ಬೆಂಗಳೂರು:ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಸೋಂಕಿತರಿಗೆ ಬೆಂಗಳೂರಲ್ಲಿ 15 ದಿನದ ಒಳಗೆ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಕ್ಟೋರಿಯಾ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಆವರಣದಲ್ಲಿ ಒಂದು ಕಟ್ಟಡದಲ್ಲಿ 85 ಹಾಸಿಗೆ, ಪಿಎಂಎಸ್ ಎಸ್ ವೈನಲ್ಲಿ 180 ಹಾಸಿಗೆಯನ್ನು ಸಂಪೂರ್ಣ ಕೋವಿಡ್ ಗೆ ಮೀಸಲಿಡಲಾಗುವುದು. ಜೊತೆಗೆ 100 ರಿಂದ 150 ಐಸಿಯು ಹಾಸಿಗೆ ಇರುವ ಆಸ್ಪತ್ರೆ ನಿರ್ಮಿಸಲಾಗುವುದು. ಇದನ್ನು ಅಂತಿಮಗೊಳಿಸಲಾಗುವುದು. ಹಲವು ಜಿಲ್ಲಾ ಕೇಂದ್ರಗಳ ಮೆಡಿಕಲ್ ಕಾಲೇಜುಗಳ ಆವರಣದಲ್ಲಿ ಈ ರೀತಿ ಮೇಕ್ ಶಿಫ್ಟ್ ಆಸ್ಪತ್ರೆ ರೂಪಿಸಲಾಗುವುದು ಎಂದರು.
ಬೆಂಗಳೂರಿಗೆ 5,000, ಬೇರೆ ಜಿಲ್ಲೆಗಳಿಗೆ ತಲಾ ಒಂದು ಸಾವಿರದಂತೆ ಪೋರ್ಟೇಬಲ್ ಆಕ್ಸಿಜನ್ ನೀಡಲಾಗುವುದು. ಆಕ್ಸಿಜನ್ ಬೇಕಾದವರು ಮಾತ್ರ ಇಂತಹ ಸೌಲಭ್ಯ ಬಳಸಿಕೊಳ್ಳಬಹುದು. ಮನೆ ಆರೈಕೆಯಲ್ಲಿರುವವರಿಗೆ ಸಿಐಐ ಸಹಯೋಗದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದರು.
ಇದನ್ನೂ ಓದಿ:ರೋಗಿಗಳ ಸಂಬಂಧಿಕರಂತೆ ಸೋಗು ಹಾಕಿ ರೆಮ್​ಡೆಸಿವಿರ್ ಸಂಗ್ರಹಿಸಿದ ಕಾಳಸಂತೆಕೋರರು !
ಖಾಸಗಿ ಆಸ್ಪತ್ರೆಗಳಲ್ಲಿ 75% ಹಾಸಿಗೆಯನ್ನು ಕೋವಿಡ್ ಗೆ ಮೀಸಲಿಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಎರಡರಿಂದ ಎರಡೂವರೆ ಸಾವಿರ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗುವುದು. ಒಂದು ಘಟಕವು 200-250 ಹಾಸಿಗೆಗಳನ್ನು ಹೊಂದಿರುತ್ತದೆ. ಆಸ್ಪತ್ರೆಗಳ ಆವರಣದಲ್ಲೇ ಇದನ್ನು ಅಭಿವೃದ್ಧಿಪಡಿಸಲಾಗುವುದು. 15 ದಿನದೊಳಗೆ ಇದನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ದಿನಕ್ಕೆ 300 ಟನ್ ಆಕ್ಸಿಜನ್ ಪೂರೈಕೆ ನಿಗದಿಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ 800 ಟನ್ ಗೆ ಹೆಚ್ಚಿಸಲಾಗಿದೆ. ಇದು ಏಪ್ರಿಲ್ 30 ರವರೆಗೆ ಸಿಗಲಿದೆ. ಒಂದು ಲಕ್ಷಕ್ಕೂ ಹೆಚ್ಚು ರೆಮ್ ಡಿಸಿವಿರ್ ಬೇಕೆಂದು ಕೋರಿದ್ದು, ಅದರಂತೆ 1.22 ಲಕ್ಷ ಔಷಧಿ ದೊರೆತಿದೆ ಎಂದರು.
ಸಭೆ: ರಾಜ್ಯದಲ್ಲಿ ಆಕ್ಸಿಜನ್ ಹಾಗೂ ರೆಮ್ ಡಿಸಿವಿರ್ ಲಭ್ಯತೆ ಕುರಿತಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ನಡೆದ ಸಭೆಯಲ್ಲಿ ಸಚಿವರು ಪಾಲ್ಗೊಂಡರು. ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ಔಷಧಿ ನಿರಂತರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸಚಿವರು ಸಭೆಗೆ ತಿಳಿಸಿದರು.
ಕೋವಿಡ್​ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಕ್ರಮ ಕೈಗೊಂಡ ಟ್ವಿಟ್ಟರ್ ಮತ್ತು ಫೇಸ್​ಬುಕ್

ಕರೊನಾದಿಂದ ಗುಣಮುಖವಾಗುತ್ತಿದ್ದಂತೆಯೇ ಮನೆ ಬಾಗಿಲಿಗೆ ಬಂತು 5 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eleven =
Remember me
