ಕೋಲಾರ:ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ತೆರೆದಿಲ್ಲ. ಮಕ್ಕಳು ಮನೆಯಲ್ಲೇ ಇದ್ದಾರೆ. ಹೊರಗೂ ಹೆಚ್ಚು ಹೋಗುತ್ತಿಲ್ಲ. ಮನೆಯೊಳಗೆ ಏನೋ ಆಟ ಆಡಿಕೊಂಡು ಇರುತ್ತಾರೆ ಎಂದು ನೀವು ಅತ್ತ ಗಮನ ಹರಿಸದೇ ಸುಮ್ಮನಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಏಕೆಂದರೆ ಇಲ್ಲೊಂದು ಕಡೆ ಹಾಗೆ ಆಟವಾಡುತ್ತಿದ್ದ ಮಕ್ಕಳ ಪೈಕಿ ಒಬ್ಬಳು ಬಾಲಕಿ ಜೀವ ಕಳೆದುಕೊಳ್ಳುವಂತಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಮಕ್ಕಳಿಬ್ಬರು ಮನೆಯಲ್ಲೇ ಸೀರೆಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಡುತ್ತಿದ್ದರು. ಆ ಸಂದರ್ಭದಲ್ಲಿ ಮಕ್ಕಳಿಬ್ಬರಿಗೆ ಸೀರೆ ಸುತ್ತಿಕೊಂಡು, ಒಬ್ಬಳು ಉಸಿರುಗಟ್ಟಿ ಸತ್ತು ಹೋದರೆ ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ.
ಪೆದ್ದೂರು ಗ್ರಾಮದ ಮೇಘನಾ (12) ಉಸಿರುಗಟ್ಟಿ ಸಾವಿಗೀಡಾಗಿರುವ ಬಾಲಕಿ. ಜೊತೆಗಿದ್ದ ದೇವಿಶ್ರೀ ಎಂಬಾಕೆಯ ಪರಿಸ್ಥಿತಿ ಗಂಭೀರಗೊಂಡಿದ್ದು, ಆಕೆಯನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ದುರಂತದ ಕುರಿತು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿಲ್ಲ ಎಂದು ವಿಷ ಕುಡಿದ ಮಹಿಳೆ; 2 ದಿನ ಆಸ್ಪತ್ರೆಯಲ್ಲಿ ಒದ್ದಾಡಿ ಸಾವು…

ಹೊಟ್ಟೆನೋವಿಗೆ ಪ್ರಾಣಬಲಿ; ಬೇನೆ ತಾಳಲಾಗದೆ ನೇಣಿಗೆ ಶರಣಾದ ವ್ಯಕ್ತಿ

ರಾಜ್ಯದ ಇದೊಂದು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
