| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ತನಿಖೆಗಾಗಿ ನೇಮಕವಾಗಿರುವ ವಿಶೇಷ ತನಿಖಾ ದಳ ದೊಡ್ಡ ಪ್ರಮಾಣದ ಭ್ರಷ್ಟಾಚಾರವನ್ನು ಪತ್ತೆ ಹಚ್ಚಬೇಕಾಗಿದೆ. ಆದರೆ ಸಮಯಾವಕಾಶದ ಕೊರತೆ ಇರುವುದರಿಂದ ಸತ್ಯಾಂಶ ಎಷ್ಟರ ಮಟ್ಟಿಗೆ ಹೊರಬರಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರ 2014-15ರಲ್ಲಿಯೇ ವಿಶೇಷ ತನಿಖಾ ದಳ ರಚನೆ ಮಾಡಿತ್ತು. ಆದರೆ ತನಿಖಾ ದಳ 2018ರಿಂದ ಇತ್ತೀಚೆಗೆ ನಿಷ್ಕ್ರಿಯವಾಗುತ್ತ ಹೋಗಿತ್ತು. ಹಿಂದೆ ತನಿಖಾ ದಳವೇ ದೊಡ್ಡ ಪ್ರಮಾಣದಲ್ಲಿ ಕಬ್ಬಿಣ ಅದಿರು ಅಕ್ರಮವಾಗಿ ರಫ್ತಾಗಿರುವುದನ್ನು ಗುರುತಿಸಿತ್ತು. ತನಿಖಾ ದಳ ಈಗ ತಾನೇ ಗುರುತಿಸಿದ್ದ ಅಕ್ರಮಗಳ ವಿರುದ್ಧ ಕಡಿಮೆ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ನವಮಂಗಳೂರು, ಮರ್ಮಗೋವಾ, ಪಣಜಿ, ಚೆನ್ನೈ, ಕೃಷ್ಣಪಟ್ಣಂ ಸೇರಿ ವಾಣಿಜ್ಯ ಬಂದರುಗಳ ಮೂಲಕ ಕಬ್ಬಿಣ ಅದಿರು ಹೊರ ಹೋಗಿದೆ. 172 ಪ್ರಕರಣಗಳು ನಡೆದಿದ್ದವು. ಕೆಲವು ತನಿಖೆ ಮುಗಿದಿವೆ. ಸುಪ್ರೀಂಕೋರ್ಟ್ ವಹಿಸಿದ್ದ ಪ್ರಕರಣಗಳ ತನಿಖೆ ಬಾಕಿ ಇದೆ. ಲೋಕಾಯುಕ್ತರು ಸಲ್ಲಿಸಿದ್ದ ವರದಿಯ ಪ್ರಕಾರ 12 ರಾಜಕಾರಣಿಗಳು, ವಿವಿಧ ಇಲಾಖೆಗಳ 797 ಅಧಿಕಾರಿ ಮತ್ತು ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿದ್ದರು.
ಆಸ್ತಿ ಮುಟ್ಟುಗೋಲು ಇಲ್ಲ:ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸರ್ಕಾರದಲ್ಲಿ ರಚನೆಯಾಗಿದ್ದ ಸಚಿವ ಸಂಪುಟ ಉಪ ಸಮಿತಿಯು ಎಸ್​ಐಟಿ ತನಿಖೆಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಧಾರಗಳನ್ನು ಮಾಡಿತ್ತು. ಅಕ್ರಮದಲ್ಲಿ ಭಾಗಿಯಾದವರ ಒಂದು ಸಾವಿರ ಬ್ಯಾಂಕ್ ಖಾತೆ, ಒಂದು ನೂರಕ್ಕೂ ಹೆಚ್ಚು ಆಸ್ತಿಯನ್ನು ಗುರುತಿಸಿತ್ತು. ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಚರ್ಚೆಯೂ ನಡೆದಿತ್ತು. ಅಂದಾಜು 60 ಸಾವಿರ ಕೋಟಿ ರೂ.ಗಳಷ್ಟು ಬ್ಯಾಂಕ್ ಖಾತೆ ಮೊತ್ತ ಹಾಗೂ ಆಸ್ತಿಯನ್ನು ಗುರುತಿಸಲಾಗಿತ್ತು. ಆದರೆ ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ನಡೆಯಲಿಲ್ಲ. ಹಿಂದಿನ ಸರ್ಕಾರದಲ್ಲಿ ಸಚಿವ ಸಂಪುಟ ಉಪ ಸಮಿತಿ ಎರಡು ಸಭೆಗಳನ್ನು ಮಾತ್ರ ನಡೆಸಿತ್ತು, ಆದರೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಮೂಲಗಳು ಹೇಳುತ್ತವೆ.
ವರದಿಗಳು ಬಾಕಿಅದಿರು ಮೌಲ್ಯಮಾಪನ ಸಮಿತಿಯ ಮುಂದೆ ಮೌಲ್ಯಮಾಪನ ಕಾರ್ಯದ ವರದಿಗಳು ಬಾಕಿ ಇವೆ. ಅದು ವಿಲೇವಾರಿ ಆದ ನಂತರವಷ್ಟೇ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಾಗುತ್ತದೆ. ಆದ್ದರಿಂದಲೇ ಎಸ್​ಐಟಿಗೆ ಅತ್ಯಂತ ಚುರುಕಾಗಿ ಕೆಲಸ ಮಾಡಲು ಸರ್ಕಾರ ಎಲ್ಲ ಸೌಕರ್ಯ ಒದಗಿಸಿಕೊಡಬೇಕಾಗುತ್ತದೆ. ಎಸ್​ಐಟಿಗೆ ಮತ್ತೆ ಅವಧಿ ವಿಸ್ತರಣೆಗೆ ಅವಕಾಶ ಇಲ್ಲದಂತೆ ಸರ್ಕಾರ ಸಹಕಾರ ನೀಡಿದರೆ ಮಾತ್ರ ತನಿಖೆ ಪೂರ್ಣವಾಗಿ ಅಕ್ರಮ ಹೊರ ಬರಲು ಸಾಧ್ಯವಾಗುತ್ತದೆ.
ಎಸ್​ಐಟಿಗೆ ಇರುವ ಅವಧಿ?ಎಸ್​ಐಟಿ ಮುಂದೆ ತನಿಖೆಯ ದೊಡ್ಡ ಜವಾಬ್ದಾರಿ ಇದೆ. ಆದರೆ ಸಮಯ ಕಡಿಮೆ ಇದೆ. ಎಸ್​ಐಟಿಯ ಅವಧಿಯನ್ನು 2024ರ ಜೂನ್ 30ರ ತನಕ ವಿಸ್ತರಣೆ ಮಾಡಲಾಗಿದೆ. ಅಂದರೆ ಎಸ್​ಐಟಿಗೆ ಇರುವ ಅವಧಿ ಕೇವಲ 7 ತಿಂಗಳು. ಅದರಲ್ಲೂ ಐದು ತಿಂಗಳಲ್ಲಿ ಚಾರ್ಜ್​ಶೀಟ್ ಹಾಕಬೇಕಾಗಿದೆ. ವಿವಿಧ ಇಲಾಖೆಗಳಿಂದ ಒಂದು ತಿಂಗಳಲ್ಲಿ ಮಾಹಿತಿ ಪಡೆದುಕೊಳ್ಳಬೇಕಾಗಿದೆ.
ಸಿಬ್ಬಂದಿ ಕೊಡಬೇಕುಎಸ್​ಐಟಿಗೆ ಸರ್ಕಾರದಿಂದ ಸಿಬ್ಬಂದಿ ಒದಗಿಸಬೇಕಾಗಿದೆ. ಹಿಂದೆ 700 ಸಿಬ್ಬಂದಿಯನ್ನು ನೀಡಲಾಗಿತ್ತು. ಅದರ ಜತೆಗೆ ಗಣಿ ಇಲಾಖೆಯಿಂದ ಉಪ ನಿರ್ದೇಶಕರು, ಗೃಹ ಇಲಾಖೆಯಿಂದ ಡಿವೈಎಸ್​ಪಿ ಹಾಗೂ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯಿಂದ ಡಿಸಿಎಫ್ ದರ್ಜೆಯ ಅಧಿಕಾರಿಯನ್ನು ಎಸ್​ಐಟಿಗೆ ತಕ್ಷಣ ನೀಡಬೇಕಾಗಿದೆ. ಸಚಿವ ಸಂಪುಟದಲ್ಲಿ ತೀರ್ವನವಾಗಿ ವಾರ ಕಳೆಯುತ್ತ ಬಂದರೂ ಇನ್ನೂ ಸಿಬ್ಬಂದಿ ನೀಡುವ ಕಡೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆಯೇ ಹೋಗಿಲ್ಲ. ಸಿಬ್ಬಂದಿ ಒದಗಿಸುವುದು ತಡವಾದರೆ ಅವಧಿಯೊಳಗೆ ತನಿಖೆ ಪೂರ್ಣಗೊಳಿಸುವುದು ಕಷ್ಟದ ಕೆಲಸವಾಗಲಿದೆ.
ಎಷ್ಟಾಗಿದೆ ಅಕ್ರಮ?ಲೋಕಾಯುಕ್ತರು ಸಲ್ಲಿಸಿದ್ದ ವರದಿಯ ಪ್ರಕಾರ, 300 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿದೆ. ಎಸ್​ಐಟಿಗೆ 96 ಸಾವಿರ ಮೆಟ್ರಿಕ್ ಟನ್​ನ ಮಾಹಿತಿ ಸಿಕ್ಕಿತ್ತು. ಲೋಕಾಯುಕ್ತರು ಅಂದಾಜು ಮಾಡಿದ್ದ ಪ್ರಕಾರ 16 ಸಾವಿರ ಕೋಟಿ ರೂ.ಗಳು ಅಕ್ರಮ ನಡೆದಿದೆ. ಎಸ್​ಐಟಿ ತನಿಖೆಗೆ ಕೈಗೆತ್ತಿಕೊಂಡಿದ್ದ 91 ಪ್ರಕರಣಗಳಲ್ಲಿ 31 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿದೆ. 50 ಸಾವಿರ ಟನ್​ಗಿಂತ ಕಡಿಮೆ ಪ್ರಮಾಣದ ಅದಿರು ಸರಬರಾಜು ಪ್ರಕರಣಗಳನ್ನು ಮಾತ್ರ ತನಿಖೆಗೆ ಒಳಪಡಿಸಲಾಗಿದೆ. ತನಿಖೆ ಮುಕ್ತಾಯ ಪ್ರಕರಣಗಳ ಪ್ರಕಾರ 15,72,047.49 ಮೆಟ್ರಿಕ್ ಟನ್ ಅಕ್ರಮವಾಗಿ ರಫ್ತಾಗಿದೆ. ಅದರ ಮೌಲ್ಯ 2,32,57,21,743.29 ರೂ.ಗಳೆಂದು ಅಂದಾಜಿಸಲಾಗಿದೆ. ಈ ಅಕ್ರಮಕ್ಕೆ ಕಾರಣವಾ ದವರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸುವ ಕಾರ್ಯವನ್ನು ಎಸ್​ಐಟಿ ಮಾಡಬೇಕಾಗಿದೆ.
ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಲೋಕಾಯುಕ್ತ ಎಂಟ್ರಿ

ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್; 994 ಕೇಸ್ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 10 =
Remember me
