ಬೆಂಗಳೂರು:ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‌ಡಿಎಲ್) ಉತ್ಪಾದಿಸಿರುವ 21 ನೂತನ ಉತ್ಪನ್ನಗಳನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಸಚಿವ ಎಂ ಬಿ ಪಾಟೀಲ,ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ತಾಂತ್ರಿಕ ಸಲಹೆಗಾರ ರಜನೀಕಾಂತ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಎಸ್‌ಡಿಎಲ್ ಆಡಳಿತಾಧಿಕಾರಿ ಗಂಗಪ್ಪ ಉಪಸ್ಥಿತರಿದ್ದರು.
ಈ ಉತ್ಪನ್ನಗಳಲ್ಲಿ ಮೈಸೂರು ಸ್ಯಾಂಡಲ್ ವೇವ್ಸ್ ಶ್ರೇಣಿಯ 11 ಬಗೆಯ ಪ್ರೀಮಿಯಂ ಮೈಸೂರು ಸ್ಯಾಂಡಲ್ ಸಾಬೂನುಗಳು, 3 ಬಗೆಯ ಶವರ್ ಜೆಲ್, 6 ತರಹದ ಸೋಪ್ ಕಿಟ್, ಹ್ಯಾಂಡ್ ವಾಶ್ ಮತ್ತು ಕುಡಿಯುವ ನೀರು ಸೇರಿವೆ.
ವೆಜಿಟೆಬಲ್ ತೈಲ ಮತತ್ತು ಅರಿಶಿಣಯುಕ್ತ ಮೈಸೂರು ಸ್ಯಾಂಡಲ್ಸ್ ‘ವೇವ್ ಟರ್ಮರಿಕ್’, ನಿಂಬೆ ಪರಿಮಳಯುಕ್ತ ‘ವೇವ್ ಮೈಮ್’, ಮಿಂಟ್ ಪರಿಮಳಯುಕ್ತ ‘ವೇವ್ ಡಿಯೋ’, ತೇವಾಂಶಭರಿತ ಮಿಲ್ಕ್ ಪ್ರೊಟೀನ್ ಕೇಸರಿಯುಕ್ತ ‘ಮಿಲ್ಕ್ ಸ್ರಾನ್’, ಬಾದಾಮಿ ತೈಲಯುಕ್ತ ‘ಅಲ್ಕಂಡ್ ಸೋಪ’, ಶುದ್ಧ ಬೇವಿನ ಎಣ್ಣೆ, ತುಳಸಿ ಹಾಗೂ ಅರಿಶಿಣಯುಕ್ತ ‘ನೀಮ್ ಸೋಪ್’, ಲೋಳೆಸರ ಮತ್ತು ಬಾದಾಮಿ ತೈಲವನ್ನೊಳಗೊಂಡ ‘ಆಲೋ ಸೋಪ್’, ಮಲ್ಲಿಗೆಯ ಸುಗಂಧಯುಕ್ತ ‘ಜಾಸ್ಮೀನ್’ ಕ್ರೀಮ್ ಸಾಬೂನು, ಮೈಸೂರು ಸ್ಯಾಂಡಲ್ಸ್ ‘ಔದ್’ಅರೇಬಿಯನ್ ಐಷಾರಾಮಿ ಸಾಬೂನು ಮತ್ತು ನೈಸರ್ಗಿಕ ಸೀಗೇಕಾಯಿ, ಜಪಾಕುಸುಮ, ಭಂಗರಾಜ, ನೆಲ್ಲಿಕಾಯಿ ಮತ್ತು ಬ್ರಾಹ್ಮಿ ಅಂಶಗಳುಳ್ಳ ‘ಶ್ರೀಕಾಕಾಯ್’ ಸಾಬೂನುಗಳನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಲಾಯಿತು.
ಮೈಸೂರು ಸ್ಯಾಂಡಲ್ ಷವರ್ ಜೆಲ್, ಮೈಸೂರು ಸ್ಯಾಂಡಲ್ ಗೋಲ್ಡ್ ಪವರ್ ಜೆಲ್, ಮೈಸೂರು ಸ್ಯಾಂಡಲ್ ಮಿಲೇನಿಯಂ ಷವರ್ ಜೆಲ್, ಮೈಸೂರು ಸ್ಯಾಂಡಲ್ ಹೈಜೀನಿಕ್ ಹ್ಯಾಂಡ್ ವಾಶ್ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ಕೆ.ಎಸ್ ಅಂಡ್ ಡಿ.ಎಲ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಮೈಸೂರು ಸ್ಯಾಂಡಲ್ ಅಕ್ವಾ ಮಿನರಲ್ ವಾಟರ್ ಘಟಕ ಪ್ರಾರಂಭಿಸಾಗುತ್ತದೆ.
ಉಡುಗರೆ ನೀಡಲೂ ಬೇಬಿ ಕಿಟ್, ಬ್ರೈಡ್ ಕಿಟ್, ದೀಪಾವಳಿ ಕಿಟ್, ಹಜ್ ಕಿಟ್, ಪೂಜಾ ಕಿಟ್, ಕ್ರಿಸ್‌ಮಸ್ ಕಿಟ್ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ನೀಡಬಹುದಾದ ವಿವಿಧ ಕಿಟ್ಟುಗಳು ಆಕರ್ಷಕ ವಿನ್ಯಾಸದಿಂದ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + three =
Remember me
