ಬೆಂಗಳೂರು:ನಗರರಾಭಿವೃದ್ಧಿ ಇಲಾಖೆ 2014ರಲ್ಲಿ ಕೈಗೆತ್ತಿಕೊಂಡಿದ್ದ ಬಿಬಿಎಂಪಿ ವಾರ್ಡ್​ಗಳ ಮರುವಿಂಗಡಣೆ ಕಾರ್ಯ ಇದೀಗ ಪೂರ್ಣಗೊಂಡಿದ್ದು, ಬುಧವಾರ (ಜೂ.24) ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ.
2011ರ ಜನಗಣತಿ ಆಧಾರದ ಮೇಲೆ ಕರ್ನಾಟಕ ಪೌರಾಡಳಿತ ಕಾಯ್ದೆ -1976, ಕಲಂ (7)(2)(ಎ) ಅನ್ವಯ ಈ ಮರುವಿಂಗಡಣೆ ಮಾಡಲಾಗಿದೆ. 2014ರಲ್ಲಿ ನಗರಾಭಿವೃದ್ಧಿ ಇಲಾಖೆ ಕೈಗೆತ್ತಿಕೊಂಡಿದ್ದು, 2020ಕ್ಕೆ ಅಂತಿಮ ರೂಪುರೇಷೆ ಸಿದ್ಧವಾಗುತ್ತಿದೆ. ಕೆಲವು ವಾರ್ಡ್​ಗಳಲ್ಲಿ ಗಡಿಗಳು ಹಾಗೂ ಹೆಸರಿನಲ್ಲಿ ಅದಲು ಬದಲಾಗಿದ್ದು, ಪ್ರಸ್ತುತ 198 ವಾರ್ಡ್​ಗಳನ್ನು ಹಾಗೆಯೇ ಉಳಿಸಿಕೊಂಡಿದ್ದು, ಅದರಲ್ಲಿ 26 ವಾರ್ಡ್​ಗಳ ಗಡಿ ಹಾಗೂ ಹೆಸರನ್ನು ಮಾತ್ರ ಬದಲಾಯಿಸಲಾಗಿದೆ.
ವಾರ್ಡ್​ಗಳ ಪ್ರದೇಶಗಳು ಬದಲಾವಣೆ:ಮಾಜಿ ಮೇಯರ್​ಗಳಾದ ಜಿ. ಪದ್ಮಾವತಿ ಪ್ರತಿನಿಧಿಸುವ ವಾರ್ಡ್ ಸೇರಿ 26 ವಾರ್ಡ್​ಗಳ ಭಾಗಶಃ ಪ್ರದೇಶಗಳು ಹಾಗೂ ಕೆಲವು ಹೆಸರನ್ನು ಬದಲಾಯಿಸಲಾಗಿದೆ. ಈಗ ಕೈಬಿಡಲಾಗಿರುವ ವಾರ್ಡ್​ಗಳಲ್ಲಿ 13 ಕಾಂಗ್ರೆಸ್, 12 ಬಿಜೆಪಿ ಹಾಗೂ ಜೆಡಿಎಸ್ ಪ್ರತಿನಿಧಿಸುವ ಒಂದು ವಾರ್ಡ್ ಸೇರಿದೆ. ನಗರದ ಕೇಂದ್ರ ಭಾಗದಲ್ಲಿರುವ ವಾರ್ಡ್ ಗಳ ಸಂಖ್ಯೆ ಕಡಿಮೆ ಮಾಡಿ, ಹೊರಭಾಗದ 110 ಹಳ್ಳಿಗಳನ್ನು ಸೇರಿಸಲಾಗಿದೆ. ಪದ್ಮನಾಭನಗರ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳ ವಾರ್ಡ್ ವ್ಯಾಪ್ತಿಯಲ್ಲಿ ಏರುಪೇರಾಗಿದೆ. ಯಲಹಂಕ ಕ್ಷೇತ್ರದಲ್ಲಿ ವಾರ್ಡ್​ಗಳ ಸಂಖ್ಯೆ 4ರಿಂದ 6ಕ್ಕೇರಿದೆ.
ಪ್ರತಿ ವಾರ್ಡ್​ಗೆ 42 ಸಾವಿರ ಜನಸಂಖ್ಯೆ:ನಗರ ಜಿಲ್ಲೆಯ 27 ವಿಧಾನಸಭಾ ಕ್ಷೇತ್ರಗಳಲ್ಲಿ 2011ರ ಜನಗಣತಿ ಪ್ರಕಾರ 96,21,551 ಜನಸಂಖ್ಯೆಯಿದೆ. ಈ ಜನಸಂಖ್ಯೆಯನ್ನು 198 ವಾರ್ಡ್​ಗಳಿಗೆ ಸರಾಸರಿ 42,645 ರಂತೆ ಹಂಚಿಕೆ ಮಾಡಿ ಮರುವಿಂಗಡಣೆ ಮಾಡಲಾಗಿದೆ. ಕೇಂದ್ರ ಭಾಗಕ್ಕಿಂತ ಹೊರ ವಲಯದಲ್ಲಿಯೇ ಜನಸಂಖ್ಯೆ ತೀವ್ರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೆಲವು ವಾರ್ಡ್​ಗಳಲ್ಲಿ ಸ್ಥಳ ಸೇರ್ಪಡೆಯಾದರೆ, ಇನ್ನು ಕೆಲವನ್ನು ಕೈಬಿಡಲಾಗಿದೆ.
ವಿಧಾನಸಭಾ ಕ್ಷೇತ್ರವಾರು ವಾರ್ಡ್ ಹಂಚಿಕೆ
ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮರು ವಿಂಗಡಣೆ ಮಾಡಲಾಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್​ಗಳ ಸಂಖ್ಯೆ 4ರಿಂದ 6ಕ್ಕೆ, ಆರ್.ಆರ್. ನಗರ ಕ್ಷೇತ್ರದಲ್ಲಿ 9 ರಿಂದ 11ಕ್ಕೆ, ಯಶವಂತಪುರ ಕ್ಷೇತ್ರದಲ್ಲಿ 5 ರಿಂದ 7ಕ್ಕೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 8ರಿಂದ 10ಕ್ಕೆ, ಬೊಮ್ಮನಹಳ್ಳಿಯಲ್ಲಿ 8ರಿಂದ 10ಕ್ಕೆ, ಕೆ.ಆರ್.ಪುರದಲ್ಲಿ 9ರಿಂದ 11ಕ್ಕೆ, ಮಹದೇವಪುರ ಕ್ಷೇತ್ರದಲ್ಲಿ 9ರಿಂದ 11ಕ್ಕೆ ಏರಿಕೆ ವಾರ್ಡ್ ಸಂಖ್ಯೆ ಏರಿಕೆಯಾಗಿವೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಾರ್ಡ್​ಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಮರು ವಿಂಗಡಣೆ ಪ್ರಕಾರ ವಾರ್ಡ್ ಸಂಖ್ಯೆ ಮತ್ತು ಹೆಸರು
1-ಕೆಂಪೇಗೌಡ, 2-ಚೌಡೇಶ್ವರಿ, 3-ಅಟ್ಟೂರು, 4-ಯಲಹಂಕ ಉಪನಗರ, 5-ಕೋಗಿಲು, 6-ಥಣಿಸಂದ್ರ, 7-ಜಕ್ಕೂರು, 8-ಗುಂಡಾಂಜನೇಯ ವಾರ್ಡ್, 9-ಅಮೃತಹಳ್ಳಿ, 10-ಕೊಡಿಗೇಹಳ್ಳಿ, 11-ವಿದ್ಯಾರಣ್ಯಪುರ, 12-ದೊಡ್ಡಬೊಮ್ಮಸಂದ್ರ, 13-ರಾಮಚಂದ್ರಪುರ, 14-ಶೆಟ್ಟಿಹಳ್ಳಿ, 15-ಚಿಕ್ಕಸಂದ್ರ, 16-ಬಾಗಲಗುಂಟೆ, ಬೆಂಗ17-ಮಲ್ಲಸಂದ್ರ, 18-ಟಿ. ದಾಸರಹಳ್ಳಿ, 19-ಜಾಲಹಳ್ಳಿ, 20-ಬೃಂದಾವನನಗರ, 21-ಜೆ.ಪಿ.ಪಾರ್ಕ್, 22-ಯಶವಂತಪುರ, 23-ಮತ್ತಿಕೆರೆ, 24-ರಾಧಾಕೃಷ್ಣ ದೇವಸ್ಥಾನ, 25-ಸಂಜಯನಗರ, 26-ಹೆಬ್ಟಾಳ, 27-ವಿಶ್ವನಾಥ ನಾಗೇನಹಳ್ಳಿ, 28-ಗೋವಿಂದಪುರ, 29-ಹೆಣ್ಣೂರು, 30-ಚಳ್ಳಕೆರೆ, 31-ಹೊರಮಾವು, 32-ಕಲ್ಕೆರೆ, 33-ಬಾಣಸವಾಡಿ, 34-ಕಮ್ಮನಹಳ್ಳಿ, 35-ಕಾಚರಕನಹಳ್ಳಿ 36-ಎಚ್​ಬಿಆರ್ ಲೇಔಟ್, 37-ಕಾಡುಗೊಂಡನಹಳ್ಳಿ, 38-ಕುಶಾಲನಗರ, 39-ಕಾವಲ್​ಭೈರಸಂದ್ರ, 40-ಚಾಮುಂಡಿನಗರ, 41-ಗಂಗಾನಗರ, 42-ಅರಮನೆ ನಗರ, 43-ಚೊಕ್ಕಸಂದ್ರ, 44-ದೊಡ್ಡಬಿದರಕಲ್ಲು, 45-ಪೀಣ್ಯ ಕೈಗಾರಿಕಾ ಪ್ರದೇಶ, 46-ಲಕ್ಷ್ಮೀದೇವಿನಗರ, 47-ನಂದಿನಿಲೇಔಟ್, 48-ಮಾರಪ್ಪನಪಾಳ್ಯ, 49-ಮಲ್ಲೇಶ್ವರ, 50-ಜಯಚಾಮರಾಜೇಂದ್ರನಗರ, 51-ದೇವರಜೀವನಹಳ್ಳಿ, 52-ಮುನೇಶ್ವರನಗರ, 53-ಲಿಂಗರಾಜಪುರ, 54-ಬೆನ್ನಿಗಾನಹಳ್ಳಿ, 55-ವಿಜ್ಞಾನಪುರ, 56-ರಾಮಮೂರ್ತಿನಗರ, 57-ಕೆ.ಆರ್.ಪುರ, 58-ಬಸವನಪುರ, 59-ದೇವಸಂದ್ರ, 60-ಎ.ನಾರಾಯಣಪುರ, 61-ಸಿ.ವಿ.ರಾಮನ್​ನಗರ, 62-ಸರ್ವಜ್ಞನಗರ, 63-ಮಾರುತಿ ಸೇವಾನಗರ, 64-ಸಗಾಯಪುರ, 65-ಪುಲಕೇಶಿನಗರ, 66-ರಾಮಸ್ವಾಮಿಪಾಳ್ಯ, 67-ರಾಜಮಹಲ್ ಗುಟ್ಟಹಳ್ಳಿ, 68-ಸುಬ್ರಹ್ಮಣ್ಯನಗರ, 69-ನಾಗಪುರ, 70-ಮಾರುತಿನಗರ, 71-ಲಗ್ಗೆರೆ, 72-ರಾಜಗೋಪಾಲನಗರ, 73-ಹೆಗ್ಗನಹಳ್ಳಿ, 74-ಸುಂಕದಕಟ್ಟೆ, 75-ಗೊಲ್ಲರಪಾಳ್ಯ (ಹೊಸಹಳ್ಳಿ), 76-ಹೇರೋಹಳ್ಳಿ, 77-ಸರ್ ಎಂ. ವಿಶ್ವೇಶ್ವರಯ್ಯ, 78-ಕೊಟ್ಟಿಗೇಪಾಳ್ಯ, 79-ಶಕ್ತಿಗಣಪತಿನಗರ, 80-ಶಂಕರಮಠ, 81-ಮಂಜುನಾಥನಗರ, 82-ಶ್ರೀರಾಮಮಂದಿರ, 83-ದಯಾನಂದನಗರ, 84-ಗಾಯಿತ್ರಿನಗರ, 85-ದತ್ತಾತ್ರೇಯ ದೇವಸ್ಥಾನ, 86-ಶೇಷಾದ್ರಿಪುರ, 87-ವಸಂತನಗರ, 88-ಭಾರತಿನಗರ, 89-ಹಲಸೂರು, 90-ಹೊಯ್ಸಳನಗರ, 91-ಹೊಸ ತಿಪ್ಪಸಂದ್ರ, 92-ವಿಜ್ಞಾನನಗರ, 93-ಗರುಡಾಚಾರ್​ಪಾಳ್ಯ, 94-ಹೂಡಿ, 95-ಕಾಡುಗುಡಿ, 96-ಹಗದೂರು, 97-ವೈಟ್​ಫೀಲ್ಡ್, 98-ದೊಡ್ಡ್ಡಾನೆಕ್ಕುಂದಿ, 99-ಎಚ್​ಎಎಲ್ ವಿಮಾನನಿಲ್ದಾಣ, 100-ಕೋನೇನ ಅಗ್ರಹಾರ, 101-ಜೀವನ್​ಬಿಮಾನಗರ, 102-ಜೋಗುಪಾಳ್ಯ, 103-ಶಾಂತಲಾನಗರ, 104-ಸಂಪಂಗಿರಾಮನಗರ, 105-ಗಾಂಧಿನಗರ, 106-ಓಕಳಿಪುರ, 107-ರಾಜಾಜಿನಗರ, 108-ಬಸವೇಶ್ವರನಗರ, 109-ವೃಷಭಾವತಿನಗರ, 110-ಕಾವೇರಿಪುರ, 111-ಅಗ್ರಹಾರ ದಾಸರಹಳ್ಳಿ, 112-ಡಾ.ರಾಜ್​ಕುಮಾರ್, 113-ಚಿಕ್ಕಪೇಟೆ, 114-ಚಲವಾದಿಪಾಳ್ಯ, 115-ಬಿನ್ನಿಪೇಟೆ, 116-ಜಗಜೀವನರಾಂನಗರ, 117-ಕೆಂಪಾಪುರ ಅಗ್ರಹಾರ, 118-ವಿಜಯನಗರ, 119-ಹೊಸಹಳ್ಳಿ, 120-ಮಾರೇನಹಳ್ಳಿ, 121-ಹನುಮಗಿರಿ ದೇವಸ್ಥಾನ, 122-ಕಲ್ಯಾಣನಗರ, 123-ಮಾರುತಿ ಮಂದಿರ, 124-ಅತ್ತಿಗುಪ್ಪೆ, 125-ಹಂಪಿನಗರ, 126-ಬಾಪೂಜಿನಗರ, 127-ಪಾದರಾಯನಪುರ, 128-ಕೆ.ಆರ್.ಮಾರುಕಟ್ಟೆ, 129-ಧರ್ಮರಾಯಸ್ವಾಮಿ ದೇವಸ್ಥಾನ, 130-ಹೊಂಬೇಗೌಡನಗರ, 131-ಶಾಂತಿನಗರ, 132-ನೀಲಸಂದ್ರ, 133-ವನ್ನಾರಪೇಟೆ, 134-ಈಜೀಪುರ, 135-ಕೋರಮಂಗಲ, 136-ಲಕ್ಕಸಂದ್ರ, 137-ಸಿದ್ದಾಪುರ, 138-ವಿಶ್ವೇಶ್ವರಪುರ, 139-ಸುಂಕೇನಹಳ್ಳಿ, 140-ಆಜಾದ್​ನಗರ, 141-ಗಾಳಿ ಆಂಜನೇಯ ದೇವಸ್ಥಾನ, 142-ದೀಪಾಂಜಲಿನಗರ, 143-ನಾಯಂಡಹಳ್ಳಿ, 144-ನಾಗರಬಾವಿ, 145-ಜ್ಞಾನಭಾರತಿ, 146-ಉಲ್ಲಾಳು, 147-ನಾಗದೇವನಹಳ್ಳಿ, 148-ಕೆಂಗೇರಿ, 149-ರಾಜರಾಜೇಶ್ವರಿನಗರ, 150-ಹೊಸಕೆರೆಹಳ್ಳಿ, 151-ಗಿರಿನಗರ, 152-ಶ್ರೀನಗರ, 153-ಹನುಮಂತನಗರ, 154-ಕತ್ರಿಗುಪ್ಪೆ, 155-ವಿದ್ಯಾಪೀಠ, 156-ಬಸವನಗುಡಿ, 157-ಯಡಿಯೂರು, 158-ಭೈರಸಂದ್ರ, 159-ಜಯನಗರ ಪೂರ್ವ, 160-ಗುರಪ್ಪನಪಾಳ್ಯ, 161-ಸುದ್ದಗುಂಟೆಪಾಳ್ಯ, 162-ಬಿಟಿಎಂ ಬಡಾವಣೆ, 163-ಮಡಿವಾಳ, 164-ಜಕ್ಕಸಂದ್ರ, 165-ದೊಮ್ಮಲೂರು, 166-ಮಾರತ್​ಹಳ್ಳಿ, 167-ವರ್ತರು, 168-ದೊಡ್ಡಕಮನ್ನಳ್ಳಿ, 169-ಬೆಳ್ಳಂದೂರು, 170-ಅಗರ, 171-ಎಚ್​ಎಸ್​ಆರ್ ಲೇಔಟ್, 172-ಬೊಮ್ಮನಹಳ್ಳಿ, 173-ಬಿಳೇಕಲ್ಲಹಳ್ಳಿ, 174-ಸಾರಕ್ಕಿ, 175-ರಾಗೀಗುಡ್ಡ, 176-ಕರೀಸಂದ್ರ, 177-ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಾಲಯ, 178-ಪದ್ಮನಾಭನಗರ, 179-ಇಟ್ಟಮಡು, 180-ಉತ್ತರಹಳ್ಳಿ, 181-ಸುಬ್ರಹ್ಮಣ್ಯಪುರ, 182-ವಸಂತಪುರ, 183-ಕುಮಾರಸ್ವಾಮಿ ಲೇಔಟ್, 184-ಬನಶಂಕರಿ ದೇವಸ್ಥಾನ, 185-ಯಲಚೇನಹಳ್ಳಿ, 186-ಜರಗನಹಳ್ಳಿ, 187-ಚುಂಚಘಟ್ಟ, 188-ಪುಟ್ಟೇನಹಳ್ಳಿ, 189-ಹೊಂಗಸಂದ್ರ, 190-ಸಿಂಗಸಂದ್ರ, 191-ಕೂಡ್ಲು, 192-ಬೇಗೂರು, 193-ದೇವರಚಿಕ್ಕನಹಳ್ಳಿ, 194-ಅರಕೆರೆ, 195-ಕಾಳೇನ ಅಗ್ರಹಾರ, 196-ಗೊಟ್ಟಿಕೆರೆ, 197-ಅಂಜನಾಪುರ, 198-ಹೆಮ್ಮಿಗೆಪುರ
ಹೊಸ ಅಧಿಸೂಚನೆ ಅನ್ವಯ ಚುನಾವಣೆ
ಈ ಮೊದಲು ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಅಸ್ತಿತ್ವದಲ್ಲಿದ್ದಾಗ 100 ವಾರ್ಡ್​ಗಳಿದ್ದವು. ಆದರೆ, 2007ರಲ್ಲಿ ಬಿಬಿಎಂಪಿ ರಚನೆಗೊಂಡ ನಂತರ 7 ನಗರಸಭೆಗಳು, 1 ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಅಂದಿನ ಜನಸಂಖ್ಯೆ ಆಧಾರದಲ್ಲಿ 198 ವಾರ್ಡ್​ಗಳನ್ನಾಗಿ ವಿಂಗಡಿಸಲಾಗಿತ್ತು. ಇದೀಗ 2011ರ ಜನಗಣತಿ ಆಧಾರದಲ್ಲಿ ವಾರ್ಡ್​ಗಳ ಮರುವಿಂಗಡಣೆ ಮಾಡಲಾಗಿದೆ. ಮಾ.2ರಂದು ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು 15 ದಿನ ಅವಕಾಶ ನೀಡಲಾಗಿತ್ತು. ಎಲ್ಲರ ಆಕ್ಷೇಪಣೆ ಆಧರಿಸಿ ಸಣ್ಣಪುಟ್ಟ ಬದಲಾವಣೆಯೊಂದಿಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಪ್ರಸ್ತುತ ಪಾಲಿಕೆ ಸದಸ್ಯರ ಅವಧಿ ಸೆ.10ಕ್ಕೆ ಅಂತ್ಯವಾಗಲಿದ್ದು, ಹೊಸ ವಾರ್ಡ್​ಗಳ ಆಧಾರದಲ್ಲಿ ಚುನಾವಣೆ ನಡೆಯಲಿದೆ.
ವ್ಯಸನದ ಸುಳಿಗೆಸಿಲುಕದಿರಿ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fourteen =
Remember me
