ಉಡುಪಿ:ಈತನ ಮೇಲಿದ್ದಿದ್ದು ಒಂದೆರಡು ಪ್ರಕರಣಗಳಲ್ಲ. ಬರೋಬ್ಬರಿ 21 ಪೋಕ್ಸೋ ಪ್ರಕರಣಗಳು. ಅಷ್ಟಕ್ಕೂ ಈತನ ಮೇಲೆ ಹೀಗೆ ಇಷ್ಟೊಂದು ಕೇಸುಗಳು ಬೀಳಲು ಕಾರಣ ಈತ ಬಾಲಕರಿಗೆ ನೀಡಿದ್ದ ಲೈಂಗಿಕ ಕಿರುಕುಳ. ಹೌದು.. ಬಾಲಕರಿಗೆ ಲೈಂಗಿಕವಾಗಿ ಕಿರುಕುಳು ನೀಡಿದ್ದ ಈ ವ್ಯಕ್ತಿಗೆ ನ್ಯಾಯಾಲಯ ಈಗ 10 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಈ ಆರೋಪಿಯ ಹೆಸರು ಚಂದ್ರ ಹೆಮ್ಮಾಡಿ. ಈತನ ಮೇಲೆ 21 ಪ್ರಕರಣಗಳಿದ್ದು, ಆ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶೆ ಯಾದವ್ ವನಮಾಲಾ ಆನಂದರಾವ್ ಅವರು ಈತನಿಗೆ 10 ವರ್ಷ ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಿಶೇಷ ಅಭಿಯೋಜಕರಾಗಿ ವೈಟಿ ರಾಘವೇಂದ್ರ ವಾದ ಮಂಡಿಸಿದ್ದಾರೆ.
ಲೈಂಗಿಕ ವಿಕೃತಿ ಹೊಂದಿದ್ದ ಚಂದ್ರ ಹೆಮ್ಮಾಡಿ ವಿರುದ್ಧ ದಾಖಲಾಗಿದ್ದ 21 ಪ್ರಕರಣಗಳ ಪೈಕಿ ಮೊದಲನೆಯ ಪ್ರಕರಣ ಸಂಬಂಧ ತೀರ್ಪು ಹೊರಬಿದ್ದಿದ್ದು, ಇನ್ನೂ 20 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 2018ರ ನವೆಂಬರ್​ನಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಈತ ದಿನಪತ್ರಿಕೆಯೊಂದಿಗೆ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
‘ಇನ್ನು ನಮ್ದೇನಿದೆ?’ ಎಂದು ನಟ ರಿಷಬ್​ ಶೆಟ್ಟಿ ಬೇಸರದಿಂದ ಹೇಳಿದ್ಯಾಕೆ?; ‘ಹೀರೋ’ಗೆ ವಿಲನ್ ಆಗಿ ಕಾಡುತ್ತಿರುವುದ್ಯಾರು?

‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
