ಬೆಂಗಳೂರುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಕರ ದಿನಾಚರಣೆ ಅಂಗವಾಗಿ 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದೆ.
ಪ್ರಾಥಮಿಕ ಶಾಲೆಯ 20 ಮತ್ತು ಪ್ರೌಢಶಾಲೆಯ 11 ಮಂದಿ ಸೇರಿ 31 ಶಿಕ್ಷಕರು, ಇಬ್ಬರು ಪ್ರಾಂಶುಪಾಲರು ಮತ್ತು 8 ಮಂದಿ ಉಪನ್ಯಾಸಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಹಿಳಾ ಶಿಕ್ಷಕಿಯರಿಗೆ ‘ಸಾವಿತ್ರಿಬಾಪುಲೆ’ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಲಿರುವ ಪ್ರತಿ ಶಿಕ್ಷಕರಿಗೆ ಇಲ್ಲಿಯವರೆಗೂ 10 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿತ್ತು. ಈ ವರ್ಷದಿಮದ 25 ಸಾವಿರ ನಗದು ಪುರಸ್ಕಾರ ನೀಡಲಾಗುತ್ತದೆ. ಪ್ರಶಸ್ತಿಯನ್ನು ಸೆ.5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರಂಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಮ್ಮ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಾಥಮಿಕ ಶಾಲೆ ವಿಭಾಗ:ೌಜಿಯ ಸರವತ್- ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದಾಪುರ, ಹೊಸನಗರ ತಾ. ಶಿವಮೊಗ್ಗ ಜಿಲ್ಲೆ,, ಮಂಜುನಾಥ- ಶಿಕ್ಷಕ, ಸಕಿಪ್ರಾ ಶಾಲೆ ಮಾರಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಸತೀಶ್ ಬಿ.ಕೆ.- ಶಿಕ್ಷಕ, ಸಹಿಪ್ರಾ ಶಾಲೆ, ಬಸವನಕೋಟೆ, ಜಗಳೂರು, ದಾವಣಗೆರೆ, ಸುಜಾತ ಎಂ.ಜೆ.- ಶಿಕ್ಷಕಿ, ಸಹಿಪ್ರಾ ಶಾಲೆ. ನೆಲಮಂಗಲ, ಬೆಂ.ಗ್ರಾಮಾಂತರ, ಮೊಹಮ್ಮದ್ ಹಾಶೀಮಸಾಬ ಹುಸೇನಸಾಬ- ಶಿಕ್ಷಕ, ಸಹಿಪ್ರಾ ಶಾಲೆ ನಿಡಗುಂದಿ ಎನ್.ಟಿ., ಬಸವನ ಬಾಗೇವಾಡಿ, ವಿಜಯಪುರ, ಪ್ರತಾಪ ಶಂಕರ ಜೋಡಟ್ಟಿ-ಶಿಕ್ಷಕ, ಕನ್ನಡ ಸಹಿಕಿಪ್ರಾ ಶಾಲೆ, ಕಪ್ಪಲಗುಡ್ಡಿ ಟಿಒಟಿ, ರಾಯಭಾಗ, ಚಿಕ್ಕೋಡಿ, ಮೊಹಮ್ಮದ್ ಹುಸೇನ ಅಬ್ದುಲ್ ಖಾದರ- ಮುಖ್ಯ ಶಿಕ್ಷಕ, ಉರ್ದು ಸಹಿಪ್ರಾ ಶಾಲೆ ನವನಗರ, ಬಾಗಲಕೋಟೆ, ಮಾತಾಂಡಪ್ಪ ತೆಳಗೇರಿ-ಶಿಕ್ಷಕ, ಸಕಿಪ್ರಾ ಶಾಲೆ, ಕಪ್ಪರಗಾಂವ, ಹುಮ್ನಾಬಾದ್, ಬೀದರ್, ಅಕ್ಷತಾ ಅನಿಲ ಬಾಸಗೋಡ- ಶಿಕ್ಷಕ, ಸಹಿಪ್ರಾ ಶಾಲೆ ಅಣಸಿ, ಜೋಡಿಡಾ, ಶಿರಸಿ, ಶೇಕಪ್ಪ ಭೀಮಪ್ಪ ಕೇಸರಿ- ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ, ಮುರಕಟ್ಟಿ, ಧಾರವಾಡ, ಭಾಸ್ಕರ- ಶಿಕ್ಷಕ, ಸಕಿಪ್ರಾ ಶಾಲೆ ಅಡಗನಹಳ್ಳಿ, ಕೆ.ಆರ್.ನಗರ, ಮೈಸೂರು, ಎ.ಬಿ. ಮೂರ್ತಿ- ಶಿಕ್ಷಕ, ಸಹಿಪ್ರಾ ಶಾಲೆ ರುದ್ರಪಟ್ಟಣ, ಅರಕಲಗೂಡು, ಹಾಸನ, ಎಂ.ಆರ್. ವನಜಾಕ್ಷಮ್ಮ- ಶಿಕ್ಷಕಿ, ಸಹಿಪ್ರಾ ಶಾಲೆ ಹರಗಿನಡೋಣಿ, ಬಳ್ಳಾರಿ ಪಶ್ಚಿಮ, ಬಳ್ಳಾರಿ, ಸೈಯದಾ ಸಾಜೀದಾ ಾತೀಮಾ- ಶಿಕ್ಷಕಿ, ಸಹಿಪ್ರಾ ಶಾಲೆ, ಯರಮರಸ್, ರಾಯಚೂರು, ಪ್ರಶಾಂತ ಜಿ.- ಶಿಕ್ಷಕ, ಸಕಿಪ್ರಾ ಶಾಲೆ, ಎಂ. ಹೊಸೂರು, ನಾಗಮಂಗಲ, ಮಂಡ್ಯ, ವಿ. ವೀರಪ್ಪ- ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ ಗೋಪಿನಾಥಂ, ಹನೂರು, ಚಾಮರಾಜನಗರ, ಗಂಗಾಧರ ಎಂ.ಜಿ.- ಶಿಕ್ಷಕ, ಸಹಿಪ್ರಾ ಶಾಲೆ ಗುಬ್ಬಿ, ತುಮಕೂರು, ಪೂರ್ಣೇಶ್ ಬಿ.ಟಿ.- ಶಿಕ್ಷಕ, ಸಹಿಪ್ರಾ ಶಾಲೆ, ಬೋಯಕೇರಿ, ಮಡಿಕೇರಿ, ಕೊಡಗು, ಸೋಮಪ್ಪ ಕ್ಕಿರಪ್ಪ ಕಠಾರಿ- ಶಿಕ್ಷಕ, ಸಕಿಪ್ರಾ ಶಾಲೆ ದ್ಯಾಮನಕೊಪ್ಪ, ಹಾನಗಲ್, ಹಾವೇರಿ.
ಪ್ರೌಢಾಶಾಲಾ ವಿಭಾಗ:ಪ್ರಕಾಶ ನಾಯ್ಕ- ಆಂಗ್ಲ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಚಿತ್ತಾರ, ಹೊನ್ನಾವರ, ಉತ್ತರ ಕನ್ನಡ, ಸುರೇಶ್ ಬಿ. ಮುಗಳಿ- ಆಂಗ್ಲ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ವೀರಾಪೂರ, ಧಾರವಾಡ, ನಾಗಭೂಷಣ್ ಕೆ.ಟಿ.- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ರೇಖಲಗೆರೆ, ಚಳ್ಳಕೆರೆ, ಚಿತ್ರದುರ್ಗ, ರೇಣುಕಾರಾಜ್ ಜಿ.ಎಚ್.- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಅರಸೀಕೆರೆ, ಪಾವಗಡ, ಮಧುಗಿರಿ, ರಜನಿ ಜಿ.ಸಿ- ಕನ್ನಡ ಶಿಕ್ಷಕಿ, ಸರ್ಕಾರಿ ಪಿಯು ಕಾಲೇಜು, ವಿ.ಸಿ. ಾರಂ, ಮಂಡ್ಯ, ಬಸಪ್ಪ ಇಂದಿರಾ ಪಿ.ಜಿ.- ವಿಜ್ಞಾನ ಶಿಕ್ಷಕಿ, ಕೆಪಿಎಸ್ ಹೆಬ್ಬಾಳ, ಬೆಂ.ಉತ್ತರ ವಲಯ-2, ವಿಜಯ ಆನಂದರಾವ್- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ತ್ಯಾಗರ್ತಿ,ಸಾಗರ, ಶಿವಮೊಗ್ಗ, ಹರ್ಷ ಎಸ್- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಹೆಡತಲೆ, ನಂಜನಗೂಡು, ಮೈಸೂರು, ನರೇಂದ್ರ- ಕಲಾ ಶಿಕ್ಷಕ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಬ್ರಹ್ಮಾವರ, ಉಡುಪಿ, ಶ್ರೀಶೈಲ ಸ ಗಸ್ತಿ- ಚಿತ್ರಕಲೆ ( ವಿಶೇಷ ಶಿಕ್ಷಕ), ಜಾಧವ ಜೆ ಆನಂದ ಜೆ ಹಿರಿಯ ಮಾಧ್ಯಮಿಕ ಶಾಲೆ, ಅಥಣಿ, ಚಿಕ್ಕೋಡಿ.
ಪ್ರಾಂಶುಪಾಲರ ವಿಭಾಗ:ಮಂಜುನಾಥ್ ಭಟ್- ಸರ್ಕಾರಿ ಪಿಯು ಕಾಲೇಜು, ಹಿರಿಯಡ್ಕ, ಉಡುಪಿ, ಸುಕುಮಾರ- ಸರ್ಕಾರಿ ಪಿಯು ಕಾಲೇಜು, ಬೆಳ್ತಂಗಡಿ, ದಕ್ಷಿಣ ಕನ್ನಡ.
ಉತ್ತಮ ಉಪನ್ಯಾಸಕ:ಡಾ. ಗೋಪಾಲ್ ಜಿ.ವಿ- ಇತಿಹಾಸ ವಿಭಾಗ, ಸರ್ಕಾರಿ ಪಿಯು ಕಾಲೇಜು, ಯಲ್ಲಾಪುರ, ತುಮಕೂರು, ಡಾ. ಪ್ರಭಾಕರ್ ಎನ್- ರಾಜ್ಯಶಾಸ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಬಸವನಗುಡಿ, ಬೆಂ.ದಕ್ಷಿಣ, ಪಾಂಡುರಂಗ ಎನ್. ಕಾಮತ್- ಹಿಂದಿ, ಸಪಿಯು ಕಾಲೇಜು, ಶಹಾಪುರ, ಬೆಳಗಾವಿ, ಪಾಟೀಲ್ ಮಾರುತಿ ಲಕ್ಷ್ಮಣ್- ಭೌತಶಾಸ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಜಮಖಂಡಿ, ಬಾಗಲಕೋಟೆ, ರಜಿಯಾ ಕೊಕತನೂರ್- ಭೌತಶಾಸ, ಸರ್ಕಾರಿ ಪಿಯು ಕಾಲೇಜು, ವಿಜಾಪುರ, ಬಸವರಾಜ್ ವಿ. ಕುಂಬಾರ- ಗಣಿತ, ಸರ್ಕಾರಿ ಪಿಯು ಕಾಲೇಜು, ಹೊನ್ನುಟಗಿ, ವಿಜಾಪುರ, ಗಿರೀಶ್ ಎಚ್.ಎನ್- ಜೀವಶಾಸ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಹುಣಸೂರು, ಶರಣಪ್ಪ ಕೆ ಹುಲಗೇರಿ- ಇತಿಹಾಸ, ಸರ್ಕಾರಿ ಪಿಯು ಕಾಲೇಜು, ಹುನಗುಂದ, ಬಾಗಲಕೋಟೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
