ನವದೆಹಲಿ: ಕಾಫಿ ಡೇ ಕಂಪನಿಯ ಲೆಕ್ಕಪತ್ರದಿಂದ  2,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ಕಂಪನಿಯ ಆಡಳಿತ ಮಂಡಳಿ ಈ ಕುರಿತು ಸದ್ಯದಲ್ಲೇ ತನಿಖೆ ಪೂರ್ಣಗೊಳಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ಜುಲೈನಲ್ಲಿ ಸಂಸ್ಥೆಯ ಮಾಲೀಕ ವಿ.ಜಿ. ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಹಲವು ತಿಂಗಳ ಕಾಲ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗಿದೆ. ಕಾಫಿ ಡೇ ಹಲವು ಕಂಪನಿಗಳ ಜತೆ ನಡೆಸುತ್ತಿದ್ದ ವಹಿವಾಟು ಮತ್ತು ಸಿದ್ಧಾರ್ಥರ ವೈಯಕ್ತಿಕ ಹಣಕಾಸು ವಹಿವಾಟು, ದೂರವಾಣಿ ಮತ್ತು ಮೊಬೈಲ್ ಕರೆ, ಇ ಮೇಲ್ ಸಂವಹನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಈ ವೇಳೆ  2,000 ಕೋಟಿ ರೂ.ಗೂ ಅಧಿಕ ಮೊತ್ತ ಲೆಕ್ಕಪತ್ರದಿಂದ ಕಣ್ಮರೆಯಾಗಿದೆ ಎಂದು ತನಿಖೆಯಲ್ಲಿ ನಮೂದಿಸಲಾಗಿದೆ ಎಂದು ಮೂಲಗಳು ಮಾಹಿತಿ ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ತನಿಖಾ ವರದಿ ಆರಂಭಿಕ ಹಂತದಲ್ಲಿದೆ ಹೊರತು ಅಂತಿಮ ಗೊಂಡಿಲ್ಲ. ಕರಡು ವರದಿಯಲ್ಲಿ ಏನು ನಮೂದಾಗಿದೆ ಎಂಬ ಬಗ್ಗೆ ಸಂಸ್ಥೆ ಮತ್ತು ಸಂಸ್ಥೆಯ ಆಡಳಿತ ಮಂಡಳಿಗೆ ಮಾಹಿತಿ ಇಲ್ಲ. ಹೀಗಾಗಿ
ಈ ಬಗ್ಗೆ ಹೇಳಿಕೆ ನೀಡುವುದು ಅವಸರವಾಗುತ್ತದೆ ಎಂದು ಕಾಫಿ ಡೇ ವಕ್ತಾರರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಳಿಯ ಸಿದ್ಧಾರ್ಥ (59) ಕಳೆದ ಜುಲೈ 29ರ ಸಂಜೆ ಮಂಗಳೂರು ಬಳಿಯ ನೇತ್ರಾವತಿ ಸೇತುವೆ ಬಳಿ ಕಣ್ಮರೆಯಾಗಿದ್ದರು. ಅವರ ಶವ ಜುಲೈ 31ರಂದು ಅಳಿವೆ (ನದಿ ಸಮುದ್ರಕ್ಕೆ ಸೇರುವ ಸ್ಥಳ) ಬಳಿ ಪತ್ತೆಯಾಗಿತ್ತು. ವಿಪರೀತ ಸಾಲ, ತೆರಿಗೆ ತಪ್ಪಿಸಿದ ಪ್ರಕರಣ, ವ್ಯಾಪಾರದಲ್ಲಿ ನಷ್ಟದ ಒತ್ತಡದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಂಪನಿಯ ದುರವಸ್ಥೆಗೆ ತಾವೇ ಹೊಣೆ ಎಂಬ ಪತ್ರವನ್ನು ಅವರು ಬರೆದಿದ್ದರು. ಕೆಫೆ ಕಾಫಿ ಡೇ ಸಂಸ್ಥೆ
ದೇಶ, ವಿದೇಶಗಳಲ್ಲಿ 1,500ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಸಿದ್ಧಾರ್ಥ ಸಾವಿನ ನಂತರ ಕಂಪನಿಯ ಷೇರು ಶೇ.90 ಕುಸಿತ ಕಂಡ ಕಾರಣ ಫೆಬ್ರವರಿಯಲ್ಲಿ ಷೇರು ವಹಿವಾಟು ಸ್ಥಗಿತಗೊಂಡಿದೆ.
ತನಿಖೆಗೆ ಸಹಕಾರ:ಸಿದ್ಧಾರ್ಥ ಅವರ ಕುಟುಂಬದವರು ಹಾಗೂ ಪ್ರವರ್ತಕರು ಕಂಪನಿಯ ವ್ಯಾಪಾರವನ್ನು ಅವರ ಸಾವಿನ ನಂತರವಷ್ಟೆ ನಿರ್ವಹಿಸುತ್ತಿದ್ದಾರೆ ಮತ್ತು ಸಿದ್ಧಾರ್ಥ ಸಾವಿನ ತನಿಖೆ ಬಗ್ಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ಕಾಫಿ ಡೇ ಸಮೂಹದ ಸಾಲದ ಪ್ರಮಾಣವನ್ನು ನಿರ್ವಹಿಸುವಮಟ್ಟಕ್ಕೆ ತರಲಾಗಿದೆ. ಹೂಡಿಕೆದಾರ ಹಿತಾಸಕ್ತಿ ಮತ್ತು ಉದ್ಯೋಗಿಗಳ ರಕ್ಷಣೆ ಕಂಪನಿಯ ಮೊದಲ ಆದ್ಯತೆ ಆಗಿದೆ ಎಂದು ಕಾಫಿ ಡೇ ಹಿರಿಯ ಅಧಿಕಾರಿ ಬಿ.ಶೇಖರ್ ತಿಳಿಸಿದ್ದಾರೆ.
ಕಾಫಿ ತೋಟ ಮಾರಾಟಕ್ಕೆ?
ಸಾಲ ಮರುಪಾವತಿಗಾಗಿ 10 ಸಾವಿರ ಎಕರೆಯ ಕಾಫಿ ತೋಟ ಸೇರಿ ಅನೇಕ ವೈಯಕ್ತಿಕ ಆಸ್ತಿಗಳನ್ನು ಮಾರಾಟ ಮಾಡಲು ಸಿದ್ಧಾರ್ಥ ಅವರ ಕುಟುಂಬ ನಿರ್ಧರಿಸಿದೆ ಎಂದೂ ವರದಿಯಾಗಿದೆ. ಈ ಕುರಿತಂತೆ ಮಾತುಕತೆ ಕೂಡ ನಡೆಸುತ್ತಿದೆ. ಕಾಫಿ ತೋಟದ ಮೌಲ್ಯ 1,500ರಿಂದ 2,000 ಕೋಟಿ  ರೂ. ಎಂದು ಅಂದಾಜಿಸಲಾಗಿದೆ.
ಈ ಸಿನಿಮಾ ಟೆಕ್ಕಿಗಳಿಂದ ಟೆಕ್ಕಿಗಳಿಗಾಗಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
