ಬೆಂಗಳೂರು:ರಾಜ್ಯದಲ್ಲಿ ಎಂಟು ತಿಂಗಳ ಅವಧಿಯಲ್ಲಿ ಎರಡು ಸಂಭವನೀಯ ಭಾರಿ ಭಯೋತ್ಪಾದಕ ದಾಳಿಗಳು ತಪ್ಪಿವೆ. ಒಮ್ಮೆ ಶಂಕಿತ ಉಗ್ರ ಬಾಂಬ್ ಸಾಗಿಸುತ್ತಿದ್ದಾಗ ಮಾರ್ಗಮಧ್ಯ ಸ್ಪೋಟಗೊಂಡು ಅನಾಹುತ ತಪ್ಪಿದರೆ, ಇತ್ತೀಚೆಗೆ ಸಿಸಿಬಿ ಪೊಲೀಸರು ಗ್ರೆನೇಡ್ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಶಂಕಿತರನ್ನು ಬಂಧಿಸುವ ಮೂಲಕ ದುರಂತ ತಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಸೆರೆಸಿಕ್ಕವರು ಕೇವಲ ಆದೇಶ ಪಾಲನೆ ಮಾಡುವ ಹಂತದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಜೈಲಿನಲ್ಲಿರುವ ಟಿ. ನಾಸೀರ್ ಮತ್ತು ವಿದೇಶದಲ್ಲಿರುವ ಜುನೇದ್ ಅಹಮದ್ ಗ್ರೆನೇಡ್ ಮತ್ತು ಶಸ್ತ್ರಾಸ್ತ್ರಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುತ್ತಿದ್ದರು.
ಆದರೆ, ಬಂಧಿತರಿಗೆ ಇದನ್ನು ತಂದುಕೊಟ್ಟವರು ಯಾರು ಮತ್ತು ಎಲ್ಲಿಂದ ಈ ಸ್ಫೋಟ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂಬುದು ನಿಗೂಢವಾಗಿದೆ. ಈ ಎಲ್ಲ ಸಂಚಿನಲ್ಲಿ ಇನ್ನೂ ದೊಡ್ಡ ಉಗ್ರರ ಗ್ಯಾಂಗ್ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹಿಂದು ದೇವಸ್ಥಾನ, ಹಿಂದು ಮುಖಂಡರ ಹತ್ಯೆ, ಹಿಂದುಗಳ ಲಿಕ್ಕರ್ ಶಾಪ್, ಖಾಸಗಿ ಆಸ್ತಿ, ಹಾರ್ಡ್​ವೇರ್ ಅಂಗಡಿ, ವಾಹನಗಳನ್ನು ಟಾರ್ಗೆಟ್ ಮಾಡಿ ಐಸಿಸ್ ಶಂಕಿತರು ಸಜ್ಜಾಗಿದ್ದರು.
2022ರ ನ.19ರಂದು ಮಂಗಳೂರಿನಲ್ಲಿ ಆಟೋದಲ್ಲಿ ಶಂಕಿತ ಉಗ್ರ ಮಹಮ್ಮದ್ ಶಾರೀಕ್ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದಾಗ ಸ್ಪೋಟಗೊಂಡು ಗಾಯಗೊಂಡಿದ್ದ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಶಾರೀಕ್ ಮತ್ತು ಇತರ ಶಂಕಿತರು ಐಸಿಸ್​ನಿಂದ ಪ್ರೇರಿತರಾಗಿದ್ದರು. ಶಿವಮೊಗ್ಗದಲ್ಲಿ 25ಕ್ಕೂ ಅಧಿಕ ಸಣ್ಣಪುಟ್ಟ ಸ್ಪೋಟಗಳ ಪ್ರಯೋಗ ನಡೆಸಿದ್ದರು. ಕೊನೆಗೆ ಭಾರಿ ಸ್ಪೋಟಕ್ಕೆ ಸಜ್ಜಾಗಿ ಆಟೋದಲ್ಲಿ ಎಲ್​ಇಡಿ ಸಾಗಿಸುತ್ತಿದ್ದಾಗ ಬಾಂಬ್ ಸಿಡಿದಿತ್ತು. ಎನ್​ಐಎ ಅಧಿಕಾರಿಗಳು ಶಾರೀಕ್ ಜಾಡು ಹಿಡಿದು ಮಧ್ಯಪ್ರದೇಶದ ಶೆಣೈ ಜಿಲ್ಲೆಯಲ್ಲಿ ಮೂವರು ಶಂಕಿತರನ್ನು ಬಂಧಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಕೇವಲ 8 ತಿಂಗಳ ಅವಧಿಯಲ್ಲಿ ಎರಡು ಭಾರಿ ಅನಾಹುತ ತಪ್ಪಿದಂತಾಗಿದೆ.
ಕದ್ರಿ ದೇವಸ್ಥಾನ ಟಾರ್ಗೆಟ್:ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್(ಐಆರ್​ಸಿ) ಸಂಘಟನೆ, ಕುಕ್ಕರ್ ಬಾಂಬ್ ಸ್ಪೋಟದ ಹೊಣೆ ಹೊತ್ತುಕೊಂಡಿತ್ತು. ಶಿವಮೊಗ್ಗದಿಂದ ಬಸ್​ನಲ್ಲಿ ಮಂಗಳೂರಿಗೆ ಬಂದಿದ್ದ ಉಗ್ರನ ಗುರಿ ಕದ್ರಿಯ ದೇವಸ್ಥಾನ ಆಗಿತ್ತು.
ಕಾಸರಗೋಡು:ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್​ನ ಚಟುವಟಿಕೆಗಳಿಗೆ ಹಣಕಾಸು ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವವರು ಕೇರಳದಲ್ಲೂ ಭಯೋತ್ಪಾದಕ ಕೃತ್ಯಕ್ಕೆ ಸಂಚು ನಡೆಸಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಹಿರಂಗಪಡಿಸಿದೆ.
ಪ್ರಮುಖ ಆರೋಪಿ ಆಸಿಫ್ ಸೇರಿದಂತೆ ನಾಲ್ವರನ್ನು ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಬಹಿರಂಗವಾಗಿದೆ. ಈ ಮೂಲಕ ಕೇರಳದಲ್ಲಿ ಐಸಿಸ್ ಸ್ಲೀಪರ್ ಸೆಲ್ ಸಕ್ರಿಯವಾಗಿರುವುದು ಮತ್ತೆ ಸಾಬೀತಾಗಿದೆ. ಧಾರ್ವಿುಕ ಕೇಂದ್ರಗಳು, ನಿಗದಿತ ಸಮುದಾಯದ ಮುಖಂಡರ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಐಸಿಸ್ ಮಾಡ್ಯುಲ್ ಸಂಚು ರೂಪಿಸಿದೆ. ಇದಕ್ಕೆ ಬೇಕಾದ ರೂಪುರೇಷೆಗಳನ್ನೂ ತಯಾರಿಸಿದ್ದನ್ನೂ ಎನ್​ಐಎ ಪತ್ತೆ ಹಚ್ಚಿದೆ. ‘ಪೆಟ್ ಲವರ್ಸ್’ ಎಂಬ ಸಾಮಾಜಿಕ ಜಾಲತಾಣ ಅಕೌಂಟ್ ಆರಂಭಿಸಿ ದೇಶವಿರೋಧಿ ಕೃತ್ಯಗಳಿಗೆ ಆಹ್ವಾನ ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ.
ಪಾಲಕ್ಕಾಡ್ ಹಾಗೂ ತ್ರಿಶ್ಯೂರ್​ನಲ್ಲಿ ಕೇರಳ ಪೊಲೀಸ್​ನ ಎಟಿಎಸ್ ಸಹಾಯದೊಂದಿಗೆ ಎನ್​ಐಎ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತ್ರಿಶ್ಯೂರ್ ನಿವಾಸಿಗಳಾದ ಸಯ್ಯದ್ ನಬೀಲ್ ಅಹಮ್ಮದ್, ಟಿ.ಎಸ್. ಶಿಯಾಸ್ ಎಂಬುವರನ್ನು ತ್ರಿಶ್ಯೂರ್​ನಿಂದ ಹಾಗೂ ಪಿ.ಎ. ರಯೀಸ್ ಎಂಬಾತನನ್ನು ಪಾಲಕ್ಕಾಡಿನಿಂದ ಬಂಧಿಸಲಾಗಿದೆ. ಈ ತಂಡದ ಮುಖ್ಯಸ್ಥ ಆಸಿಫ್​ನನ್ನು ಸತ್ಯಮಂಗಲ ಕಾಡಿನಿಂದ ಬಂಧಿಸಲಾಗಿದೆ. ಈತನಿಗೆ ಅರಣ್ಯದಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಟ್ಟವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಡಿಜಿಟಲ್ ಉಪಕರಣ, ಕೋಮುದ್ವೇಷ ಹರಡುವ ಕೆಲ ದಾಖಲೆಗಳನ್ನು ಎನ್​ಐಎ ವಶಪಡಿಸಿಕೊಂಡಿದೆ. ಇವರ ವಿರುದ್ಧ ಯುಎಪಿಎ ಕಾಯ್ದೆಯನ್ವಯ ಕೇಸು ದಾಖಲಿಸಿಕೊಳ್ಳಲೂ ಎನ್​ಐಎ ಚಿಂತನೆ ನಡೆಸಿದೆ.
ಬೆಂಗ್ಳೂರಿನಲ್ಲಿ ಸಿಸಿಬಿ ಪೊಲೀಸರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದು, ಈ ಪ್ರಕರಣವನ್ನು ರಾಷ್ಟಿ್ರಯ ತನಿಖಾದಳಕ್ಕೆ ವಹಿಸುವಂತೆ ಕೇಂದ್ರ ಗೖಹಸಚಿವ ಅಮಿತ್ ಷಾ ಅವರಿಗೆ ಮನವಿ ಮಾಡಿದ್ದೇನೆ. ಅಪರಾಧಿಗಳ ಹಿನ್ನೆಲೆ, ಅವರ ನೆಟ್​ವರ್ಕ್ ಸಹಿತ ಮೂಲಭೂತವಾದಿಗಳನ್ನು ಮಟ್ಟ ಹಾಕಲು ಹಾಗೂ ಸಂಪೂರ್ಣ ಜಾಲವನ್ನು ಸದೆಬಡಿಯಲು ಎನ್​ಐಎ ತನಿಖೆ ಅಗತ್ಯ ಇದೆ.
| ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಬಿಎಂಟಿಸಿ ಬಸ್ ಸ್ಪೋಟಕ್ಕೆ ಸಂಚು:ಆರ್.ಟಿ. ನಗರದ ಮನೆಯಲ್ಲಿ ಸ್ಪೋಟಕ ವಸ್ತುಗಳೊಂದಿಗೆ ಸೆರೆಸಿಕ್ಕಿರುವ ಎಲ್​ಇಟಿ ಸಂಘಟನೆಯ ಶಂಕಿತರ ಗ್ಯಾಂಗ್ ಬಿಎಂಟಿಸಿ ಬಸ್ ಸ್ಪೋಟಿಸಲು ಪ್ಲಾ್ಯನ್ ಮಾಡಿದ್ದರು ಎನ್ನಲಾಗಿದೆ.
ಜೈಲಿನಲ್ಲಿ ನಾಸೀರ್​ಗೆ ಬೈಗುಳ:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೇರಳದ ಶಂಕಿತ ಉಗ್ರ ಟಿ. ನಾಸೀರ್ ಮೇಲೆ ಸಹಕೈದಿಗಳು ಹರಿಹಾಯ್ದಿದ್ದಾರೆ. ಮುಸ್ಲಿಂ ಕೈದಿಗಳಿಗೆ ಉಗ್ರವಾದ ಬೋಧನೆ ಮಾಡಿ ಜೈಲಿನ ವಾತಾವರಣ ಹಾಳು ಮಾಡುತ್ತಿದ್ದೀಯ. ನಿಮ್ಮಿಂದ ಜೈಲಿನಲ್ಲಿ ಇರುವ ಇತರರಿಗೂ ತೊಂದರೆ ಆಗಿದೆ ಎಂದು ಸಹ ಕೈದಿಗಳು ಜಗಳಕ್ಕೆ ಹೋಗಿದ್ದರು. ಅಷ್ಟೊತ್ತಿಗೆ ಜೈಲು ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
