ತುಮಕೂರು:ಚಂದನವನದ ರಾಜಕುಮಾರ, ಕೋಟ್ಯಂತರ ಜನರ ಪ್ರೀತಿಯ ಅಪ್ಪು ಅಭಿನಯದ ‘ಗಂಧದಗುಡಿ’ ಸಾಕ್ಷ್ಯಚಿತ್ರ ನಾಳೆ(ಅ.28) ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈ ಹಿನ್ನೆಲೆ ಅಪ್ಪು ಅಭಿಮಾನಿಯೊಬ್ಬರು ಗ್ರಾಹಕರಿಗೆ ಉಚಿತ ಹೇರ್ ಕಟಿಂಗ್ ಮಾಡಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆಜಿ ಟೆಂಪಲ್ ಗ್ರಾಮದ ಯುವಕ ಪವನ್​ಗೆ ಪುನೀತ್​ ರಾಜ್​ಕುಮಾರ್​ ಅಂದ್ರೆ ತುಂಬಾ ಇಷ್ಟ. ಹಾಗಾಗಿ ತನ್ನ ಶಾಪ್​ಗೆ ಮಂಗಳವಾರ, ಬುಧವಾರ ಗ್ರಾಹಕರಿಗೆ ಉಚಿತವಾಗಿ ಹೇರ್ ಕಟಿಂಗ್ ಮಾಡಿ ಅಭಿಮಾನ ಮೆರೆದಿದ್ದಾರೆ.
ಕೆಜಿ ಟೆಂಪಲ್ ಗ್ರಾಮದಲ್ಲಿ ತನ್ನ ಸಹೋದರಿಯ ಹೆಸರಿನಲ್ಲಿ ಪವನ್​ ಹೇರ್ ಕಟಿಂಗ್ ಸಲೂನ್ ತೆರೆದಿದ್ದಾರೆ. ಇದೇ ಸಲೂನ್​ನಲ್ಲಿ ಉಚಿತ ಸೇವೆ ನೀಡಿದ್ದಾರೆ. ಪವನ್ ಕಾರ್ಯಕ್ಕೆ ಮನೆಯವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ವರ್ಷ ಅಪ್ಪು ಪುಣ್ಯಸ್ಮರಣೆಯ ವೇಳೆ ಉಚಿತ ಹೇರ್ ಕಟಿಂಗ್ ಸೇವೆ ನೀಡುವುದಾಗಿ ಪವನ್​ ಹೇಳಿದ್ದಾರೆ.
ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​: ಮುಂದಿನ ವರ್ಷವೇ ದೇವಿಯ ದರ್ಶನ ಸಿಗೋದು

ಸಾವಿಗೂ ಮುನ್ನ ಬಂಡೇಮಠದ ಶ್ರೀಗಳು ಬರೆದದ್ದು ಒಂದಲ್ಲ, ಎರಡಲ್ಲ ಮೂರು ಡೆತ್​ನೋಟ್​! ಈ ಕುರಿತು ರಾಮನಗರ ಎಸ್​ಪಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
