ಬಾಗಲಕೋಟೆ:ಜಗತ್ತು, ದೇಶವನ್ನು ಕಾಡುತ್ತಿರುವ ಕರೊನಾ ಸೋಂಕು ರಾಜ್ಯದ ಈ ಕುಟುಂಬಕ್ಕೆ ಅಕ್ಷರಶಃ ನರಕವನ್ನೇ ಸೃಷ್ಟಿಸಿದೆ. ಏಕೆಂದರೆ ಈ ಮನೆಯ ನಾಲ್ವರನ್ನು ಕರೊನಾ ಬಲಿ ಪಡೆದಿದೆ. ಎರಡು, ಮೂರು ದಿನಗಳ ಅಂತರದಲ್ಲಿ ಇಬ್ಬಿಬ್ಬರು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ (45), ಶಿಕ್ಷಕಿಯಾಗಿರುವ ಅವರ ಪತ್ನಿ ರಾಜೇಶ್ವರಿ (40), ಪತ್ನಿಯ ತಂದೆ ರಾಮನಗೌಡ ಉದಪುಡಿ (74), ರಾಜೇಶ್ವರಿಯ ತಾಯಿ ಲಕ್ಷ್ಮೀಬಾಯಿ (68) ಕೋವಿಡ್​-19 ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?
ಕೆಲವು ದಿನಗಳ ಹಿಂದ ಕರೊನಾ ಸೋಂಕಿಗೆ ಒಳಗಾಗಿರುವ ಇವರೆಲ್ಲರೂ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ವಾಸವಿದ್ದರು. ರಾಜೇಶ್ವರಿ ಸಾಲಹಳ್ಳಿಯಲ್ಲಿ ಶಿಕ್ಷಕಿಯಾಗಿದ್ದು, ಅಲ್ಲಿಯೇ ಮನೆ ಮಾಡಿಕೊಂಡಿದ್ದರು. ಪತಿ ವೆಂಕಟೇಶ್ ರಾಮದುರ್ಗದಲ್ಲಿ ಹಾಸ್ಟೆಲ್​ ಸೂಪರಿಂಟೆಂಡೆಂಟ್​ ಆಗಿದ್ದು, ಅವರು ಪತ್ನಿಯ ಊರಾದ ಸಾಲಹಳ್ಳಿಯಲ್ಲೇ ನೆಲೆಸಿದ್ದರು.
ರಾಜೇಶ್ವರಿ ಅವರಿಗೆ ಮೊದಲು ಕರೊನಾ ಲಕ್ಷಣಗಳು ಕಾಣಿಸಿದ್ದವು. ಬಳಿಕ ರಾಜೇಶ್ವರಿ ತಂದೆ, ತಾಯಿ, ಪತಿ ಸೇರಿ ನಾಲ್ವರೂ ಕರೊನಾ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆಗಾಗಿ ಬಾಗಲಕೋಟೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು. ಆದರೆ ಯಾರಿಗೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮೇ 3ರಂದು ರಾಜೇಶ್ವರಿ, ಮೇ 5ರಂದು ಅವರ ತಂದೆ ರಾಮನಗೌಡ, ಮೇ 12ರಂದು ತಾಯಿ ಲಕ್ಷ್ಮೀಬಾಯಿ ಸಾವಿಗೀಡಾಗಿದ್ದರು. ಪತಿ ವೆಂಕಟೇಶ್​ ಇಂದು ಕೊನೆಯುಸಿರೆಳೆದಿದ್ದಾರೆ.
ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
