‘ನಮ್ಮ 200 ಗಂಟೆಗಳ ಆನ್​ಲೈನ್ ಯೋಗಶಿಕ್ಷಕರ ತರಬೇತಿಯು ನಿಮ್ಮ ಅಭ್ಯಾಸ ಮತ್ತು ಯೋಗದ ತಿಳಿವಳಿಕೆ ಉತ್ಕೃಷ್ಟಗೊಳಿಸಲು ಅವಕಾಶ ಒದಗಿಸುತ್ತದೆ. ವಿವರವಾದ ವಿಡಿಯೋಗಳು, ಪುಸ್ತಕಗಳು ಮತ್ತು ಉಪನ್ಯಾಸಗಳ ಮೂಲಕ ಯೋಗತತ್ತ ್ವ ಶಾಸ್ತ್ರ ಮತ್ತು ಅಭ್ಯಾಸಕ್ಕಾಗಿ ಈ ಸಮಗ್ರ ್ಗಖ (ಯೋಗ ಟೀಚರ್ಸ್ ಟ್ರೇನಿಂಗ್) ನಿಮಗೆ ಅಡಿಪಾಯ ನೀಡುತ್ತದೆ.
ಭಾರತೀಯ ಸಮಯ: 10.30ರಿಂದ ಮಧ್ಯಾಹ್ನ 1.30ರವರೆಗೆ’. ವೆಬ್​ಸೈಟ್ ಒಂದರಲ್ಲಿ ಇರುವ ಮಾಹಿತಿ ಆನ್​ಲೈನ್ ಮೂಲಕ ನೀಡಬಹುದಾದ ತರಬೇತಿ ಹಾಗೂ ಅದರಿಂದ ಗಳಿಸಬಹುದಾದ ಆದಾಯ ಸಾಧ್ಯತೆಗಳತ್ತ ಬೆಳಕು ಚೆಲ್ಲುತ್ತದೆ. ಇಂತಹ ಕೋರ್ಸ್​ಗಳ ಮೂಲಕ ತರಬೇತಿ ಪಡೆದವರು ಕೂಡ ಆನ್​ಲೈನ್​ನಲ್ಲಿ ತರಬೇತಿ ನೀಡುವ ಕೋರ್ಸ್ ಆರಂಭಿಸುವ ಮೂಲಕ ಆದಾಯಮೂಲವನ್ನು ಕಂಡುಕೊಳ್ಳಬಹುದು. ಆನ್​ಲೈನ್​ನಲ್ಲಿ ವಿಚಾರ ಸಂಕಿರಣಗಳನ್ನು ವೆಬಿನಾರ್ ಎಂದೇ ಕರೆಯಲಾಗುತ್ತದೆ.
ವಿವಿಧ ಕ್ಷೇತ್ರಗಳ ಪರಿಣತರು ಸಾಮಾನ್ಯವಾಗಿ ವೆಬಿನಾರ್​ಗಳನ್ನು ಆಯೋಜಿಸುತ್ತಾರೆ. ಉದಾಹರಣೆಗೆ- ಷೇರು ಮಾರುಕಟ್ಟೆಯ ಹೂಡಿಕೆ ತಜ್ಞರು. ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕು, ಹೇಗೆ ಲಾಭ ಗಳಿಸಬೇಕು ಎಂಬ ವಿಷಯಗಳ ಮೇಲೆ ತಜ್ಞರು ಬೆಳಕು ಚೆಲ್ಲುತ್ತಾರೆ. ಇವುಗಳಲ್ಲಿ ಲೈವ್ ವೆಬಿನಾರ್​ಗಳು ಕೂಡ ಇದ್ದು, ವೆಬಿನಾರ್​ಗಳಲ್ಲಿ ಪಾಲ್ಗೊಳ್ಳುವವರಿಗೆ ರ್ಚಚಿಸಲು, ಪ್ರಶ್ನೆ ಕೇಳಲು, ಅನುಮಾನಗಳನ್ನು ನಿವಾರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಇಂತಹ ವೆಬಿನಾರ್​ಗಳಲ್ಲಿ ಪಾಲ್ಗೊಳ್ಳುವವರಿಂದ ಶುಲ್ಕ ಪಡೆದುಕೊಳ್ಳಲಾಗುತ್ತದೆ. ಮೌಲ್ಯಯುತ ಮತ್ತು ಆಕರ್ಷಕವಾಗಿರುವ ವಿಷಯವನ್ನು ಒದಗಿಸಿದರೆ, ಜನರು ಅದಕ್ಕೆ ಪಾವತಿಸಲು ಸಿದ್ಧರಿರುತ್ತಾರೆ.
ಉದ್ಯಮದ ಮಾಹಿತಿ ಪ್ರಕಾರ, ಪ್ರತಿ ವೆಬಿನಾರ್​ಗೆ ಸರಾಸರಿ ಗಳಿಕೆಯು 41 ಸಾವಿರದಿಂದ 2.5 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಂತೂ ಆನ್​ಲೈನ್ ತರಗತಿ ದೊಡ್ಡ ಉದ್ಯಮವೇ ಆಗಿದೆ. ಇ-ಲರ್ನಿಂಗ್ ಮಾರುಕಟ್ಟೆ ಗಾತ್ರ 2020ರಲ್ಲಿ 300 ಶತಕೋಟಿ ಡಾಲರ್ (25 ಲಕ್ಷ ಕೋಟಿ ರೂ.) ಮೀರಿದೆ. ಅಲ್ಲದೆ, 2021 ಮತ್ತು 2026ರ ನಡುವೆ ವಾರ್ಷಿಕವಾಗಿ ಶೇಕಡ 8ರಷ್ಟು ಬೆಳೆಯುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಆದಾಯದ ಮಾರ್ಗಫಿಟ್ನೆಸ್, ಆರೋಗ್ಯ, ಆಹಾರ ತಯಾರಿಕೆ, ಪಾಲಕತ್ವ, ಕ್ಷೇಮ, ಸಂಬಂಧ, ಸೌಂದರ್ಯ, ಪ್ರೇರಣೆ, ವ್ಯಕ್ತಿತ್ವ ವಿಕಸನ ಶಿಬಿರ, ಹೂಡಿಕೆ, ಕಾನೂನು ಸಲಹೆ, ವೈದ್ಯಕೀಯ ಸಲಹೆ, ಭಾಷಾ ಕಲಿಕೆ… ಹೀಗೆ ಆನ್​ಲೈನ್ ತರಬೇತಿ- ಶಿಬಿರ ಆಯೋಜಿಸಬಹು ದಾದ ಕ್ಷೇತ್ರಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕಾದಾಗ ಗೂಗಲ್ ಮಾಡುವುದಷ್ಟೇ ಅಲ್ಲದೆ ಆ ಕುರಿತು ಹೆಚ್ಚಿನ ಅರಿವು ಪಡೆಯಲು ನಿಗದಿತ ಶುಲ್ಕ ಕೊಟ್ಟು ತರಬೇತಿಯನ್ನೂ ಪಡೆಯಬಹುದು. ನಮ್ಮ ಪರಿಣತಿಯ ಕ್ಷೇತ್ರಗಳಲ್ಲಿ ನಾವೇ ತರಬೇತಿಯನ್ನೂ ನೀಡಬಹುದು. ‘ಯೂಡೆಮಿ’ಯಂಥ ತಾಣಗಳಲ್ಲಿ, ನಮ್ಮದೇ ತಾಣದ ಮೂಲಕ ಅಥವಾ ಜೂಮ್ ಗೂಗಲ್​ವಿುೕಟ್ ಮುಂತಾದ ಸೌಲಭ್ಯ ಬಳಸಿ ಕೋರ್ಸ್​ಗಳನ್ನು ಪ್ರಾರಂಭಿಸ ಬಹುದು, ಹಣವನ್ನೂ ಸಂಪಾದಿಸಬಹುದು. ’ಕಲಿಯೋಣ’ ಎನ್ನುವ ತಾಣ ಕನ್ನಡದಲ್ಲೂ ಇಂತಹ ಪ್ರಯತ್ನ ಮಾಡಿದೆ.
| ಟಿ.ಜಿ. ಶ್ರೀನಿಧಿ ಡಿಜಿಟಲ್ ತಜ್ಞ
ಕಣ್ಣಿಗೊಂದು ಸವಾಲ್​: ಬಾತುಕೋಳಿ ಪತ್ತೆಹಚ್ಚಲು ಶೇ. 98 ಮಂದಿ ಫೇಲ್​, ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + three =
Remember me
