ಚಿಕ್ಕಮಗಳೂರು: ರಾಜ್ಯ ಮಾತ್ರವಲ್ಲದೆ ದೇಶದ ಹಲವೆಡೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನವೂ ಒಂದಲ್ಲ ಒಂದು ಹೃದಯಾಘಾತದಿಂದಾದ ಸಾವಿನ ಪ್ರಕರಣ ಕೇಳಿ ಬರುತ್ತಿವೆ. ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಇಂದು 27 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ.
ಇದನ್ನೂ ಓದಿ:ಖ್ಯಾತ ವಕೀಲ ಸಿ.ವಿ.ನಾಗೇಶ್ ಪುತ್ರ ಅರುಣ್ ಅವಧಾನಿ ಹೃದಯಾಘಾತದಿಂದ ನಿಧನ
ಟ್ರೆಕ್ಕಿಂಗ್​ಗೆ ಎಂದು ತೆರಳಿದ್ದ ಯುವಕ, ಮಾರ್ಗಮಧ್ಯೆಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ರಕ್ಷಿತ್ ಎಂಬಾತ ಸಾವಿಗೀಡಾದ ಯುವಕ. ಮೈಸೂರು ಮೂಲದ ಏಳು ಯುವಕರ ತಂಡ ಚಿಕ್ಕಮಗಳೂರು ಜಿಲ್ಲೆಗೆ ಪಿಕ್​ನಿಕ್​ಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ:ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ಇವರು ಕುದುರೆಮುಖದಿಂದ ನೇತ್ರಾವತಿ ಪಿಕ್ ಸ್ಪಾಟ್​ಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ರಕ್ಷಿತ್​ಗೆ ಹೃದಯಾಘಾತವಾಗಿದೆ. ಸಾವಿಗೀಡಾದ ಅವರ ಶವವನ್ನು ಜೀಪ್​ನಲ್ಲಿ ಕಳಸಕ್ಕೆ ತರಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ತಹಶೀಲ್ದಾರ್​ ಮನೇಲಿ ಸಿಕ್ತು ಲೀಟರ್​​ಗಟ್ಟಲೆ ಮದ್ಯ!; ಲೋಕಾಯುಕ್ತ ದಾಳಿ ವೇಳೆ ಪತ್ತೆ

ಭೀಕರ ಅಪಘಾತ: ಎರಡೂ ಕಾರುಗಳು ಜಖಂ, ರಾಜಕಾರಣಿಯ ಪುತ್ರ ಸೇರಿ ನಾಲ್ವರಿಗೆ ಗಾಯ, ಮೂವರ ಪರಿಸ್ಥಿತಿ ಗಂಭೀರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + 13 =
Remember me
