ಕೋಲಾರ:ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಕೋಲಾರದಿಂದ ರಾಜಾಸ್ಥಾನಕ್ಕೆ ಹೊರಟಿದ್ದ ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿತ್ತು. ಆದರೆ ಇಂದು ಲಾರಿ ರಾಜಸ್ಥಾನದ ಜಾಲೂರ್ ಬಳಿ ಪತ್ತೆಯಾಗಿದೆ.
ಇದನ್ನೂ ಓದಿ:3 ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣು…
21 ಲಕ್ಷ ಮೌಲ್ಯದ ಟೊಮ್ಯಾಟೋ ತುಂಬಿದ್ದ ಲಾರಿ ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೊರಟಿದ್ದ ಲಾರಿ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು, ಇದರಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮ್ಯಾಟೋ ಇದ್ದವು.
ಇದನ್ನೂ ಓದಿ:ಕಟ್ಟಡದ ಮೇಲೆ ಸಾಹಸ ಮಾಡುತ್ತಾ 68ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಬಿಟ್ಟ
ನಾಪತ್ತೆಯಾಗಿದ್ದ ಈಚರ್ ಲಾರಿ ರಾಜಸ್ಥಾನದ ಜಾಲೂರ್ ಬಳಿ ಪತ್ತೆಯಾಗಿದ್ದು, ಲಾರಿ ಚಾಲಕ ಅನ್ವರ್ ಎಂಬಾತ ಟೊಮ್ಯಾಟೋವನ್ನು ಅಹಮದಾಬಾದ್​​​ನಲ್ಲಿ ಪ್ರಕಾಶ್ ಎಂಬುವವರಿಗೆ ಮಾರಾಟ ಮಾಡಿ ನಂತರ ಗುಜರಾತ್​​ನ ಪೆಟ್ರೋಲ್ ಬಂಕ್ ಬಳಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಮಾಲೀಕ, ಚಾಲಕ, ಗುಜರಾತ್​ನ ಏಜೆಂಟ್ ಸೇರಿ ಒಟ್ಟು 6 ಜನರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್ ಸದ್ಯ ಗುಜರಾತ್​​ಗೆ ತೆರಳಿ ದೂರು ನೀಡಿದ್ದಾರೆ.
21 ಲಕ್ಷ ರೂ. ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಕೋಲಾರದಿಂದ ಹೊರಟಿದ್ದ ಲಾರಿ ನಾಪತ್ತೆ, ದೂರು ದಾಖಲು

ನಿರ್ಮಾಣ ಹಂತದಲ್ಲಿದ್ದ ಕಾಲುವೆ ಕುಸಿದು 4 ಮಕ್ಕಳು ಸೇರಿದಂತೆ ಐವರು ಮೃತ್ಯು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
