| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯವನ್ನು ಕಳೆದ ಮೂರು ತಿಂಗಳಿನಿಂದ ಕಾಡಿದ ಅತಿವೃಷ್ಠಿಯಿಂದ 24,941 ಕೋಟಿ ರೂ.ಗಳಷ್ಟು ಹಾನಿಯಾಗಿದ್ದು, ಪರಿಹಾರಕ್ಕಾಗಿ ಕೇಂದ್ರದ ಕಡೆ ಎದುರು ನೋಡುತ್ತಿದೆ. ಆಗಸ್ಟ್ ನಿಂದ ಅಕ್ಟೋಬರ್ ಅಂತ್ಯದ ತನಕ 3 ಹಂತದಲ್ಲಿ ಪ್ರವಾಹ ಬಂದು 24 ಜಿಲ್ಲೆಗಳಲ್ಲಿ ನಷ್ಟ ಉಂಟಾಗಿದ್ದು, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಹಣಕಾಸಿನ ಅಗತ್ಯವಿದೆ.
ಮುಂಗಾರು ಮಳೆ ಆರಂಭವಾಗಿ ಕೆಲವೇ ದಿನಗಳ ನಂತರ ಅಂದರೆ ಆಗಸ್ಟ್ 1ರಿಂದ ಸೆಪ್ಟೆಂಬರ್ 15ರ ತನಕ ಮೊದಲ ಹಂತದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ, ಎರಡನೇ ಹಂತ ಪ್ರವಾಹ ಸೆ.16ರಿಂದ 30 ಆಗಿದೆ. ಮೂರನೇಹಂತದ ಅತಿವೃಷ್ಠಿ ಅಕ್ಟೋಬರ್​ನಲ್ಲಿ ಸಂಭವಿಸಿದೆ. ರಾಜ್ಯ ಸರ್ಕಾರ ಹಿಂದೆ ಕೇಂದ್ರಕ್ಕೆ ಎರಡು ಮನವಿಗಳನ್ನು ಸಲ್ಲಿಸಿದೆ. ಇದೀಗ ಮೂರು ಹಂತದ ಹಾನಿ ಸೇರಿ ಸಮಗ್ರ ವರದಿಯನ್ನು ಮೂರು ದಿನಗಳ ಹಿಂದೆ ಸಲ್ಲಿಸಿದೆ. ಕೇಂದ್ರ ಅಧ್ಯಯನ ತಂಡ ಈಗಾಗಲೇ ಒಮ್ಮೆ ಪರಿಶೀಲನೆ ಮಾಡಿ ಹೋಗಿದೆ. 24,941.93 ಕೋಟಿ ರೂ. ಹಾನಿಗೆ ಬದಲಾಗಿ ಎನ್​ಡಿಆರ್​ಎಫ್​ನಡಿ 2,384.89 ಕೋಟಿ ರೂ. ಅನ್ನು ತಕ್ಷಣ ನೀಡುವಂತೆ ಕೋರಿದೆ. ಕೇಂದ್ರ ಅಧ್ಯಯನ ತಂಡ ಎರಡನೇ ಹಂತದ ಹಾನಿಯಾದ ವೇಳೆ ಬಂದು ಹೋಗಿ ವರದಿ ಕೊಟ್ಟಿದೆ. ಕೇಂದ್ರ ಗೃಹ ಸಚಿವಾಲಯ ಎರಡು ಸುತ್ತಿನ ಸಭೆ ನಡೆಸಿದೆ. ಇನ್ನೊಂದು ಅಂತಿಮ ಸಭೆ ನಡೆಯಬೇಕಾಗಿದೆ. ಆನಂತರ ರಾಜ್ಯಕ್ಕೆ ಎಷ್ಟು ಪರಿಹಾರ ನೀಡಬೇಕು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಸಿಎಂ ಪತ್ರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರದ ಮನವಿಗೂ ಮೊದಲೇ ಕೇಂದ್ರಕ್ಕೆ ಪತ್ರ ಬರೆದು 10 ಸಾವಿರ ಕೋಟಿ ರೂ.ಗಳ ವಿಶೇಷ ನೆರವು ಕೋರಿದ್ದಾರೆ. ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲವೆಂದು ಸಿಎಂ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ರಾಜ್ಯದಲ್ಲೂ ಆರ್ಥಿಕ ಹಿಂಜರಿತ, ಕರೊನಾ ಕಾರಣದಿಂದ ತೆರಿಗೆ ಸಂಗ್ರಹಣೆ ಕುಂಠಿತ ಆಗಿರುವುದರಿಂದ ಪರಿಹಾರ ಕಾರ್ಯಗಳಿಗೆ ಹಣಕಾಸಿನ ಅಡಚಣೆ ಉಂಟಾಗಿವೆ.
ಕಳೆದ ವರ್ಷದ ಹಾನಿ
ಕಳೆದ ವರ್ಷ ಸಹ ರಾಜ್ಯದಲ್ಲಿ ಪ್ರವಾಹದಿಂದ ಸುಮಾರು 35 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರದಿಂದ 10 ಸಾವಿರ ಕೋಟಿ ರೂ.ಗೂ ಅಧಿಕ ನೆರವಿನ ನಿರೀಕ್ಷೆ ಮಾಡಿತ್ತು. ಎನ್​ಡಿಆರ್​ಎಫ್ ಅಡಿ 3500 ಕೋಟಿ ರೂ. ಬರಬಹುದೆಂದು ಅಂದಾಜು ಮಾಡಿತ್ತು. ಕೇಂದ್ರ ಸರ್ಕಾರ 1,869 ಕೋಟಿ ರೂ. ನೀಡಿತ್ತು. ಈ ಬಾರಿ ಎಷ್ಟು ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ವರ್ಷ ಹೆಚ್ಚಿನ ನೆರವು ಸಿಕ್ಕದ ಕಾರಣ ನೆರೆ ಪರಿಹಾರಕ್ಕೆ ಇಲಾಖೆಗಳ ಅನುದಾನವನ್ನೇ ವರ್ಗಾವಣೆ ಮಾಡಲಾಗಿತ್ತು. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಉಳಿದ ಜಿಲ್ಲೆಯಲ್ಲಿ ಕುಂಠಿತವಾಗಿದ್ದವು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 18 =
Remember me
