ಬೆಂಗಳೂರು:ಸಣ್ಣ ಮತ್ತು ಮಧ್ಯಮ ರೈತರು ಬೆಳೆದ ತರಕಾರಿ, ಹಣ್ಣು, ಧಾನ್ಯಗಳನ್ನು ರೈತ ಉತ್ಪಾದಕ ಕಂಪನಿಗಳಿಂದ ಖರೀದಿಸಿ ನಗರಗಳ ಗ್ರಾಹಕರು ಹಾಗೂ ದೊಡ್ಡ ದೊಡ್ಡ ಖರೀದಿದಾರರಿಗೆ ಮಾರಾಟ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೋರಿದ್ದಾರೆ. ಲಾಕ್​ಡೌನ್ ನಿರ್ಬಂಧದಿಂದಾಗಿ ಕೃಷಿಕರು ಹಾಗೂ ಕೃಷಿ ಕ್ಷೇತ್ರದ ವಸ್ತುಸ್ಥಿತಿ ತಿಳಿಯಲು ಜಿಲ್ಲಾ ಪ್ರವಾಸ ಮಾಡಿರುವ ಸಚಿವರು ಸಭೆ-ಸಮಾಲೋಚನೆ ಬಳಿಕ ‘ಸಂಕಷ್ಟ ಪರಿಹಾರ ಸೂತ್ರ’ ರೂಪಿಸಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ 24 ಅಂಶಗಳ ಪ್ರಸ್ತಾವನೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಿಟ್ಟಿದ್ದಾರೆ.
ಪರಿಹಾರೋಪಾಯಗಳು
=ಹೂವು ಬೆಳೆ ನಷ್ಟ ಸಮೀಕ್ಷೆ ನಡೆಸಿ ಬಾಧಿತರಿಗೆ ತೋಟಗಾರಿಕೆ ಇಲಾಖೆಯಿಂದ ಪರಿಹಾರ =ನಿರ್ಬಂಧಿತ ಅವಧಿಯಲ್ಲಿ ಮಾರುಕಟ್ಟೆ ಸಿಗದೆ ತರಕಾರಿ, ಹಣ್ಣು ನಾಶಪಡಿಸಿ ನಷ್ಟದಲ್ಲಿರುವ ರೈತರಿಗೆ ಪರಿಹಾರ =ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಾಪ್​ಕಾಮ್್ಸ ಮಳಿಗೆ ತೆರೆಯಲು ಕ್ರಮ =ಚಿತ್ರದುರ್ಗ, ದಾವಣಗೆರೆ, ಹಾವೇರಿ, ವಿಜಯಪುರ ಮುಂತಾದ ಜಿಲ್ಲೆಗಳಲ್ಲಿ ಸಿರಿಧಾನ್ಯ ಮತ್ತು ಸಾವಯವ ಒಕ್ಕೂಟಗಳು ಸಿರಿಧಾನ್ಯ ಖರೀದಿ, ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಅಲ್ಲದೆ, ಸಿರಿಧಾನ್ಯದಿಂದ ತಯಾರಿಸಿದ ಪದಾರ್ಥಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಪೂರೈಕೆ =ಗದಗ, ಧಾರವಾಡ, ರಾಯಚೂರು, ಹಾವೇರಿ ಜಿಲ್ಲೆಗಳಲ್ಲಿ ಹತ್ತಿ ಮಾರುಕಟ್ಟೆ, ಜಿನ್ನಿಂಗ್ ಫ್ಯಾಕ್ಟರಿಗಳ ಕಾರ್ಯಾರಂಭ. =ಶಿವಮೊಗ್ಗದಲ್ಲಿ ಪೈನಾಪಲ್ ಸಂಸ್ಕರಣಾ ಘಟಕ ಆರಂಭ ಹಾಗೂ ಬೇರೆ ರಾಜ್ಯಗಳಿಗೆ ರಫ್ತು ಮಾಡಲು ಅನುಮತಿ.=ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ವ್ಯವಸ್ಥೆ. =ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ಮತ್ತು ಖಾಸಗಿ ಕೋಲ್ಡ್ ಸ್ಟೋರೇಜ್​ಗಳ ನಿರ್ಮಾಣ =ವಿಜಯಪುರದಲ್ಲಿ ಒಣದ್ರಾಕ್ಷಿಗೆ ಆನ್​ಲೈನ್​ಟ್ರೇಡಿಂಗ್​ನಲ್ಲಿ ಬೇರೆ ರಾಜ್ಯಗಳ ಖರೀದಿದಾರರು ಭಾಗವಹಿಸುವಂತೆ ಕ್ರಮ =ನಿಂಬೆ ಹಣ್ಣಿನ ಬೆಲೆ ಕುಸಿತ ತಡೆಯಲು ಇಂಡಿಯಲ್ಲಿ ಸಂಸ್ಕರಣಾ ಘಟಕ ಆರಂಭಿಸಿ, ನಿಂಬೆ ಬೋರ್ಡ್ ಸಕ್ರಿಯಕ್ಕೆ ಕ್ರಮ =ಹಾಲು ಪಾಶ್ಚರೀ ಕರಣ ಜತೆಗೆ ಹೆಚ್ಚುವರಿ ಉತ್ಪಾದನೆಯನ್ನು ವಿದೇಶ ಮಾದರಿಯಲ್ಲಿ ಸ್ಟೆರಿಲೈಸ್ಡ್ ಹಾಲು ತಯಾರಿಸಿದರೆ 1 ತಿಂಗಳಿಗೂ ಹೆಚ್ಚು ಕಾಲ ಶೇಖರಣೆ =ಆನೇಕಲ್ ತಾಲೂಕಿನ ಸಿರಿಗೇನ ಅಗ್ರಹಾರದ ಮಾರುಕಟ್ಟೆಯ ಖಾಲಿ ಮಳಿಗೆಗಳು, ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಸ್ಥಳಾಂತರಿಸಿ ನೂತನವಾಗಿ ಕಟ್ಟಲಿರುವ ಮಾರುಕಟ್ಟೆಯ ಮಳಿಗೆಗಳ ಪೈಕಿ ಅರ್ಧದಷ್ಟು ರೈತ ಮಕ್ಕಳಿಗೆ ಮೀಸಲು =ಗುಜರಾತ್, ರಾಜಸ್ಥಾನ ಮಾದರಿ ಮೆಕ್ಕೆ ಜೋಳವನ್ನು ಪಡಿತರ ವ್ಯವಸ್ಥೆಗೆ ತಂದು ಬೆಂಬಲ ಬೆಲೆಯಡಿ ಖರೀದಿಸಲು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ =ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ರೈತರಿಗೆ ಕಬ್ಬು ಬಾಕಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚನೆ=ಬೆಂಬಲ ಬೆಲೆಯಲ್ಲಿ ಪ್ರತಿಯೊಬ್ಬ ರೈತರಿಂದ ತಲಾ 100-150 ಕ್ವಿಂಟಾಲ್ ಭತ್ತ ಖರೀದಿ. =ಪಿಎಂ ಮತ್ತು ಸಿಎಂ ಕಿಸಾನ್ ಸಮ್ಮಾನ್, ಪಿಂಚಣಿ ಹಣವನ್ನು ರೈತರ ಅನುಮತಿ ಇಲ್ಲದೆ ಬ್ಯಾಂಕ್​ಗಳು ಸಾಲಕ್ಕೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಕಡಿವಾಣ =ರೈತರಿಗೆ ಬೀಜ, ರಸಗೊಬ್ಬರ ತಲುಪಿಸಲು ರೈತ ಸಂಪರ್ಕ ಕೇಂದ್ರ ಮತ್ತು ರೈತ ಉತ್ಪಾದಕ ಕಂಪನಿಗಳಿಗೆ ತಲಾ 1 ಚಿಕ್ಕ ವಾಹನ ನೀಡಿಕೆ =ರೇಷ್ಮೆ ರೀಲರ್ಸ್​ಗೆ ಅಡಮಾನ ಸಾಲ ನೀಡುವ ಪ್ರಮಾಣ ಹೆಚ್ಚಳಕ್ಕೆ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್​ಗೆ 50 ಕೋಟಿ ರೂ. ಅನುದಾನ.
ಈಡೇರಿದ ಒಂದಂಶ:ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭತ್ತ, ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಸಿಎಂ ತ್ವರಿತವಾಗಿ ಸ್ಪಂದಿಸಿದ್ದಾರೆ. ಈಗಾಗಲೇ 45 ಕೋಟಿ ರೂ. ಬಿಡುಗಡೆ ಮಾಡಿದ್ದು, ನಿಯಮಾವಳಿಯಂತೆ ಪರಿಹಾರ ವಿತರಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ರೈತರ ಹಣದಲ್ಲಿ ಬಡ್ಡಿ ವ್ಯವಹಾರ!:ರೈತರಿಗೆ ನೆರವಾಗಲೆಂದು ಸರ್ಕಾರ ಬಿಡುಗಡೆ ಮಾಡಿದ ಹಣದಲ್ಲೇ ಅಧಿಕಾರಿಗಳು ಬಡ್ಡಿ ವ್ಯವಹಾರಕ್ಕೆ ಕುಳಿತಿದ್ದಾರೆ! ಮುಖ್ಯಮಂತ್ರಿಗೆ ಕೃಷಿ ಸಚಿವರು ಸಲ್ಲಿಸಿದ ಪ್ರಸ್ತಾವನೆಯಲ್ಲಿ ಇಂತಹದೊಂದು ಬೆಚ್ಚಿಬೀಳಿಸುವ ಅಂಶವಿದೆ. ಬೆಂಬಲ ಬೆಲೆಯಲ್ಲಿ ಕಡಲೆ, ತೊಗರಿ ಖರೀದಿಸಲು ಸರ್ಕಾರ ಈಗಾಗಲೇ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ಖರೀದಿ ಕೇಂದ್ರದ ಅಧಿಕಾರಿಗಳು ಬಡ್ಡಿ ಹಣಕ್ಕಾಗಿ ರೈತರಿಗೆ ಹಣ ಪಾವತಿಯನ್ನು ಮುಂದೂಡುತ್ತಿದ್ದು, ಕೂಡಲೇ ಹಣ ಪಾವತಿಗೆ ಸೂಚಿಸಬೇಕೆಂದು ಸಚಿವ ಬಿ.ಸಿ.ಪಾಟೀಲ್ ಕೋರಿದ್ದಾರೆ.
ಪ್ರತಿಬಂಧಕವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್:ಕರೊನಾ ವೈರಸ್ ಹಿನ್ನೆಲೆಯಲ್ಲಿ ಅಧಿಕ ಅಪಾಯವಿರುವ ಜನರಿಗೆ ಪ್ರತಿಬಂಧಕ ಔಷಧವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಬಹುದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಐಸಿಎಂಆರ್ ಶಿಫಾರಸಿನ ಅನ್ವಯ ಈ ಸುತ್ತೋಲೆ ಹೊರಡಿಸಿದ್ದು, ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗ, ಕೋವಿಡ್-19 ತಪಾಸಣೆಗೆ ಮನೆ ಮನೆಗೆ ಭೇಟಿ ನೀಡುತ್ತಿರುವವರು, ಕಣ್ಗಾವಲು ತಂಡವಾಗಿ ಕೆಲಸ ಮಾಡುತ್ತಿರುವ ಇಲಾಖೆ ಅಧಿಕಾರಿ-ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ಹಾಗೂ ಇತರ ಯಾವುದೇ ಇಲಾಖೆಯಿಂದ ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಈ ಮಾತ್ರೆ ನೀಡಬಹುದು. ದೀರ್ಘ ಕಾಲೀನ ಕಾಯಿಲೆಯಿಂದ ಬಳಲುವ ವ್ಯಕ್ತಿಗಳು ವೈದ್ಯರ ಸಲಹೆಯೊಂದಿಗೆ ಮಾತ್ರೆ ಪಡೆಯಬಹುದು. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ಮಾತ್ರೆ ಶಿಫಾರಸು ಮಾಡಬಾರದು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + one =
Remember me
