|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯವನ್ನು ಕಳೆದ ಎರಡು ಮೂರು ವರ್ಷ ಕಾಡಿದ ಆರ್ಥಿಕ ಸಂಕಷ್ಟ ಹಿಂದಿನ ಹಣಕಾಸು ವರ್ಷದಲ್ಲಿ ಕೊನೆಯಾಗಿದ್ದು, ವೆಚ್ಚಕ್ಕಿಂತ ಜಮೆ ಹೆಚ್ಚಾದ ಪರಿಣಾಮ ರಾಜ್ಯ ಆರ್ಥಿಕವಾಗಿ ಸುಭಿಕ್ಷ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಗುರಿ ಮೀರಿ ಆಗಿರುವ ತೆರಿಗೆ ಸಂಗ್ರಹಣೆ, ಕೇಂದ್ರ ಸರ್ಕಾರದಿಂದಲೂ ಉತ್ತಮ ಸ್ಪಂದನೆ, ನಿಗದಿತ ಗುರಿಗಿಂತ ಮಾಡಿರುವ ಹೆಚ್ಚುವರಿ ಸಾಲದ ಪರಿಣಾಮ ಹಣಕಾಸಿನ ವಿಚಾರದಲ್ಲಿ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಮಾರ್ಚ್ ಅಂತ್ಯಕ್ಕೆ ಕೊನೆಯಾದ ಹಣಕಾಸು ವರ್ಷದಲ್ಲಿ ಗುರಿ ಮೀರಿ ಖರ್ಚು ಮಾಡಿಯೂ ಸರ್ಕಾರದಲ್ಲಿ 20,567 ಕೋಟಿ ರೂ. ಉಳಿತಾಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಜೆಟ್ ಘೋಷಣೆಯಲ್ಲಿ ಖರ್ಚಾಗದೆ ಉಳಿಯುವ ಪರಂಪರೆ ಇದೆ. ಆದರೆ, ಕಳೆದ ವರ್ಷ ತೆರಿಗೆ ಸಂಗ್ರಹಣೆ ಸೇರಿ ವಿವಿಧ ಮೂಲಗಳಿಂದ ಸಂಗ್ರಹ ಜಾಸ್ತಿಯಾಗಿರುವುದು ವಿಶೇಷವಾಗಿದೆ.
ಎಷ್ಟು ಜಮೆ, ಎಷ್ಟು ವೆಚ್ಚ?:ರಾಜ್ಯದ ಸ್ವಂತ ತೆರಿಗೆ, ತೆರಿಗೆಯೇತರ ಆದಾಯ, ಕೇಂದ್ರದ ತೆರಿಗೆ ಹಂಚಿಕೆ, ಕೇಂದ್ರದ ಸಹಾಯಧನ, ಸಾರ್ವಜನಿಕ ಸಾಲ ಸೇರಿ ಒಟ್ಟಾರೆ 2,74,672 ಕೋಟಿ ರೂ. ಗಳನ್ನು ಸರ್ಕಾರ ಸಂಗ್ರಹಿಸಿದೆ. ರಾಜಸ್ವ ವೆಚ್ಚ, ಬಡ್ಡಿ ಪಾವತಿ, ಬಂಡವಾಳ ವೆಚ್ಚ ಸೇರಿ ಒಟ್ಟಾರೆ 2,54,105 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆದ್ದರಿಂದ 20,567 ಕೋಟಿ ರೂ. ಸರ್ಕಾರದ ಖಜಾನೆಯಲ್ಲಿಯೇ ಉಳಿದಿದೆ. ಸರ್ಕಾರ 2021-22ರ ಬಜೆಟ್ ರೂಪಿಸಿದಾಗ ಜಮೆಗಿಂತ ವೆಚ್ಚ ಹೆಚ್ಚಳ ಮಾಡಿ 12 ಸಾವಿರ ಕೋಟಿ ರೂ. ಉಳಿತಾಯವಾಗಬಹುದೆಂದು ನಿರೀಕ್ಷೆ ಮಾಡಿತ್ತು. ಆದರೆ, ಗುರಿ ಮೀರಿ ಮಾಡಿದ ಸಾಧನೆಯಿಂದ 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಉಳಿತಾಯ ಮಾಡಿದಂತಾಗಿದೆ. ಕರೊನಾದಿಂದ ತತ್ತರಿಸಿದ್ದ ಆರ್ಥಿಕ ವ್ಯವಸ್ಥೆ ಕಳೆದ ಹಣಕಾಸು ವರ್ಷದ ಕೊನೆಯ ಆರು ತಿಂಗಳಿನಲ್ಲಿ ಚೇತರಿಸಿಕೊಂಡಿತ್ತು. ಅದರಲ್ಲೂ ಕೊನೆಯ ತ್ರೖೆಮಾಸಿಕದಲ್ಲಿ ಚಟುವಟಿಕೆಗಳು ಭರದಿಂದ ನಡೆದವು. ಹೀಗಾಗಿ ಗುರಿಗಿಂತ ಶೇ.107.1 ತೆರಿಗೆ ಸಂಗ್ರಹಣೆ ಸಾಧ್ಯವಾಯಿತು.

ಬಾಕಿ ತೀರುವಳಿ:ಸರ್ಕಾರಕ್ಕೆ ಆದಾಯ ಹೆಚ್ಚಿನ ಪ್ರಮಾಣದಲ್ಲಿ ಬಂದ ಪರಿಣಾಮ ನೀರಾವರಿ, ಲೋಕೋಪಯೋಗಿ ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಪಾವತಿಯೂ ಆಗಿದೆ. ಅದರಲ್ಲೂ ಸಣ್ಣ ಗುತ್ತಿಗೆದಾರರಿಗೆ ಆದ್ಯತೆಯ ಮೇರೆಗೆ ಬಾಕಿ ಪಾವತಿ ಮಾಡಲಾಗಿದೆ. ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಅಂದಾಜು 40 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಬಾಕಿ ತೀರುವಳಿಯಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಸಾಲ ಹೆಚ್ಚಳ:ರಾಜ್ಯ ಸರ್ಕಾರ 2021-22ನೇ ಆಯವ್ಯಯದಲ್ಲಿ 71,332 ಕೋಟಿ ರೂ. ಸಾಲ ಮಾಡಲು ಉದ್ದೇಶಿಸಿತ್ತು. ಆದರೆ 80,633 ಕೋಟಿ ರೂ.ಗಳ ಸಾಲ ಮಾಡಿರುವುದನ್ನು ಆರ್ಥಿಕ ಇಲಾಖೆಯ ಅಂಕಿ-ಅಂಶಗಳೇ ಹೇಳುತ್ತವೆ.
ಕೇಂದ್ರದ ಸ್ಪಂದನೆ:ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸು ತ್ತಿಲ್ಲ ಎಂಬುದು ಸರ್ವೆ ಸಾಮಾನ್ಯ ದೂರಾಗಿತ್ತು. ಅಂತಹ ಆರೋಪ ಸ್ವಲ್ಪಮಟ್ಟಿಗೆ ನಿಜವೂ ಆಗಿತ್ತು. ಆದರೆ, ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ಹಂಚಿಕೆಯಲ್ಲಿ ಶೇ.137.1 ರಷ್ಟು ಹಾಗೂ ಸಹಾಯಧನಗಳಲ್ಲಿ ಶೇ.106.1 ಸಾಧನೆ ಯನ್ನು ಕೇಂದ್ರ ಸರ್ಕಾರ ಮಾಡಿದೆ. ಜಿಎಸ್​ಟಿ ಬಾಕಿ ಸಹ ಪಾವತಿ ಮಾಡಿದೆ.
ಕಡಿಮೆಯಾಗದ ವಿತ್ತೀಯ ಕೊರತೆ:ಜಮೆ ಮತ್ತು ಖರ್ಚು ತೂಗಿಸಲು ಮಾಡುವ ಹೆಚ್ಚುವರಿ ಸಾಲವೇ ವಿತ್ತೀಯ ಕೊರತೆ. ತೆರಿಗೆ ಸಂಗ್ರಹಣೆ, ಕೇಂದ್ರದ ನೆರವು ಇದ್ದರೂ ಸಹ ವಿತ್ತೀಯ ಕೊರತೆಯ ಪ್ರಮಾಣ ಮಾತ್ರ ಕಡಿಮೆಯಾಗದಿರುವುದು ಆತಂಕಕ್ಕೂ ಕಾರಣವಾಗಿದೆ. 59,240 ಕೋಟಿ ರೂ.ಗಳ ವಿತ್ತೀಯ ಕೊರತೆಯನ್ನು ಮೊದಲು ಅಂದಾಜು ಮಾಡಲಾಗಿತ್ತು. ಆದರೆ ಅದು ಹೆಚ್ಚುವರಿ ಸಾಲದ ಪರಿಣಾಮವಾಗಿ 60,066 ಕೋಟಿ ರೂ.ಗಳಿಗೆ ತಲುಪಿದೆ. ಆದರೆ, ರಾಜಸ್ವ ಕೊರತೆ ಪ್ರಮಾಣ ತಗ್ಗಿದೆಯಾದರೂ ಸರ್ಕಾರದಲ್ಲಿ ಇರಬೇಕಾದ ರಾಜಸ್ವ ಉಳಿತಾಯಕ್ಕೆ ಇನ್ನೂ ಬಂದಿಲ್ಲ. ರಾಜಸ್ವ ಕೊರತೆ 15,134 ಕೋಟಿ ರೂ.ಗಳಾಗಬಹುದೆಂಬ ಅಂದಾಜು ಇತ್ತು. ಅದು 5,245 ಕೋಟಿ ರೂ.ಗಳಿಗೆ ನಿಂತಿದೆ. ಪ್ರಾಥಮಿಕ ಕೊರತೆಯ ಪ್ರಮಾಣ 32,079 ಕೋಟಿ ರೂ.ಗಳಿಂದ 37,748 ಕೋಟಿ ರೂ.ಗಳಿಗೆ ತಲುಪಿದೆ.
ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
