ರಾಜ್ಯದ ಪಾಲಿಗೆ 2020 ಅತ್ಯಂತ ಕೆಟ್ಟ ವರ್ಷವಾಗಿ ಬಾಧಿಸಿದೆ. ವರ್ಷದುದ್ದಕ್ಕೂ ಸಂಪುಟ ವಿಸ್ತರಣೆ, ಪುನಾರಚನೆ ವಿಷಯ ಸದ್ದು ಮಾಡಿತು. ಇದರ ನಡುವೆ ಪ್ರವಾಹ ರಾಜ್ಯವನ್ನು ಮತ್ತಷ್ಟು ನಡುಗಿಸಿದರೆ, ಹತ್ತು ತಿಂಗಳಿಗೂ ಹೆಚ್ಚು ಕಾಡಿದ ಕರೊನಾದಿಂದಾಗಿ ಆರ್ಥಿಕ ಕುಂಠಿತದೊಂದಿಗೆ ಅಭಿವೃದ್ಧಿ ಮರೀಚಿಕೆಯಾಯಿತು.
ಸಂಪುಟ ಸರ್ಕಸ್ಕಳೆದ ವರ್ಷ ಉಪ ಚುನಾವಣೆಯಲ್ಲಿ ಗೆದ್ದ ವಲಸಿಗರು ಸಂಪುಟ ಸೇರುವುದಕ್ಕೆ ವರ್ಷದ ಆರಂಭದೊಂದಿಗೆ ಕಸರತ್ತು ಪ್ರಾರಂಭವಾಗಿತ್ತು. ಕೊಟ್ಟ ಮಾತು ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಸ್ ಮಾಡಬೇಕಾಯಿತು. ಸಂಪುಟ ಪುನಾರಚನೆಯ ಮಾತೂ ಕೇಳಿಬಂತು. ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಫೆಬ್ರವರಿಯಲ್ಲಿ ಒಪ್ಪಿತಾದರೂ ಕೇವಲ 10 ಜನರಿಗೆ ಅವಕಾಶ ನೀಡಿತು. ವಲಸಿಗರಲ್ಲಿ ಹತ್ತು ಜನರಿಗೆ ಅವಕಾಶ ಸಿಕ್ಕರೆ ಉಳಿದವರ ಕಣ್ಣು ಕೆಂಪಗಾಗಿಸಿತ್ತು. ಸಂಪುಟದಲ್ಲಿ ಏಳು ಸ್ಥಾನಗಳು ಖಾಲಿ ಉಳಿದಿದ್ದು, ಹೈಕಮಾಂಡ್ ಯಾವ ಕಾರಣಕ್ಕೆ ಭರ್ತಿಗೆ ಅವಕಾಶ ನೀಡುತ್ತಿಲ್ಲ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಸಂಪುಟ ಸೇರಲು ಕಾತರಿಸುತ್ತಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ವಿಷಯ ಆಗಾಗ ಕೇಳಿ ಬರುತ್ತಲೇ ಇದೆ. ಬಿಜೆಪಿ ಹೈಕಮಾಂಡ್​ನ ನಡೆಯೇ ಇದಕ್ಕೆ ಕಾರಣ. ಇದರಿಂದ ಆಡಳಿತದ ಮೇಲೆ ಪರಿಣಾಮವಾಗಿರುವುದು ಸುಳ್ಳೇನಲ್ಲ.
ರಾಷ್ಟ್ರ ಮಟ್ಟದ ಮಾನ್ಯತೆಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ರಾಜ್ಯದ ಮುಖಂಡರಿಗೆ ರಾಷ್ಟ್ರ ಮಟ್ಟದ ಮಾನ್ಯತೆ ಸಿಕ್ಕಿದ್ದು ವಿಶೇಷ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯಗೆ ಅವಕಾಶ ಸಿಕ್ಕರೆ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸ್ ನೇಮಕವಾಗಿದ್ದಾರೆ. ಬಿಜೆಪಿಯಲ್ಲಿ ಸಿ.ಟಿ. ರವಿ ಪ್ರಧಾನ ಕಾರ್ಯದರ್ಶಿಯಾದರೆ, ಸಂಸದ ರಾಜೀವ್ ಚಂದ್ರಶೇಖರ್​ಗೆ ಮಾಧ್ಯಮ ವಿಭಾಗದಲ್ಲಿ ಅವಕಾಶ ಲಭ್ಯವಾಗಿದೆ. ಕಾಂಗ್ರೆಸ್​ನಲ್ಲಿ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಐವಾನ್ ಡಿಸೋಜಾ, ಪಿ.ವಿ. ಮೋಹನ್ ವಿವಿಧ ಹುದ್ದೆಗಳನ್ನು ಪಡೆದಿದ್ದಾರೆ. ತಮಿಳುನಾಡಿನ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಉಸ್ತುವಾರಿ ರಾಜ್ಯದವರ ಕೈಯಲ್ಲಿರುವುದು ವಿಶೇಷ. ಕಾಂಗ್ರೆಸ್​ನಲ್ಲಿ ದಿನೇಶ್ ಗುಂಡೂರಾವ್ ಹಾಗೂ ಬಿಜೆಪಿಯಲ್ಲಿ ಸಿ.ಟಿ. ರವಿ ಉಸ್ತುವಾರಿಗಳಾಗಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್​ನಿಂದ ಐವಾನ್ ಡಿಸೋಜಾ ಹಾಗೂ ಮೋಹನ್, ಬಿಜೆಪಿಯಲ್ಲಿ ಸುನೀಲ್​ಕುಮಾರ್ ಸಹ ಉಸ್ತುವಾರಿಗಳಾಗಿದ್ದಾರೆ.
ಮನೆಯೇ ಪಾಠಶಾಲೆ, ಮೊಬೈಲೇ ಗುರುವುಕರೊನಾದಿಂದಾಗಿ ಇಡೀ ವರ್ಷ ಶಾಲೆಗಳು ಆರಂಭವಾಗಲಿಲ್ಲ. ಆನ್​ಲೈನ್ ತರಗತಿ, ಶುಲ್ಕ ಪಾವತಿ ಕುರಿತಂತೆ ಇಡೀ ವರ್ಷ ಚರ್ಚೆಗಳು ನಡೆದವು. 1ರಿಂದ 9ನೇ ತರಗತಿಯವರೆಗೆ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ತೇರ್ಗಡೆ. ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಆಗಸ್ಟ್ ನಲ್ಲಿ ‘ವಿದ್ಯಾಗಮ’ ಯೋಜನೆ ಜಾರಿ. ಶಿಕ್ಷಕರ ವರ್ಗಾವಣೆಗೆ ಹೊಸ ನಿಯಮ ಜಾರಿ. ಅರ್ಜಿ ಸಲ್ಲಿಕೆಗೆ ಅವಕಾಶ.
ವಿಶೇಷ ಪ್ಯಾಕೇಜ್ಕರೊನಾದ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಬಿಎಸ್​ವೈ ಮಾನ ವೀಯತೆ ತೋರಿ ಲಾಕ್​ಡೌನ್​ನಿಂದಾಗಿ ತೊಂದರೆಗೆ ಒಳಗಾದ ಸವಿತಾ ಸಮಾಜ, ಮಡಿವಾಳ ಸಮಾಜ, ಹೂವು ಬೆಳೆಗಾರರು, ಖಾಸಗಿ ವಾಹನ ಚಾಲಕರು, ಮೆಕ್ಕೆಜೋಳ ಬೆಳೆಗಾರರಿಗೆ ಸಹಾಯಹಸ್ತ ಚಾಚಿದರು. ಶಾಸಕರ ಭತ್ಯೆ ಕಡಿಮೆ ಮಾಡಿದರೆ ಹೊರತು ಸರ್ಕಾರಿ ನೌಕರರ ವೇತನ ಕಡಿಮೆ ಮಾಡಲಿಲ್ಲ. ಕೇಂದ್ರದ ಮಾದರಿಯಲ್ಲಿ ಡಿಎ ತಡೆಹಿಡಿದರು.
ಸಾರಿಗೆ ಹೆಚ್ಚು ಬಾಧಿತಕರೊನಾದಿಂದಾಗಿ ಸಂಚಾರ ಸ್ಥಗಿತವಾಗಿದ್ದ ಸಾರಿಗೆ ಕ್ಷೇತ್ರದಲ್ಲಿ, ಸರ್ಕಾರಿ ನೌಕರರನ್ನಾಗಿಸುವ ಕುರಿತಂತೆ ಸಾರಿಗೆ ನೌಕರರು ವರ್ಷಾಂತ್ಯದ ನಾಲ್ಕು ದಿನ ನಡೆಸಿದ ಮುಷ್ಕರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿತ್ತು, ಸರ್ಕಾರದ ಭರವಸೆ ನಂತರ ಮುಷ್ಕರ ಹಿಂಪಡೆಯಲಾಯಿತು.
ಏಳುಬೀಳಿನ ನಡುವೆ ಸಾಂಸ್ಕೃತಿಕ ಚಲನೆವರ್ಷಪೂರ್ತಿ 22ಕ್ಕೂ ಹೆಚ್ಚು ಜಯಂತಿಗಳನ್ನು ಆಚರಣೆ ಮಾಡುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಹುತೇಕ ಕಾರ್ಯಕ್ರಮಗಳು ಸಾಂಕೇತಿಕವಾಗಿ ನಡೆದವು. ್ಝರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ರಾಜ್ಯದ ಕಲಾವಿದರಿಗೆ ತಲಾ -ಠಿ; 2 ಸಾವಿರ ನೀಡಲಾಯಿತು. ಅನೇಕ ಸಂಘಸಂಸ್ಥೆಗಳು ಅಶಕ್ತ ಕಲಾವಿದರಿಗೆ ಆಹಾರ ಕಿಟ್, ಔಷಧ ನೀಡುವ ಕಾರ್ಯ ಮಾಡಿದವು. ್ಝನ್ನಡವನ್ನು ಆಡಳಿತ ಸೇರಿ ಎಲ್ಲ ರಂಗಗಳಲ್ಲೂ ಅಗ್ರಗಣ್ಯವಾಗಿಸಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಕಾಯಕ ವರ್ಷಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ್ಝಂಪ ಪ್ರಶಸ್ತಿಗೆ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ, ನೃಪತುಂಗ ಪ್ರಶಸ್ತಿಗೆ ಹಿರಿಯ ವಿಮರ್ಶಕ ಡಾ. ಜಿ.ಎಸ್. ಆಮೂರ ಆಯ್ಕೆಯಾದರು. ಆದರೆ ಅನಾರೋಗ್ಯಕ್ಕೊಳಗಾಗಿದ್ದ ಆಮೂರರು, ಪ್ರಶಸ್ತಿ ಸ್ವೀಕರಿಸುವ ಮುನ್ನವೇ 2020ರ ಸೆ.28ರಂದು ನಿಧನರಾದರು. ್ಝಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ಕೃಷಿ ಇಲಾಖೆ ಇಟ್ಟುಕೊಂಡಿದ್ದ 73 ಲಕ್ಷ ಹೆಕ್ಟೇರ್ ಪ್ರದೇಶದ ಮುಂಗಾರು ಬಿತ್ತನೆ ಗುರಿಯಲ್ಲಿ ಶೇ.106 ಸಾಧನೆ.
ಆರೋಗ್ಯ ಕ್ಷೇತ್ರವೇ ಕೇಂದ್ರಬಿಂದು
ಕುಸಿದ ಅಭಿವೃದ್ಧಿದೇಶಕ್ಕೆ ಮಾರ್ಚ್ ತಿಂಗಳಿನಲ್ಲಿ ಕಾಲಿಟ್ಟ ಕರೊನಾ ರಾಜ್ಯದಲ್ಲಿಯೂ ವರ್ಷದ ಕೊನೆಯ ತನಕ ಕಾಡಿತು. ಕರೊನಾದಿಂದಾಗಿ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಈ ವರ್ಷ ತೆರಿಗೆ ವಸೂಲಿ ಸುಮಾರು 40 ಸಾವಿರ ಕೋಟಿ ರೂ.ಗಳಷ್ಟು ಕಡಿಮೆಯಾಗಿ ಎಲ್ಲ ಇಲಾಖೆಗಳಿಗೂ ಅನುದಾನ ಕಡಿತವಾಗಿ ಅಭಿವೃದ್ಧಿ ಕುಂಠಿತ ವಾಗಿದೆ. ಜಿಎಸ್​ಡಿಪಿಯ ಶೇ.2ರಷ್ಟು ಹೆಚ್ಚುವರಿ ಸಾಲಕ್ಕೆ ಕೇಂದ್ರ ಸರ್ಕಾರದಿಂದ ಷರತ್ತುಬದ್ಧ ಅನುಮತಿ ಸಿಕ್ಕಿತು. ಅದರ ಪರಿಣಾಮ ಸುಮಾರು 40 ಸಾವಿರ ಕೋಟಿ ರೂ. ಸಾಲಕ್ಕೆ ಅವಕಾಶ ಲಭ್ಯವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಆದಾಯ ಹೆಚ್ಚಳಕ್ಕೆ ತೆರಿಗೆಗಳು ಹೆಚ್ಚಳವಾಗಿವೆ. ವಿದ್ಯುತ್ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ.
ಎರಡು ಅವಿಶ್ವಾಸಗಳುಈ ವರ್ಷ 2 ಅವಿಶ್ವಾಸಗಳು ವಿಧಾನಮಂಡಲದಲ್ಲಿ ಮಂಡನೆ ಯಾದವು. ಮುಖ್ಯಮಂತ್ರಿ ಕುಟುಂಬದ, ಅವರ ಪುತ್ರನ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ಮಂಡಿಸಿತ್ತು. ಆದರೆ ಬಿಜೆಪಿ ಸಂಖ್ಯಾಬಲ ಇದ್ದುದರಿಂದ ಯಡಿಯೂರಪ್ಪ ಸುಲಭವಾಗಿ ವಿಶ್ವಾಸ ಗೆದ್ದರು.
ಕಟೀಲ್, ಡಿಕೆಶಿ ನೇಮಕಕಾಂಗ್ರೆಸ್, ಬಿಜೆಪಿ ಈ ವರ್ಷ ಕರ್ನಾಟಕದಲ್ಲಿ ಹೊಸ ಅಧ್ಯಕ್ಷರನ್ನು ಕಂಡಿವೆ. ಬಿಜೆಪಿಯ ಅಧ್ಯಕ್ಷರಾಗಿ ನಳೀನ್​ಕುಮಾರ್ ಕಟೀಲ್ ಜನವರಿಯಲ್ಲಿ ನೇಮಕವಾದರೆ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮಾರ್ಚ್​ನಲ್ಲಿ ನೇಮಕವಾದರು.
ಕಾಡಿದ ಪ್ರವಾಹಪ್ರವಾಹ ಈ ವರ್ಷವೂ ರಾಜ್ಯವನ್ನು ಕಾಡಿತು. ಕಳೆದ ವರ್ಷ ಸುಮಾರು 35 ಸಾವಿರ ಕೋಟಿ ರೂ.ಗಳ ನಷ್ಟವಾದರೆ, ಈ ವರ್ಷ 25 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಕೇಂದ್ರದಿಂದ ನಿಯಮಗಳ ಪ್ರಕಾರ ಕಳೆದ ವರ್ಷಕ್ಕೆ 3500 ಕೋಟಿ ರೂ. ಬರಬೇಕಿತ್ತು. ಆದರೆ ಬಂದಿದ್ದು 1600 ಕೋಟಿ ರೂ. ಮಾತ್ರ. ಈ ವರ್ಷದ್ದು ಇನ್ನೂ ಬಂದಿಲ್ಲ. ಜಿಎಸ್ಟಿ ಪರಿಹಾರ, 15ನೇ ಹಣಕಾಸು ಆಯೋಗ ಹೀಗೆ ವಿವಿಧ ಹಂತಗಳಲ್ಲಿ ರಾಜ್ಯ ಅನ್ಯಾಯವನ್ನೇ ಎದುರಿಸಿದೆ.
ಇತರ ಮುಖ್ಯ ಘಟನೆಗಳು
ಸದ್ದು ಮಾಡಿದ ಕಾಯ್ದೆಗಳುಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಯಾರು ಬೇಕಾದರೂ ಭೂಮಿ ಖರೀದಿ ಮಾಡಲು ಅವಕಾಶ ನೀಡಿದ್ದು, ಕೇಂದ್ರದ ಕಾಯ್ದೆಯ ಆಧಾರದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದು ವಿಧಾನಸಭೆಯಲ್ಲಿ ಪಾಸಾದರೂ ಪರಿಷತ್​ನಲ್ಲಿ ಅನುಮೋದನೆಯಾಗಿರಲಿಲ್ಲ. ಸುಗ್ರೀವಾಜ್ಞೆ ಮೂಲಕ ಎರಡು ಬಾರಿ ಜಾರಿ ಮಾಡಿದ್ದು ವಿಶೇಷ. ಗೋಹತ್ಯೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಲವ್ ಜಿಹಾದ್ ತಡೆ ಕಾಯ್ದೆ ತರಲು ಸಿದ್ಧತೆ ನಡೆದಿದೆ.
ಪರಿಷತ್​ನಲ್ಲಿ ಕೋಲಾಹಲವಿಧಾನ ಪರಿಷತ್​ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ತಂದ ಸಂದರ್ಭದಲ್ಲಿ ನಡೆದ ವಿದ್ಯಮಾನ ಕಪು್ಪಚುಕ್ಕೆಯಾಯಿತು. ಸಭಾಪತಿ ಸದನಕ್ಕೆ ಬರುವುದನ್ನೇ ತಡೆಯಲಾಯಿತು. ಉಪ ಸಭಾಪತಿಯನ್ನು ಬಲವಂತವಾಗಿ ಪೀಠದಲ್ಲಿ ಕೂರಿಸಲಾಯಿತು. ಅವರನ್ನು ಎಳೆದು ಹಾಕಲಾಯಿತು.
ಜಾತಿ ನಿಗಮ ಸ್ಥಾಪನೆವೀರಶೈವ ಲಿಂಗಾಯತ ನಿಗಮ ಮಾಡಿ 500 ಕೋಟಿ ರೂ. ಮೀಸಲಿಡ ಲಾಗಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಈಗ ಹಲವು ಜಾತಿಗಳಿಂದ ನಿಗ ಮಕ್ಕೆ ಬೇಡಿಕೆ ಬಂದಿದೆ.
ವಿಜಯೇಂದ್ರ ಪ್ರವರ್ಧಮಾನಕ್ಕೆಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ಇದೇ ವರ್ಷ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದರು. ಶಿರಾ ಉಪ ಚುನಾವಣೆ ಉಸ್ತುವಾರಿ ವಹಿಸಿ ಗೆಲುವು ಸಾಧಿಸಿದರು. ಇದೀಗ ಅವರಿಗೆ ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಬಹು ಬೇಡಿಕೆ ಬಂದಿದೆ.
ಗಣ್ಯರ ನಿಧನಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಶಾಸಕರಾದ ನಾರಾಯಣರಾವ್ ಕರೊನಾದಿಂದಾಗಿ ನಿಧನರಾದರೆ ಶಾಸಕ ಬಿ. ಸತ್ಯನಾರಾಯಣ ಅನಾರೋಗ್ಯದಿಂದ ನಿಧನರಾದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
