ಬೆಂಗಳೂರು:ಪವರ್​ ಟಿವಿ ಚಾನೆಲ್​ ಮುಖ್ಯಸ್ಥ ಎಂದು ಹೇಳಿಕೊಂಡು ಮಾನಹಾನಿಕಾರ ಸುದ್ದಿ ಪ್ರಸಾರ ಮಾಡಿ ಸುಲಿಗೆಗೆ ಇಳಿದಿರುವ ರಾಕೇಶ್​ ಶೆಟ್ಟಿ ವಿರುದ್ಧ ಕೊಲೆ ಯತ್ನ, ಚೆಕ್​ಬೌನ್ಸ್​, ಸುಲಿಗೆ ಸೇರಿ 21 ಕ್ರಿಮಿನಲ್​ ಕೇಸ್​ ದಾಖಲಾಗಿವೆ. ಹಾಗಾಗಿ, ಪೊಲೀಸ್​ ಇಲಾಖೆ ಈತನ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಬೇಕು ಎಂದು ಮಾಜಿ ಪೊಲೀಸ್​ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಗಿರೀಶ ಮಟ್ಟಣ್ಣವರ್​ ಒತ್ತಾಯಿಸಿದ್ದಾರೆ.
ದೃಶ್ಯ ಮಾಧ್ಯಮ ದುರುಪಯೋಗಪಡಿಸಿಕೊಂಡು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವುದು ಹಾಗೂ ಪರವಾನಗಿ ನವೀಕರಿಸದೆ ಚಾನಲ್​ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್​, ಪವರ್​ ಟಿವಿ ಪ್ರಸಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಪತ್ರಿಕೋದ್ಯಮವನ್ನು ತನ್ನ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡು ಅನೇಕ ಕಾನೂನುಬಾಹಿರ ಕೆಲಸ, ಬ್ಲ್ಯಾಕ್​ಮೇಲ್​, ವಸೂಲಿ ದಂಧೆ ನಡೆಸುತ್ತಿರುವ ರಾಕೇಶ್​ ಶೆಟ್ಟಿಯನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಮುಂಬೈಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡುವ ಜಾಲದಲ್ಲಿ ತೊಡಗಿದ್ದ ಈತ, ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಗರ್ಭಿಣಿ ಮಾಡಿದ್ದ. ನಂತರ, ಆಕೆ ಸಂಬಂಧಿಕರು ಈತನನ್ನು ಮುಂಬೈನಿಂದ ಓಡಿಸಿದ್ದರು. ಬೆಂಗಳೂರಿನ ರವಿ ಉಪ್ಪಾಳ ಮುಖ್ಯಸ್ಥರಾಗಿದ್ದ ವರ್ಕ್​ ಪೋಸ್​​​ ಎಂಬ ಸಿಎ ಕಚೇರಿಯಲ್ಲಿ ತಾನು ಸಿಎ ಎಂದು ಹೇಳಿಕೊಂಡು ನಿರ್ದೇಶಕ ಹುದ್ದೆಗೆ ಸೇರಿಕೊಂಡಿದ್ದ. ಕ್ರಮೇಣ ಈತನ ಅಸಲಿ ಮುಖ ಗೊತ್ತಾದ ಮೇಲೆ ಅಲ್ಲಿಂದ ಹೊರಹಾಕಿದ್ದರು. ಎಸಿಎಸ್​-ಎಫ್​​ಐಎನ್​ ಕನ್ಸಲ್ಟೆನ್ಸಿ ಕಂಪನಿ ಶುರು ಮಾಡಿದ ಈತ ಬಸವನಗುಡಿಯಲ್ಲಿ ತನ್ನದೇ ಮಾಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿ, ಅವರಿಂದ ಏಟು ತಿಂದಿದ್ದ ಎಂದು ವಿವರಿಸಿದರು. 2018ರಲ್ಲಿ ಪವರ್​ ಸ್ಮಾರ್ಟ್​ ಮೀಡಿಯಾದಲ್ಲಿ ಅಕೌಂಟ್ಸ್​ ಹುದ್ದೆಗೆ ಸೇರಿ ಕಂಪನಿ ನಿರ್ದೇಶಕರಿಗೆ ಮೋಸ ಮಾಡಿ ನಕಲಿ ಕಂಪನಿ ಸೃಷ್ಟಿಸಿ ನಾನೇ ಪವರ್​ ಟಿವಿ ಎಂಡಿ ಎಂದು ಘೋಷಿಸಿಕೊಂಡಿದ್ದ. ಅಂದಿನಿಂದ ಈವರೆಗೆ ಅನೇಕ ಉದ್ಯಮಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಜನರಿಗೆ ವಂಚಿಸುತ್ತಿದ್ದಾನೆ. 21 ಶಾಸಕರ ಸೆಕ್ಸ್​ಟೇಪ್​ ಈತನ ಬಳಿ ಇದೆ. ಅವರೆಲ್ಲರನ್ನೂ ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾನೆ. ಈತನ ವ್ಯವಹಾರ, ಬೇನಾಮಿ ಆಸ್ತಿ, ಅನೈತಿಕ ಚಟುವಟಿಕೆ ವಿರುದ್ಧ ಸಿಬಿಐ, ಐಟಿ ಹಾಗೂ ಇಡಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮಾಡಬೇಕು ಎಂದರು. ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಇದ್ದರು.
ದೇಶದ ಆಡಳಿತ ಸೇವೆಗೆ ಸಂಬಳ ಮುಖ್ಯವಲ್ಲ: ಆದಿಚುಂಚನಗಿರಿ ಶ್ರೀಗಳು ಹೇಳಿಕೆ
ತೇಜೋವಧೆ ಸುದ್ದಿ ಪ್ರಸಾರ:ಐಪಿಎಸ್​ ಅಧಿಕಾರಿ ರವಿಕಾಂತೇಗೌಡ, ಜೆಡಿಎಸ್​ ಮುಖಂಡ ರಮೇಶ್​ಗೌಡ ಹಾಗೂ ಅವರ ಪತ್ನಿ ಡಾ.ರಮ್ಯಾ ರಮೇಶ್​ಗೌಡ ಅವರಿಂದ ಹಣ ವಸೂಲಿ ಮಾಡುವುದಕ್ಕಾಗಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ರಾಕೇಶ ಶೆಟ್ಟಿ ಮತ್ತು ವಾಹಿನಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಸುದ್ದಿವಾಹಿನಿಯ ಪರವಾನಗಿ 2021ರ ಮಿಟ್​ಕಾನ್​ ಇನ್ಪಾ ಸಂಸ್ಥೆ ಹೆಸರಿನಲ್ಲಿದೆ. 2021ರ ನಂತರ ಪರವಾನಗಿ ನವೀಕರಣ ಮಾಡಿಲ್ಲ. ಪವರ್​ ಸ್ಮಾರ್ಟ್​ ಹಾಗೂ ಮಿಟ್​ಕಾನ್​ ಇನ್ಪಾ ಕಂಪನಿಗಳು ಭಿನ್ನ ಸಂಸ್ಥೆಯಾಗಿವೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ(ಎಂಐಬಿ)ಯಿಂದ ಪರವಾನಗಿ ನವೀಕರಿಸದೆ ನಿಯಮಬಾಹಿರವಾಗಿ ಚಾನಲ್​ ನಡೆಸಲಾಗುತ್ತಿದೆ ಎಂದು ಗಿರೀಶ ಮಟ್ಟಣ್ಣವರ್​ ಹೇಳಿದರು.
ಘೋಷಿತ ಅಪರಾಧಿ:ರಾಕೇಶ್​ ಶೆಟ್ಟಿ ಮೇಲೆ 21 ಕ್ರಿಮಿನಲ್​ ಕೇಸ್​, 17 ನ್ಯಾಯಾಲಯದ ನಿಂದನೆ, 5 ಕೇಸ್​ಗಳಲ್ಲಿ ಶಿೆ ಹಾಗೂ ಒಂದು ಕೇಸ್​ನಲ್ಲಿ ನ್ಯಾಯಾಲಯದಿಂದ ಘೋಷಿತ ಅಪರಾಧಿ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ತನ್ನ ಮೇಲೆ ಮೊಕದ್ದಮೆ ಹೂಡುವವರ ಮೊಬೈಲ್​ ಹ್ಯಾಕ್​ ಮಾಡಿ ಬ್ಲಾಕ್​ ಮೇಲ್​ ಮಾಡುವುದು, ವಾಹಿನಿಯಲ್ಲಿ ಅವಾಚ್ಯವಾಗಿ ನಿಂದಿಸುವುದು ಹಾಗೂ ಸ್ಟಿಂಗ್​ ಅಪರೇಷನ್​ ಹೆಸರಿನಲ್ಲಿ ಸೆಕ್ಸ್​ ಟೇಪ್​ ತಯಾರಿಸುವುದು ಈತನ ಖಯಾಲಿಯಾಗಿದೆ ಎಂದು ಗಿರೀಶ ಮಟ್ಟಣ್ಣವರ್​ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + sixteen =
Remember me
