ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ಸತತ 4 ದಿನವೂ ವರುಣಾರ್ಭಟ ಮುಂದುವರಿದಿದೆ.ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಆರ್​.ಆರ್​.ನಗರ ವಲಯ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾನುವಾರ ಧಾರಾಕಾರವಾಗಿ ಸುರಿದಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಮಧ್ಯಾಹ್ನ 2.30ಕ್ಕೆ ಶುರುವಾದ ಮಳೆ ಅರ್ಧಗಂಟೆ ಕಾಲ ಹಲವು ಪ್ರದೇಶಗಳಲ್ಲಿ ಬಿರುಸಾಗಿ ಸುರಿಯಿತು.ಮಾರತ್ತಹಳ್ಳಿ, ವಿಶ್ವನಾಥ ನಾಗೇಹಳ್ಳಿ, ವನ್ನರ್​ಪೇಟೆ, ದೊರೆಸಾನಿಪಾಳ್ಯ, ಪಟ್ಟಾಭಿರಾಮನಗರ, ಬೊಮ್ಮನಹಳ್ಳಿ, ಬಿಳೇಕಹಳ್ಳಿ, ಮಾರುತಿ ಮಂದಿರ, ಎಚ್​ಎಎಲ್​ ವಿಮಾನ ನಿಲ್ದಾಣ, ಉತ್ತರಹಳ್ಳಿ, ಹಂಪೆನಗರದಲ್ಲಿ ಸರಾಸರಿ 10 ಮಿಮೀ ಮಳೆಯಾಗಿದೆ. ನಾಗಬಾವಿ, ನಾಯಂಡಹಳ್ಳಿ, ಮೈಸೂರು ರಸ್ತೆ, ಚಾಮರಾಜಪೇಟೆ, ಕೆಂಗೇರಿ, ಇಟ್ಟಮಡು, ಮೆಜೆಸ್ಟಿಕ್​, ಕೆ.ಆರ್​.ಮಾರುಕಟ್ಟೆ ಸೇರಿ ನಗರದ ವಿವಿಧ ಭಾಗಗಳಲ್ಲಿಯೂ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಯಿತು. ಕೆಲ ರಸ್ತೆಗಳ ಮೇಲೆ ನೀರು ನುಗ್ಗಿದ ಪರಿಣಾಮ ವಾಹನ ಸವಾರರ ಪರದಾಡಿದರು. ಮಳೆಯಿಂದಾಗಿ ಮೇಲ್ಸುತುವೆ ಸೇರಿ ಇತರ ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಮ್ಯಾನ್​ಹೋಲ್​ ಹುಕ್ಕಿ ಹರಿದ ಪರಿಣಾಮ ರಸ್ತೆಯ ಮೇಲೆ ಕೊಳಚೆ ನೀರು ಹರಿಯುವ ದೃಶ್ಯ ಅಲ್ಲೆಲ್ಲಿ ಕಂಡುಬಂತು.ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದವರು ಮಳೆಯಿಂದ ತೊಂದರೆಗೆ ಸಿಲುಕಿದರು.
4 ದಿನ ಮಳೆ:ನಗರದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಕೆಲವೆಡೆ ಬಿರುಸಾಗಿ ಸುರಿದರೆ ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಗುಡುಗು ಮಿಂಚು, ಬಿರು ಗಾಳಿ ಸಹಿತ ಮಳೆಯಾಗಲಿದೆ. ಮುಂದಿನ ಎರಡು ದಿನ ಮೋಡ ಕವಿಡ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿ.ಸೆ ಮತ್ತು 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕುಮಾರಸ್ವಾಮಿಗೆ ಕೇಂದ್ರ ಮಂತ್ರಿ ಸ್ಥಾನ, ಜೆಡಿಎಸ್‌ನಲ್ಲಿ ಹೊಸ ಸಂಚಲನ
ಬಿಬಿಎಂಪಿಗೆ ಫಜೀತಿ:ಮರ, ಕೊಂಬೆ ಮುರಿದು ಬಿದ್ದಿರುವ ಸಂಬಂಧಪಟ್ಟಂತೆ ಬಿಬಿಎಂಪಿ ಸಹಾಯವಾಣಿಗೆ ಸಾವಿರಾರು ದೂರುಗಳು ಬರುತ್ತಿರುವ ನಡುವೆಯೂ ನಿರಂತರ ಮಳೆಯಿಂದಾಗಿ ಬಿಬಿಎಂಪಿ ಅರಣ್ಯ ವಿಭಾಗ ಹೈರಾಣಾಗಿದೆ.ಮರ, ಕೊಂಬೆಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ ನಿರಂತರವಾಗಿ ವರುಣಾರ್ಭಟಕ್ಕೆ ಒಣಗಿದ, ಬೀಳುವ ಹಂತದಲ್ಲಿರುವ ಮರ ಧರಾಶಾಹಿಯಾಗುತ್ತಿವೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿ ವಾಹನ ನಿಲ್ಲಿಸಿದ್ದ ವಾಹನಗಳು ಮರ ಬಿದ್ದ ರಭಸಕ್ಕೆ ಜಖಂವಾಗುತ್ತಿವೆ.ಅಲ್ಲದೆ, ಮಳೆ ಬೀಳುವ ಸಂದರ್ಭದಲ್ಲಿ ವಾಹನ ಸವಾರರು, ಪಾದಚಾರಿಗಳು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ?ಪ್ರದೇಶ                ಮಿಮೀವಿದ್ಯಾಪೀಠ                26ಕೆಂಗೇರಿ                 20ರಾಜರಾಜೇಶ್ವರಿನಗರ     19ನಾಯಂಡಹಳ್ಳಿ           18ಎಚ್​.ಗೊಲ್ಲಹಳ್ಳಿ         17ಹೆಮ್ಮೀಗೆಪುರ            16ಹಂಪೆನಗರ             15ಉತ್ತರಹಳ್ಳಿ                14ಎಚ್​ಎಎಲ್​ ವಿಮಾನ ನಿಲ್ದಾಣ 14
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
