|ವಿಲಾಸ ಮೇಲಗಿರಿಬೆಂಗಳೂರು
ಅಕಾಲಿಕ ನಿಯೋಜನೆ ರದ್ದು, ವರ್ಗಾವಣೆ ಕಾರಣ ರಾಜ್ಯದಲ್ಲಿ ಮತ್ತೆ ಸುಮಾರು 2,000 ಅತಿಥಿ ಉಪನ್ಯಾಸಕರು ಅತಂತ್ರರಾಗಲಿದ್ದಾರೆ. 2021 ಡಿ.10ರಿಂದ 2022 ಜ.31ರವರೆಗೆ ಅತಿಥಿ ಉಪನ್ಯಾಸಕರು ಹೋರಾಟ ನಡೆಸಿದಾಗ, ಸರ್ಕಾರ ವಾರಕ್ಕಿದ್ದ 8 ಗಂಟೆ ಬೋಧನಾ ಅವಧಿಯನ್ನು 15 ಗಂಟೆಗೆ ಹೆಚ್ಚಿಸಿ, ಗೌರವ ಸಂಭಾವನೆಯನ್ನು ನಾಲ್ಕು ಹಂತಗಳಲ್ಲಿ ಪರಿಷ್ಕರಿಸಿತ್ತು. ಈ ಕಾರ್ಯಭಾರ ಹೆಚ್ಚಳದಿಂದ ಸುಮಾರು 4,500 ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡಿದ್ದರು. ಈಗ ನಿಯೋಜನೆ ರದ್ದಿನಿಂದ ಮತ್ತದೇ ಸ್ಥಿತಿ ತಲೆದೋರಿದೆ.
ಸರ್ಕಾರಿ ಪದವಿ ಕಾಲೇಜಿನ 900 ಪ್ರಾಧ್ಯಾಪಕರ ವರ್ಗಾವಣೆ, 1000ಕ್ಕೂ ಹೆಚ್ಚು ನಿಯೋಜನೆ ರದ್ದು ಹಾಗೂ 47 ಪ್ರಾಧ್ಯಾಪಕರ ಕಾರ್ಯಭಾರದ ಕೊರತೆ ಕಾರಣ ಸ್ಥಾನ ಪಲ್ಲಟದಿಂದ ಅತಿಥಿ ಉಪನ್ಯಾಸಕರ ಕೆಲಸಕ್ಕೆ ಕುತ್ತು ಬಂದಿರುವುದರ ಜತೆಗೆ 2-4-6 ಸೆಮಿಸ್ಟರ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಏಟು ಬೀಳಲಿದೆ.
ಹಠಾತ್ ಸಮಸ್ಯೆ ಏಕೆ?:ಕಾಲೇಜು ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಯನ್ನು ನಿಯಂತ್ರಿಸುವ ಸಲುವಾಗಿ ರೂಪಿಸಿರುವ ಕರ್ನಾಟಕ ನಾಗರಿಕ ಸೇವೆಗಳು ನಿಯಮ 2021 ಮತ್ತು ತಿದ್ದುಪಡಿ ನಿಯಮಗಳಲ್ಲಿ ಕಲ್ಪಿಸಿರುವ ಅವಕಾಶಗಳಂತೆ ಏ.29, 2022ರಲ್ಲಿ ಸಹ/ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ವರ್ಗಾವಣೆಗೊಂಡವರಿಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ನಿಯೋಜನೆ ಹಾಗೂ ಅನ್ಯ ಕಾರ್ಯ ನಿಮಿತ್ತ ನಿಯೋಜನೆ ರದ್ದುಪಡಿಸಿ, ಮಾತೃ ಕಾಲೇಜುಗಳಿಗೆ ಹಿಂದಿರುಗಲು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸರ್ಕಾರ ಪದೇಪದೆ ಅತಿಥಿ ಉಪನ್ಯಾಸಕರಿಗೆ ತೊಂದರೆ ಕೊಡುವುದು, ಶೈಕ್ಷಣಿಕ ವ್ಯವಸ್ಥೆಯನ್ನು ಗೊಂದಲಕ್ಕೆ ತಳ್ಳುವುದು, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವುದು ಸರಿಯಲ್ಲ.
|ಶಿವಾನಂದ ಕಲ್ಲೂರಪ್ರಧಾನ ಕಾರ್ಯದರ್ಶಿ, ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟ
ನಿಯೋಜನೆಯಲ್ಲಿದ್ದವರು ಮೂಲ ಸ್ಥಳಕ್ಕೆ ತೆರಳಿದರೆ ಅಲ್ಲಿದ್ದ ಬಹುತೇಕ ಅತಿಥಿ ಉಪನ್ಯಾಸಕರ ಕೆಲಸಕ್ಕೆ ಕತ್ತರಿ ಬೀಳುತ್ತದೆ. ಕಾಯಂ ಉಪನ್ಯಾಸಕರು ಸೂಚಿತ ಸ್ಥಳಕ್ಕೆ ತೆರಳಿ ಕೆಲಸ ಮಾಡುವುದು ಅನಿವಾರ್ಯ. ಆದರೆ ಅತಿಥಿ ಉಪನ್ಯಾಸಕರು ರಾಜ್ಯದ ಮೂಲೆ ಮೂಲೆಗೆ ತೆರಳಿ ಕೆಲಸ ಮಾಡುವುದು ಕಷ್ಟ. ಹಾಗಾಗಿ ಖಾಲಿ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನಿಸಿ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲು ಕನಿಷ್ಟ 2-3 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಇಲ್ಲವೇ ಮೆರಿಟ್ ಲಿಸ್ಟ್ ಆಧರಿಸಿ ಕೌನ್ಸೆಲಿಂಗ್ ನಡೆಸಿದರೂ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ.
ದೂರಾಲೋಚನೆ ಇಲ್ಲದ ಕ್ರಮ:ಶೈಕ್ಷಣಿಕ ವರ್ಷದ ಆರಂಭದಲ್ಲೇ ಅಂದರೆ ಅತಿಥಿ ಉಪನ್ಯಾಸಕರನ್ನು ನೇಮಕಕ್ಕೂ ಮೊದಲೇ ವರ್ಗಾವಣೆ/ ನಿಯೋಜನೆ ರದ್ದು ಮಾಡಿದ್ದರೆ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ಇರುತ್ತಿರಲಿಲ್ಲ. ಸರ್ಕಾರದ ದೂರಾಲೋಚನೆ ಇಲ್ಲದ ಕ್ರಮಗಳಿಂದ ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿಯೂ ನಿರ್ವಣವಾಗುತ್ತಿರಲಿಲ್ಲ!
ಬೆಂಗಳೂರು:ಸರ್ಕಾರಿ ಪದವಿ ಕಾಲೇಜುಗಳ ಬೋಧಕರ ನಿಯೋಜನೆ ರದ್ದು ಆದೇಶ ಸಚಿವ, ಶಾಸಕರು, ವಿಧಾನಪರಿಷತ್ ಸದಸ್ಯರ ಮಧ್ಯೆ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ವಿಧಾನಪರಿಷತ್ ದಕ್ಷಿಣ, ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಎಂಎಲ್ಸಿ ಧರಣಿ: ನಿಯೋಜನೆ ರದ್ದು ಆದೇಶ ವಾಪಸ್ ಹಾಗೂ 902 ಬೋಧಕರ ವರ್ಗಾವಣೆ ಕೈಬಿಡಲು ಜೆಡಿಎಸ್​ನ ಎಂಎಲ್ಸಿ ಮರಿತಿಬ್ಬೇಗೌಡ ಪಟ್ಟು ಹಿಡಿದಿದ್ದು, ವಿಕಾಸಸೌಧದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರ ಕೊಠಡಿ ಮುಂದೆ ಧರಣಿ ನಡೆಸಿದರು. ಶಾಸಕರ ಪ್ರಭಾವಕ್ಕೆ ಮಣಿದು 7-8 ವರ್ಷಗಳ ಹಿಂದೆ ಎರವಲು ಸೇವೆಗೆ ನಿಯೋಜಿಸಿರುವುದು ತಪು್ಪ. ಬೋಧಕರು ಮೂಲ ಸ್ಥಳದಲ್ಲಿ ಸೇವೆ ಸಲ್ಲಿಸುವುದಕ್ಕೆ ವಿರೋಧವಿಲ್ಲ ಎಂದು ಮರಿತಿಬ್ಬೇಗೌಡ ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಬೆಂಬಲ:ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ನೇತೃತ್ವದ ಕಾಂಗ್ರೆಸ್ ನಿಯೋಗ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮರಿತಿಬ್ಬೇಗೌಡರಿಗೆ ನೈತಿಕ ಬೆಂಬಲ ಸೂಚಿಸಿತು. ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಕಮಿಷನ್ ದಂಧೆಗೆ ಬಿಜೆಪಿ ಸರ್ಕಾರ ಕುಖ್ಯಾತಿ ಪಡೆದಿದ್ದು, ರಾತೋರಾತ್ರಿ ಬೋಧಕರ ನಿಯೋಜನೆ ರದ್ದು ಹಾಗೂ ವರ್ಗಾವಣೆಯಲ್ಲೂ ಕಮಿಷನ್ ದಂಧೆ ಊಹಾಪೋಹಗಳಿವೆ ಎಂದರು.
ಬಿಜೆಪಿ ಸಹಮತ: ನಿಯೋಜನೆ ರದ್ದು ಆದೇಶ ಹಿಂಪಡೆದು ಈ ಅಧ್ಯಾಪಕರನ್ನು ಮಾನವೀಯ ನೆಲೆಯಲ್ಲಿ ಮುಂದುವರಿಸಬೇಕು ಎಂದು ಆಡಳಿತ ಪಕ್ಷದ ಅರುಣ್ ಶಹಾಪುರ, ಪುಟ್ಟಣ್ಣ ಕೋರಿದ್ದಾರೆ. ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಜಂಟಿ ಯಾಗಿ ಸೋಮವಾರ ಮನವಿಪತ್ರ ಸಲ್ಲಿಸುವ ಮೂಲಕ ಮರಿತಿಬ್ಬೇಗೌಡರ ಬೇಡಿಕೆಗೆ ಸಹಮತ ವ್ಯಕ್ತ ಪಡಿಸಿದ್ದಾರೆ. ಸಚಿವರೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತವೆಂದು ಇಲಾಖೆ ಎಸಿಎಸ್ ಕುಮಾರನಾಯಕ್ ಮನವರಿಕೆ ಮಾಡಿ ಕೊಟ್ಟಿದ್ದರಿಂದ ಮರಿತಿಬ್ಬೇಗೌಡ ಧರಣಿ ಹಿಂಪಡೆದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪ ನ್ಯಾಸಕರ ನಿಯೋಜನೆ ರದ್ದುಪಡಿಸಲಾಗಿದೆ. ಮೂಲ ಕಾಲೇಜು ಗಳಿಗೆ ಕಳುಹಿಸುವಂತೆ ಮರಿತಿಬ್ಬೇಗೌಡರೂ ಸೇರಿ ಎಲ್ಲ ಪಕ್ಷಗಳ ಶಾಸಕರು ಅಧಿವೇಶನದಲ್ಲಿ ಆಗ್ರಹಿಸಿದ್ದರು.
|ಡಾ.ಸಿ.ಎನ್.ಅಶ್ವತ್ಥನಾರಾಯಣಉನ್ನತ ಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + three =
Remember me
