ಬೆಂಗಳೂರು: ಕೂಲಿ-ಕಾರ್ವಿುಕರು, ನಿರ್ಗತಿಕರಿಗೆ 2 ಲಕ್ಷ ಪಡಿತರ ಕಿಟ್ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಹೇಳಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 247 ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಕಿಟ್​ನಲ್ಲಿ ಅಕ್ಕಿ, ಸಕ್ಕರೆ, ಬೇಳೆ, ಸಾಂಬಾರ್ ಪುಡಿ ಸೇರಿ 14 ಬಗೆಯ ಪದಾರ್ಥಗಳು ಇರಲಿವೆ ಎಂದರು. ಕರೊನಾ ಸಂಕಷ್ಟವಿರುವ ಕಾರಣ ಎಲ್ಲರಿಗೂ ಪಡಿತರ ವಿತರಣೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪಡಿತರ ಕಾರ್ಡ್ ಇಲ್ಲದ ಕೂಲಿ-ಕಾರ್ವಿುಕರು, ಅಶಕ್ತರಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಸೂಚನೆ ಸಿಎಂ ನೀಡಿದ್ದರಿಂದ ನಮ್ಮ ಇಲಾಖೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ವಾಟ್ಸ್​ಆಪ್ ಪಡಿತರ: ಕಾರ್ವಿುಕರು ಎಲ್ಲೇ ಇದ್ದರೂ ವಾಟ್ಸ್​ಆಪ್​ನಲ್ಲಿ ರೇಷನ್ ಕಾರ್ಡ್ ತೋರಿಸಿದರೂ ಸಾಕು, ಅವರಿಗೆ ಪಡಿತರ ನೀಡುವಂತೆ ಸೂಚಿಸಲಾಗಿದೆ.ಮೊಬೈಲ್​ಫೋನ್ ಬದಲಾಗಿ ಒಟಿಪಿ ಸಮಸ್ಯೆ ಆಗಿದ್ದರೆ ಅವರಿಗೂ ಈ ಸಲ ಪಡಿತರ ನೀಡಲು ಸೂಚಿಸಲಾಗಿದೆ ಎಂದರು.
ವಾರ್ ರೂಮ್ ಕರೊನಾ ಸಂದರ್ಭದಲ್ಲಿ ಪಡಿತರ ವಿತರಣೆಗಾಗಿ ಪ್ರಾರಂಭಿಸಲಾಗಿರುವ ವಾರ್ ರೂಮ್​ನ್ನು ಅಧಿಕಾರಿಗಳ ತಂಡ ನಿರ್ವಹಣೆ ಮಾಡಲಿದೆ. ನಂಬರ್ 1967ಗೆ ಕರೆ ಮಾಡಬಹುದು. ದೂರು ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇಡೀ ಜಗತ್ತಿಗೆ ಕರೊನಾ ಸಮಸ್ಯೆ ಬಂದಿದ್ದು, ಮನುಕುಲವೇ ಸಂಕಷ್ಟದಲ್ಲಿದೆ. ಇಂಥ ಹೊತ್ತಿನಲ್ಲಿ ಪಡಿತರ ವಿತರಣೆ ಮಾಡುವುದರಲ್ಲಿ ಅನ್ಯಾಯ ಮಾಡ ಬೇಡಿ. ಬಡವರು- ನಿರ್ಗತಿಕರಿಗೆ ಸ್ಪಂದಿಸಿ ಎಂದು ನ್ಯಾಯಬೆಲೆ ಅಂಗಡಿಯವರಿಗೆ ಸಚಿವರು ಕೈ ಮುಗಿದು ಮನವಿ ಮಾಡಿದರು.
ಅಕ್ಕಿ ಗೋಧಿ ವಿತರಣೆ: ರಾಜ್ಯದಲ್ಲಿ 19 ಸಾವಿರ ನ್ಯಾಯಬೆಲೆ ಅಂಗಡಿಗಳಿದ್ದು, ಈಗಾಗಲೇ ಅವುಗಳಿಗೆ 83,648.20 ಮೆಟ್ರಿಕ್ ಟನ್ ಅಕ್ಕಿ, 2,844.27 ಮೆಟ್ರಿಕ್ ಟನ್ ಗೋಧಿ ವಿತರಿಸಲಾಗಿದೆ. ಇನ್ನು 3,51,121.80 ಮೆಟ್ರಿಕ್ ಟನ್ ಅಕ್ಕಿ, 24 ಸಾವಿರ ಮೆಟ್ರಿಕ್ ಟನ್ ಗೋಧಿ ಶೀಘ್ರವೇ ವಿತರಣೆ ಆಗಲಿದೆ ಎಂದರು.
ಪುಡ್ ಕಿಟ್ ಉತ್ತಮ: ಎಲ್ಲರಿಗೂ ಊಟದ ಅಗತ್ಯವಿಲ್ಲ. ಹಲವರು ಅಡುಗೆ ಮಾಡಿ ಕೊಳ್ಳಲು ಸಮರ್ಥರಿದ್ದಾರೆ. ಅಂಥವರಿಗೆ ಪುಡ್ ಕಿಟ್ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಸಿಎಂ ಸಭೆಯಲ್ಲಿ ವ್ಯಕ್ತವಾದ ಕಾರಣ, 15 ದಿನಕ್ಕೆ ಅಡುಗೆಮಾಡಿಕೊಳ್ಳಲು ಅಗತ್ಯವಿರುವಷ್ಟು ದಿನಸಿ ಪದಾರ್ಥಗಳನ್ನು ಕಿಟ್ ರೂಪದಲ್ಲಿ ಕೊಡಲು ತೀರ್ವನಿಸಲಾಗಿದೆ ಎಂದರು. ಇಸ್ಕಾನ್, ಅದಮ್ಯ ಚೇತನ, ಜೈನ್ ಸಮಾಜ, ನೊಳಂಬ ಸಮಾಜ, ಕಾಶಿ ಮಠ ಸೇರಿ ಹತ್ತು ಹಲವು ಸಂಸ್ಥೆಗಳು ಅಡುಗೆ ಮಾಡಿ, ಅಗತ್ಯ ಇರುವವರಿಗೆ ಪುಡ್ ಪ್ಯಾಕೆಟ್​ಗಳನ್ನು ನಗರದಲ್ಲಿ ನೀಡುತ್ತಿವೆ ಎಂದು ಸಚಿವರು, ಅವರ ಸೇವೆಯನ್ನು ಕೊಂಡಾಡಿದರು.
ಹಣ ಕೊಡಬೇಡಿ
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡುವಾಗ ಪ್ರತಿಕಾರ್ಡ್​ಗೆ ಇಂತಿಷ್ಟು ಹಣ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಬಂದಿರುವುದರಿಂದ ತಕ್ಷಣವೇ ಕ್ರಮ ಕೈಗೊಂಡ ಸಚಿವರು, ಯಾವುದೇ ನ್ಯಾಯಬೆಲೆ ಅಂಗಡಿಯವರು ಹಣ ಕೇಳಿದರೆ ನನ್ನ ಅಥವಾ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತನ್ನಿ. ಅವರ ಮೇಲೆ ಮುಲಾಜಿಲ್ಲದೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
253 ಪ್ರಕರಣ
ಕೋವಿಡ್ 19ಕ್ಕೆ ಸಂಬಂಧಿಸಿದಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ 3,249 ತಪಾಸಣೆಗಳನ್ನು ಮಾಡಿದ್ದು, 235 ಪ್ರಕರಣಗಳನ್ನು ದಾಖಲು ಮಾಡಿ, 8,16,500 ರೂ. ಶುಲ್ಕ ಸಂಗ್ರಹಿಸಲಾಗಿದೆ. ಬೆಂಗಳೂರು ಮತ್ತು ಬೆಂಗಳೂರು ವಿಭಾಗದಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ.
500 ರೂ. ನೋಟುಗಳಲ್ಲಿ ಮೂಗು, ಬಾಯಿ ಒರೆಸಿಕೊಂಡವನ ಬಂಧನ, ನಾಸಿಕ್​ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 8 =
Remember me
