ನವದೆಹಲಿ:75ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ರಾಜ್ಯದ 21 ಪೊಲೀಸ್​ ಅಧಿಕಾರಿಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ.
ವಿಶಿಷ್ಟ ಸೇವೆಗಾಗಿ ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್​ಪಿ ಸುಧೀರ್ ಮಹದೇವ್ ಹೆಗ್ಡೆಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ. ಗಮನಾರ್ಹ ಸೇವೆ ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ಐಜಿಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ರಮಣ್ ಗುಪ್ತಾ, ಎಎಸ್​​ಪಿ ಅನಿಲ್​​ಕುಮಾರ್.ಎಸ್, ಎಸಿಪಿ ಶಿವಗಂಗೆ ಪುಟ್ಟರಂಗಪ್ಪ, ಡಿವೈಎಸ್​​ಪಿ ರಘು ಕುಮಾರ್, ಎಸಿಪಿ ನಾರಾಯಣಸ್ವಾಮಿ, ಡಿವೈಎಸ್​​ಪಿ ಶ್ರೀನಿವಾಸ್ ರಾಜ್ ಬೆಟೋಲಿ ಸೇರಿದಂತೆ ರಾಜ್ಯದ 21 ಪೊಲೀಸ್​ ಅಧಿಕಾರಿಗಹಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಇದನ್ನೂ ಓದಿ:ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ನಂಬಿಕೆಯೊಂದಿಗೆ ಬಿಜೆಪಿ ಸೇರಿದ್ದೇನೆ: ಜಗದೀಶ್​ ಶೆಟ್ಟರ್
ಪೊಲೀಸ್​ ಇನ್ಸ್​​ಪೆಕ್ಟರ್​ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಇನ್ಸ್​​ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಸಬ್​ ಇನ್ಸ್​​ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್​ಐ​ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ, ಎಸ್​​ಪಿ ಕಮಾಂಡೆಂಟ್ ಸಿಬ್ಬಂದಿ ನಾಗರಾಜ್ ಅಂಜಪ್ಪ, ಹೆಡ್​ ಕಾನ್ಸ್​ಟೇಬಲ್ ಸಿ.ವಿ.ಗೋವಿಂದರಾಜು, ಹೆಡ್​ ಕಾನ್ಸ್​ಟೇಬಲ್ ಮಣಿಕಂಠ ಮಂದರ್ ಬೈಲ್, ಎಎಸ್​ಐ​ ಸಮಂತ್.ಎಸ್, ಹೆಡ್​ ಕಾನ್ಸ್​ಟೇಬಲ್ ನರಸಿಂಹರಾಜು ಎಸ್.ಎನ್, ಎಸ್​ಐ ಪುಂಡಲಿಕ್ ಜೆ.ವಿ.ರಾಮರಾವ್ ನಾಯಕ್​ಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.
ವಿಶಿಷ್ಟ ಸೇವಾ ಪದಕ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೀಡುವ ಒಂದು ಪ್ರಶಸ್ತಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡುತ್ತಾರೆ. 2024 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ, ಗೃಹ ರಕ್ಷಕ ಮತ್ತು ಸಿವಿಲ್ ಡಿಫೆನ್ಸ್ & ಕರೆಕ್ಷನಲ್ ಸೇವೆಯ ಒಟ್ಟು 1132 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳನ್ನು ಘೋಷಣೆ ಮಾಡಲಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 − 2 =
Remember me
