|ದೇವರಾಜ್ ಕನಕಪುರಬೆಂಗಳೂರು
ಉತ್ತರ ಭಾರತದ ವಿದ್ಯಾರ್ಥಿಗಳೇ ಹೆಚ್ಚಿರುವ ರಾಜಧಾನಿಯ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್​ಎಲ್​ಎಸ್​ಐಯು) ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಶೇ.25 ಸೀಟುಗಳು ಕನ್ನಡಿಗರಿಗೆ ಮೀಸಲಾಗಲಿವೆ.
ಮೀಸಲಾತಿಯಡಿ ಈ ಸೀಟು ಪಡೆಯಲು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವ್ಯಾಸಂಗ ಮಾಡಿರಬೇಕೆಂಬ ನಿಯಮ ರೂಪಿಸಲಾಗಿದೆ. ಈ ಮೀಸಲಾತಿ ಬಿ.ಎ, ಎಲ್​ಎಲ್​ಬಿ(ಆನರ್ಸ್), ಎಲ್​ಎಲ್​ಎಂ ಕೋರ್ಸ್​ಗಳಿಗೂ ಅನ್ವಯಿಸಲಿದೆ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ(ಕ್ಲಾಟ್)ಗೆ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಮೀಸಲಾತಿ ಕೋರಬಹುದು. ನಂತರ ಕೌನ್ಸೆಲಿಂಗ್ ವೇಳೆ ಕರ್ನಾಟಕದಲ್ಲಿ 10 ವರ್ಷ ವ್ಯಾಸಂಗ ಮಾಡಿರುವ ಬಗ್ಗೆ ವ್ಯಾಸಂಗ ಪ್ರಮಾಣಪತ್ರ ನೀಡಬೇಕಾಗುತ್ತದೆ.
43 ಸೀಟುಗಳು:ಬಿಎ-ಎಲ್​ಎಲ್​ಬಿ(ಆನರ್ಸ್)ನಲ್ಲಿ ಲಭ್ಯವಿರುವ 120 ಸೀಟುಗಳ ಪೈಕಿ 30 ಸೀಟು ಹಾಗೂ ಎಲ್​ಎಲ್​ಎಂ ಕೋರ್ಸ್ ನಲ್ಲಿ ಲಭ್ಯವಿರುವ 50 ಸೀಟುಗಳ ಪೈಕಿ 13 ಸೀಟನ್ನು ಕನ್ನಡಿಗರಿಗೆ ಮೀಸಲಿಟ್ಟಿದೆ. ಈ ಶೇ.25 ಸೀಟುಗಳಲ್ಲಿ ಪ.ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದವರಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಲಾಗಿದೆ.
ಹಲವು ವರ್ಷಗಳ ಬೇಡಿಕೆ:ಕನ್ನಡಿಗರಿಗೆ ಶೇ.25 ಸೀಟು ನೀಡುವ ಸಂಬಂಧ ಹಲವು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ನಿಯಮ ರೂಪಿಸಿ ರಾಜ್ಯಪಾಲರ ಅನುಮೋದನೆ ಪಡೆದಿತ್ತು. ಎನ್​ಎಲ್​ಎಸ್​ಐಯು ಕಾಯ್ದೆಗೆ ತಿದ್ದುಪಡಿ ತಂದು ಆನಂತರ ಇದನ್ನು ಜಾರಿಗೊಳಿಸಲು ವಿಳಂಬವಾಗಿತ್ತು. ಸದ್ಯ ವಿವಿಯಲ್ಲಿ 660 ವಿದ್ಯಾರ್ಥಿಗಳಿದ್ದು, 2021-24ರ ಅವಧಿಯಲ್ಲಿ ಎನ್​ಎಲ್​ಎಸ್​ಐಯು ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಕುರಿತ ಯೋಜನೆ ರೂಪಿಸಿದೆ. ಶೇ.25 ಕನ್ನಡಿಗರ ಮೀಸಲಾತಿ ಹೊರತಾಗಿ ಮುಂದಿನ 4 ವರ್ಷಗಳಲ್ಲಿ ಶೇ.30 ಮಹಿಳಾ ಮೀಸಲಾತಿ, ಶೇ.10 ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹಾಗೂ ಶೇ.27 ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವ ಗುರಿ ಹೊಂದಿದೆ. ವಿವಿಯು 5 ಸಂಶೋಧನಾ ಕ್ಲಸ್ಟರ್ ಹುಡುಕಿದ್ದು, ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಗುರಿ ಇಟ್ಟುಕೊಂಡಿದೆ.
23ರಂದು ಕ್ಲಾಟ್ ಪರೀಕ್ಷೆ:ಕ್ಲಾಟ್ ಪರೀಕ್ಷೆ ಜು.23ರಂದು ಆನ್​ಲೈನ್​ನಲ್ಲಿ ನಡೆಯಲಿದೆ. ಪ್ರತಿ ವರ್ಷ 45 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.
ಈ ಬಾರಿ ಕಾನೂನು ಕೋರ್ಸ್ ವ್ಯಾಸಂಗಕ್ಕಾಗಿ ಕ್ಲಾಟ್​ಗೆ ಅರ್ಜಿ ಸಲ್ಲಿಸಿದ್ದೇನೆ. ಕನ್ನಡಿಗರಿಗೆ ಮೀಸಲಾತಿ ನೀಡಿರುವುದು ಖುಷಿಯ ವಿಚಾರ.
|ಚಂದ್ರಕಲಾಅಭ್ಯರ್ಥಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
