ರಾಣೆಬೆನ್ನೂರು (ಹಾವೇರಿ):ಕರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಲ್ಲಿದ್ದು, ಸುಖಾಸುಮ್ಮನೆ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ. ಇಂಥ ಸಂದರ್ಭದಲ್ಲೂ ಹಾವೇರಿ ಜಿಲ್ಲೆಯಲ್ಲಿ 24 ಯುವತಿಯರು ನಾಪತ್ತೆಯಾಗಿದ್ದು, ಈ ಬಗ್ಗೆ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖ ಲಾಗಿವೆ.
“ಸಾಂಬಾರ್​ ಬಿಸಿ ಮಾಡುತ್ತೇನೆ’ ಎಂದು ಹಿತ್ತಲ ಬಾಗಿಲಿನಿಂದ ಓಡಿ ಹೋಗಿರುವುದು, “ಲಂಗಾ ದಾವಣಿಗೆ ಲಾಡಿ ಹಾಕಿಸಿಕೊಂಡು ಬರುವೆ’, “ತಾಯಿ ಜತೆ ಮೇಲಿನ ಮಹಡಿಯಲ್ಲಿ ಮಲಗುತ್ತೇನೆ’, “ಗೆಳತಿಯ ನಿಶ್ಚಿತಾರ್ಥಕ್ಕೆ ಹೋಗಿ ಬರುವೆ’. “ಬ್ಲೌಸ್​ ಹೊಲಿಸಿಕೊಂಡು ಬರುವೆ’ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಯುವತಿಯರು ಮನೆಯಿಂದ ಹೋಗಿರುವುದು ವಿಶೇಷ. ನಾಪತ್ತೆಯಾದ ಕೆಲವರಲ್ಲಿ ಪ್ರೀತಿ, ಪ್ರೇಮ ಎಂದು ಯುವಕರ ಮಾತು ನಂಬಿ ಹೋದವರೂ ಇದ್ದಾರೆ. ಇಂಥವರು ನಾಲ್ಕೆದು ದಿನದಲ್ಲಿ ಎಲ್ಲಿಯೂ ನೆಲೆ ಕಾಣದೆ ಹಾಗೂ ಯುವಕ ಕೈ ಕೊಟ್ಟ ಬಳಿಕ ವಾಪಸ್​ ಮನೆಗೆ ಬಂದ ಉದಾಹರಣೆಗಳಿವೆ.
ಆತ್ಮಹತ್ಯೆ ಪ್ರಕರಣಗಳೂ ಇವೆಏ. 26ರಂದು ಹಾವೇರಿ ತಾಲೂಕಿನ ನಾಗನೂರ ಗ್ರಾಮದ ಇರ್ಷಾದ್​ ಕುಡುಚಿ (22), ವಿದ್ಯಾ ಗಾಳಿ (21) ಎಂಬ ಪ್ರೇಮಿಗಳು ಮದುವೆ ಮಾಡಿಕೊಳ್ಳುವ ಸಲುವಾಗಿ ಮನೆಯಿಂದ ನಾಪತ್ತೆಯಾಗಿದ್ದರು. ಆಗ ಸೆಮಿ ಲಾಕ್​ಡೌನ್​ ೂಷಣೆಯಾಗಿದ್ದರಿಂದ ಇವರಿಗೆ ಎಲ್ಲಿಯೂ ನೆಲೆ ಸಿಕ್ಕಿರಲಿಲ್ಲ. ಇದರಿಂದಾಗಿ ದಿಕ್ಕು ತೋಚದಂತಾದ ಪ್ರೇಮಿಗಳು ವಾಪಸ್​ ಗ್ರಾಮದ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಯುವತಿಯೊಬ್ಬಳಿಗೆ ಪಾಲಕರು ಮೊಬೈಲ್​ನಲ್ಲಿ ಆಟವಾಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಟನೆಯೂ ರಾಣೆಬೆನ್ನೂರಿನಲ್ಲಿ ನಡೆದಿದೆ.
ಯುವಕರ ಬಣ್ಣದ ಮಾತುಗಳಿಗೆ ಯುವತಿಯರು ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಪಾಲಕರು ಮಕ್ಕಳು ಎಲ್ಲಿಗಾದರೂ ಹೋಗುವುದಾಗಿ ಹೇಳಿದರೆ, ಯಾಕೆ, ಏನು ಎಂಬುದನ್ನು ವಿಚಾರಿಸಬೇಕು.> ಟಿ.ವಿ. ಸುರೇಶ ಡಿವೈಎಸ್ಪಿ ರಾಣೆಬೆನ್ನೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 14 =
Remember me
