ಚಿಕ್ಕಮಗಳೂರು:ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯಲ್ಲಿ ನಡೆದಿದೆ.
ರಂಜಿತಾ (25) ಮೃತ ಮಹಿಳೆ. ಕೆಂಪನಹಳ್ಳಿಯ ಅರುಣ್ ಕುಮಾರ್ ಹಾಗೂ ರಂಜಿತಾ ಕಳೆದ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ರಂಜಿತಾ ಕುಟುಂಬದವರು ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಆರಂಭದಲ್ಲಿ ಸಂಸಾರದ ಬಂಡಿ ಚೆನ್ನಾಗಿಯೇ ಸಾಗುತ್ತಿತ್ತು. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ 2 ವರ್ಷದ ಮಗು ಸಹ ಕುಟುಂಬದ ಭಾಗವಾಗಿತ್ತು.
ಹೀಗಿರುವಾಗ ಮಂಗಳವಾರ ಸಂಜೆ 4 ಗಂಟೆಗೆ ಅರುಣ್, ರಂಜಿತಾಗೆ ಪೋನ್ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಹೇಳುತ್ತಾನೆ. ಇತ್ತ ಪತಿಯ ಮಾತು ಕೇಳಿದ ತಕ್ಷಣವೇ ರಂಜಿತಾ 2 ವರ್ಷ ಕಂದಮ್ಮನ ಎದುರಲ್ಲಿಯೇ ನೇಣು ಬಿಗಿದುಕೊಂಡಿದ್ದಾಳೆ. ಕೊರಳಿಗೆ ಹಗ್ಗ ಬಿಗಿಯಾಗುತ್ತಿದ್ದಂತೆ ಆಕೆಯ ಮನೆಯವರಿಗೆ ಪೋನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ಮುಟ್ಟಿಸಿದ್ದಾಳೆ. ಆದರೆ, ಕುಟುಂಬಸ್ಥರು ಬರೋವಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದೆ.
ಇದನ್ನೂ ಓದಿ:ಮಾಡೆಲಿಂಗ್ ಆಮಿಷವೊಡ್ಡಿ ಊರೆಲ್ಲ ಸುತ್ತಾಡಿಸಿದ ವಂಚಕಿ ಕೊನೆಗೆ ರೂಪದರ್ಶಿಗೆ ಕೊಟ್ಟಳು ಶಾಕ್​!
ಇನ್ನೂ ರಂಜಿತಾ ಮೂಲತಃ ಕಡೂರು ತಾಲೂಕಿನ ಬೀರೂರು ಸಮೀಪದ ವಗೇರಹಳ್ಳಿ ಮೂಲದವಳು. ಅರುಣ್ ಚಿಕ್ಕಮಗಳೂರಿನ ಮೆಸ್ಕಾಂ ಉದ್ಯೋಗಿ. ಮದುವೆಯಾದ ಆರಂಭದಲ್ಲಿ ಚೆನ್ನಾಗಿದ್ದ ಸಂಸಾರ ನಂತರದ ದಿನಗಳಲ್ಲಿ ಹಳಿತಪ್ಪಲು ಆರಂಭಿಸಿತು ಎಂದಿರುವ ರಂಜಿತಾ ಪಾಲಕರು, ಅರುಣ್​ ವಿರುದ್ಧ ಗಂಭೀರ ಆರೋಪ ಮಾಡಿ, ಆತನಿಗೆ ಅನೈತಿಕ ಸಂಬಂಧವಿತ್ತು. ದಿನನಿತ್ಯ ಕುಡಿದು ಕಿರುಕುಳ ಕೊಡುತ್ತಿದ್ದ ಎಂದಿದ್ದಾರೆ.
ಒಮ್ಮೆ ರಂಜಿತಾಗೆ ಫೋನ್​ ಮಾಡಿ ನೀನು ನನ್ನ ಬಿಡುವುದಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದೇನೆ ಎಂದು ಹೇಳಿದ್ದನಂತೆ. ಅಲ್ಲದೆ, ಬೀರೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ರಂಜಿತಾಳ ಸಹೋದರನ್ನೇ ಹೋಗಿ ಆತನನ್ನು ಶಿವಮೊಗ್ಗದ ಖಾಸಗಿ ಅಸ್ಪತ್ರೆ ದಾಖಲಿಸಿದ್ದರಂತೆ. ಹೀಗಾಗಿ ಅರುಣ್​ ವರ್ತನೆಯೇ ರಂಜಿತಾ ಸಾವಿಗೆ ಕಾರಣವೆಂದು ಪಾಲಕರು ಆರೋಪಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
https://www.youtube.com/watch?v=QMqQe2HwrZE&t=9s
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 8 =
Remember me
