು
ಗ್ರಾಮದ ಬಸಪ್ಪ ಮತ್ತು ದುರ್ಗಮ್ಮ ದಂಪತಿಗಳ ಮಕ್ಕಳಾಗಿದ್ದು, ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಇವರ ಹಿರಿಯ ಮಗ ಕೆಂಚಪ್ಪ ಎಂಬಂತಾನು ತಮ್ಮಂದಿರನ್ನು ಕಳೆದುಕೊಂಡಿರುವ ದು:ಖದಲ್ಲಿ ಚಿಂತಾಕ್ರಾಂತನಾಗಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದು, ಈತನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ. ಅದರಲ್ಲೂ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ವ್ಯವಸಾಯ ನಂಬಿ ಜೀವನ ಸಾಗಿಸುತ್ತಿರುವ ಈ ದಂಪತಿಗೆ ಮಕ್ಕಳೇ ಆಧಾರವಾಗಿದ್ದರು. ಆದರೆ, ಜವರಾಯ ಮೂವರು ಸಹೋದರಲ್ಲಿ ಇಬ್ಬರನ್ನು ಒಂದೇ ದಿನ ಬಲಿ ಪಡೆದು ಕುಟುಂಬಕ್ಕೆ ಆಘಾತ ನೀಡಿದ್ದಾನೆ.
ಸಿಎಂ ನಿವಾಸಕ್ಕೆ ಸುದೀಪ್ ದಿಢೀರ್​ ಭೇಟಿ!​

ನೂರು ಕೋಟಿ ಕ್ಲಬ್​ಗೆ ಸೇರುತ್ತಾ ರಾಬರ್ಟ್​? ಅಷ್ಟಕ್ಕೂ ಮೊದಲ ವಾರದ ಕಲೆಕ್ಸೆನ್ ಎಷ್ಟು ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
