ಬೆಂಗಳೂರು:ಉತ್ಥಾನ ಮಾಸಪತ್ರಿಕೆಯು ಕಳೆದ5ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು,ಈ ಬಾರಿಯ2024ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದೆ.ಕಥೆಯು3ಸಾವಿರ ಪದಗಳನ್ನು ಮೀರಬಾರದು.ಕಥೆಗಳು ಸ್ವತಂತ್ರವಾಗಿರಬೇಕು.ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು.ಕಥೆ ತಲುಪಲು ಕೊನೆಯ ದಿನಾಂಕ ಅ.10, 2024.
ಆಯ್ಕೆಯಾದ ಕಥೆಗಳಿಗೆ ಮೊದಲನೆಯ ಬಹುಮಾನ15ಸಾವಿರ,ಎರಡನೆಯ ಬಹುಮಾನ12ಸಾವಿರ,ಮೂರನೆಯ ಬಹುಮಾನ10ಸಾವಿರ, 5ಕಥೆಗಳಿಗೆ ಮೆಚ್ಚುಗೆಯ ಬಹುಮಾನಗಳು ತಲಾ2ಸಾವಿರ ನೀಡಲಾಗುವುದು.
ವಿಳಾಸ:ಸಂಪಾದಕರು,ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ2024,ಕೇಶವ ಶಿಲ್ಪ,ಕೆಂಪೇಗೌಡನಗರ,ಬೆಂಗಳೂರು– 560 004ದೂ: 77954 41894,ಇ–ಮೇಲ್:[email protected]
ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.ಕಥೆಯನ್ನು ಪೋಸ್ಟ್ ಮೂಲಕ ಅಥವಾ ನುಡಿ/ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ–ಮೇಲ್ ಮೂಲಕವೂ ಕಳುಹಿಸಬಹುದು.
ಲೇಖಕರು ತಮ್ಮ ಹೆಸರು,ವಿಳಾಸ,ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜೊತೆಯಲ್ಲಿ ಬರೆಯದೆ,ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು.ಜೊತೆಗೆ ಲೇಖಕರ ಭಾವಚಿತ್ರವೂ ಇರಬೇಕು.
ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ಉತ್ಥಾನದಲ್ಲಿ ಪ್ರಕಟಿಸಲಾಗುವುದು.ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು.ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಇರುವುದಿಲ್ಲ.ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
