|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕರೊನಾ ಸಂಕಷ್ಟದ ಸಂದರ್ಭದಲ್ಲಿ ಒಂದು ಆರೋಗ್ಯಕರ ಸುದ್ದಿ. ಆರೋಗ್ಯ ಕ್ಷೇತ್ರದಲ್ಲಿ 20 ಸಾವಿರ ಹೊಸ ಉದ್ಯೋಗಗಳ ಸೃಷ್ಟಿಗೆ ಸರ್ಕಾರ ಮುಂದಾಗಿದೆ. ಹೆಚ್ಚಿನ ವೈದ್ಯಕೀಯ ತಂತ್ರಜ್ಞಾನದ ಅಗತ್ಯವಿಲ್ಲದ ವೈದ್ಯಕೀಯ ಉಪಕರಣಗಳ ನಿರ್ವಹಣೆ ಮಾಡುವಂತಹ ಕ್ಷೇತ್ರಗಳನ್ನು ಇದಕ್ಕಾಗಿ ಗುರುತಿಸಲಾಗಿದೆ.
ಕರೊನಾದಿಂದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ತಪ್ಪಿಹೋಗುತ್ತಿವೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸಲು ಮಾನವ ಸಂಪನ್ಮೂಲದ ಅಗತ್ಯ ಕಂಡುಕೊಂಡಿರುವ ಕೌಶಲ್ಯಾಭಿವೃದ್ಧಿ ನಿಗಮ ಅಂತಹದೊಂದು ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ಆರೋಗ್ಯ ಕ್ಷೇತ್ರದಲ್ಲಿ ಇರುವ ಮಾನವ ಸಂಪನ್ಮೂಲ ಕರೊನಾ ಎರಡೂ ಅಲೆಗಳ ಸಂದರ್ಭದಲ್ಲಿ ಬಿಡುವಿಲ್ಲದೆ ದುಡಿದು ಹೈರಾಣಾಗಿದೆ.
ಆದ್ದರಿಂದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಓದಿರುವ ಅಭ್ಯರ್ಥಿಗಳಿಗೆ ಆರೋಗ್ಯ ಕೌಶಲ ತರಬೇತಿ ನೀಡುವ ಮೂಲಕ ಅವರನ್ನು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಂಡರೆ ಸ್ಥಳೀಯವಾಗಿ ಉದ್ಯೋಗದ ಅವಕಾಶ ಒದಗಿಸಬಹುದೆಂದು ಕೌಶಲ್ಯಾಭಿವೃದ್ಧಿ ನಿಗಮ ಪ್ರಯತ್ನ ನಡೆಸಿದೆ. ವೈದ್ಯಕೀಯ ಉಪಕರಣಗಳ ನಿರ್ವಹಣೆ, ವೆಂಟಿಲೇಟರ್ ಅಳವಡಿಕೆ ಹಾಗೂ ನಿರ್ವಹಣೆ, ಮಕ್ಕಳ ವೆಂಟಿಲೇಟರ್​ಗಳ ಅಳವಡಿಕೆ ಹೀಗೆ ವಿವಿಧ ವಲಯಗಳಲ್ಲಿ ಕೌಶಲ ಪಡೆದ ಸಿಬ್ಬಂದಿ ಅಗತ್ಯ ಆರೋಗ್ಯ ಕ್ಷೇತ್ರದಲ್ಲಿರುವುದನ್ನು ಗುರುತಿಸಲಾಗಿದೆ.
ಕೋರ್ಸ್ ಶುರು?:ಈ ಎಲ್ಲ ವಿಷಯಗಳನ್ನು ಮುಂದಿನ ದಿನಗಳಲ್ಲಿ ಐಟಿಐ, ಡಿಪ್ಲೊಮಾ ತರಗತಿಗಳಲ್ಲಿ ಕೋರ್ಸ್ ಆರಂಭ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.
ನಿರಂತರ ಸಭೆ:ಯುವಕರಿಗೆ ಉದ್ಯೋಗಾವಕಾಶದ ವಿವಿಧ ತರಬೇತಿ ನೀಡುವ ಕೌಶಲಾಭಿವೃದ್ಧಿ ನಿಗಮ, ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಮಾನವ ಸಂಪನ್ಮೂಲದ ಕೊರತೆ ನಿವಾರಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿದೆ. ನಂತರ ಯಾವ ಯಾವ ವಲಯದಲ್ಲಿ ಉದ್ಯೋಗದ ಅವಕಾಶಗಳು ಲಭ್ಯ ಇವೆ, ಯಾವ ರೀತಿಯ ಕೌಶಲದ ತರಬೇತಿ ಅಗತ್ಯವಿದೆ ಎಂಬುದನ್ನು ಮನಗಂಡಿದೆ. ಅದಕ್ಕೆ ತಕ್ಕಂತೆ ತರಬೇತಿಯ ರೂಪುರೇಷೆ ಸಿದ್ಧಪಡಿಸಿಕೊಂಡಿದೆ.
6 ಸಾವಿರ ಜನರಿಗೆ ತರಬೇತಿ:ಡಿಎಚ್​ಒಗಳು, ಖಾಸಗಿ ಆಸ್ಪತ್ರೆಗಳ ಜತೆ ನಡೆಸಿದ ಚರ್ಚೆಯ ಸಂದರ್ಭದಲ್ಲಿ 20 ಸಾವಿರ ತಾಂತ್ರಿಕ ಸಿಬ್ಬಂದಿ ಅಗತ್ಯ ಆರೋಗ್ಯ ಕ್ಷೇತ್ರಕ್ಕೆ ಇದೆ ಎಂಬುದನ್ನು ನಿಗಮ ಮನಗಂಡಿದೆ. ಕರೊನಾ ಮೂರನೇ ಅಲೆ ಅಪ್ಪಳಿಸಿದರೆ ಇನ್ನೂ ಎಷ್ಟು ಸಿಬ್ಬಂದಿ ಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡಿ ಡಿಎಚ್​ಒಗಳು ಸಲ್ಲಿಸಿರುವ ವರದಿಯನ್ನು ಆಧರಿಸಿ ಈ ಸಂಖ್ಯೆ ನಿಗದಿ ಮಾಡಲಾಗಿದೆ. ಮೊದಲ ಹಂತದಲ್ಲಿ ಆರು ಸಾವಿರ ಜನರನ್ನು ತರಬೇತಿಗೊಳಿಸಲಾಗುತ್ತದೆ.
ಜೂ.10ರಂದು ಆರಂಭ:ಯುವಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಲು ಖಾಸಗಿ ಆಸ್ಪತ್ರೆಗಳ ಜತೆ ಕೌಶಲ್ಯಾಭಿವೃದ್ಧಿ ನಿಗಮ ಮಾತುಕತೆ ನಡೆಸಿದೆ. ತರಬೇತಿ ಮಾತ್ರವಲ್ಲದೆ ಅಲ್ಲಿಯೇ ಉದ್ಯೋಗ ಅವಕಾಶ ಲಭ್ಯವಾಗಲಿವೆ. ಮೊದಲ ಹಂತದ 6 ಸಾವಿರ ಜನರಿಗೆ ಜೂ.10 ರಿಂದ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಆರಂಭವಾಗಲಿದೆ. ಜಿಲ್ಲೆಗೆ 350 ಜನರಂತೆ ಗುರುತಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಆಸಕ್ತಿಯಿಂದ ಆಯ್ಕೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ಕೌಶಲ ನಿಗಮದ ಕಚೇರಿಯಲ್ಲಿ ನೋಂದಾಯಿತರಲ್ಲಿಯೂ ಆಯ್ಕೆ ಮಾಡಲಾಗಿದೆ. ಗಂಟೆಗೆ 40 ರೂ.ನಂತೆ ವೆಚ್ಚವಾಗಲಿದ್ದು, ಅದನ್ನು ಸರ್ಕಾರದಿಂದಲೇ ಭರಿಸಲಾಗುತ್ತದೆ. 21 ದಿನಗಳ ಕಾಲ ತರಗತಿ ಇದ್ದರೆ 3 ತಿಂಗಳ ಕಾಲ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಿವಿಧ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿ ರೀತಿಯಲ್ಲಿ ಪಠ್ಯ ಸಿದ್ಧಪಡಿಸಲಾಗಿದೆ.
ಕ್ಷೇತ್ರಕ್ಕೊಂದು ಆಸ್ಪತ್ರೆ:ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 100 ಹಾಸಿಗೆಗಳ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ, ಆ ಮೂಲಕ ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿದೆ. ಅದಕ್ಕಾಗಿ ಜಾಗ ಗುರುತಿಸುವಂತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಇಂದು ನಿರ್ಧಾರ:ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು -ಠಿ;5000 ಸ್ಟೈಫಂಡ್ ನೀಡುವ ಬಗ್ಗೆಯೂ ಸೋಮವಾರದ ಸಭೆಯಲ್ಲಿ ತೀರ್ವನವಾಗಲಿದೆ.
ಆರೋಗ್ಯ ಕ್ಷೇತ್ರದಲ್ಲಿ ಹೊಸ ಉದ್ಯೋಗ ಗುರುತಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ. 20 ಸಾವಿರ ಜನರಿಗೆ ಉದ್ಯೋಗದ ಅವಕಾಶ ತೆರೆದುಕೊಳ್ಳಲಿವೆ.
|ಡಾ. ಸಿಎನ್. ಅಶ್ವತ್ಥನಾರಾಯಣಡಿಸಿಎಂ
ಬೇರೆ ಬೇರೆ ಕ್ಷೇತ್ರಗಳಲ್ಲಿ ಕೌಶಲ ತರಬೇತಿ ನೀಡಿ ಯುವಕರನ್ನು ಸಜ್ಜುಗೊಳಿಸುತ್ತಿದ್ದೆವು. ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಗಮನ ಹರಿಸುವಂತೆ ಸೂಚನೆ ನೀಡಿದ್ದರಿಂದ ಅದರಲ್ಲಿ ಆರು ವಲಯ ಗುರುತಿಸಿ ತರಬೇತಿ ನೀಡುತ್ತಿದ್ದೇವೆ.
|ಅಶ್ವಿನ್ ಗೌಡವ್ಯವಸ್ಥಾಪಕ ನಿರ್ದೇಶಕ ಕೌಶಲ್ಯಾಭಿವೃದ್ಧಿ ನಿಗಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eighteen =
Remember me
