ಮೈಸೂರು:ಮನೆಗೆ ನುಗ್ಗಿ ಗಲಾಟೆ ನಡೆಸಿದ್ದಲ್ಲದೆ, ತಾಯಿಯ ತಾಳಿಯನ್ನು ಕಿತ್ತುಹಾಕಿ ಅವಮಾನಿಸಿದ್ದಕ್ಕೆ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ನಿವಾಸಿ ಬಾಲರಾಜ್(23) ಮೃತ ಯುವಕ. ಬಾಲರಾಜ್ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ನಾಲ್ವರು ಯುವಕರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ತಾಯಿಯ ತಾಳಿ ಕಿತ್ತುಹಾಕಿ ಅವಮಾನ ಮಾಡಿದ್ದರು. ಯಾವ ವಿಚಾರಕ್ಕೆ ಗಲಾಟೆ ಮಾಡಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ, ಬಾಲರಾಜ್​ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಇದನ್ನೂ ಓದಿ:ಚೀನಾಗೆ ಬೀಳಲಿದೆ ಮತ್ತೊಂದು ಹೊಡೆತ; ಆ್ಯಪ್​ಗಳ ಬಳಿಕ 5ಜಿ ಉಪಕರಣಗಳ ಬ್ಯಾನ್​ಗೂ ಸಿದ್ಧತೆ
ಬಳಿಕ ಪೊಲೀಸರು ಯುವಕರನ್ನು ಕರೆಸಿ ರಾಜಿ ಮಾಡಿ ಕಳುಹಿಸಿದ್ದರು. ಗ್ರಾಮಕ್ಕೆ ಹಿಂದಿರುಗಿದ ಬಳಿಕ ನಮ್ಮನ್ನು ಏನೂ ಮಾಡಲು ಆಗಲಿಲ್ಲ ಎಂದು ಯುವಕರ ಗುಂಪು ಬಾಲರಾಜ್​ನನ್ನು ರೇಗಿಸಿತ್ತು. ಇದರಿಂದ ಮನನೊಂದ ಬಾಲರಾಜ್ ದೇವಸ್ಥಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿರುವ ಬಾಲರಾಜ್, ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ತುಮಕೂರಿಗೆ ವಧು ನೋಡಲು ಹೋದ ಮೂರು ಗ್ರಾಮಸ್ಥರು ಸೋಂಕಿನೊಂದಿಗೆ ವಾಪಸ್‌!
ಈ ಫೋಟೋದಲ್ಲಿರುವುದು ಫ್ರೈಡ್​ ಚಿಕನ್​ ಪೀಸ್​ ಅಲ್ಲ…ಇದೊಂದು ವಿಸ್ಮಯ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + two =
Remember me
