ಕುಷ್ಟಗಿ (ಕೊಪ್ಪಳ):ಅಪ್ಪನ ಅಕಾಲಿಕ ಸಾವಿನಿಂದಾಗಿ ಹೆಗಲೇರಿದ 29 ಅಡಿ ಎತ್ತರದ ತೇರು ನಿರ್ಮಾಣ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ಸೋದರರಿಬ್ಬರ ಸಾಧನೆಯ ಕತೆ ಇದು. ಈ ಇಬ್ಬರೂ ಅಂಧರಾದರೂ, ಕೇವಲ ಸ್ಪರ್ಶಜ್ಞಾನದಿಂದಲೇ ಕಟ್ಟಿಗೆಯಲ್ಲಿ ವಿವಿಧ ಚಿತ್ತಾರ ಬಿಡಿಸುವಲ್ಲಿ ಪರಿಣತಿ ಸಾಧಿಸಿರುವುದು ವಿಶೇಷ.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಬೇಲೂರಿನ ಸುರೇಶ ಮತ್ತು ಮಹೇಶ ಬಡಿಗೇರ ಅವರೇ ಈ ಸಾಹಸಿಗರು. ಇವರ ತಂದೆ ಮಲ್ಲಪ್ಪ ಬಿಡಗೇರ ರಾಜ್ಯ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ. ಇವರ ಕಲೆಯ ಅರಿವಿದ್ದ ಪಟ್ಟಲಚಿಂತಿ ಗ್ರಾಮಸ್ಥರು ತಮ್ಮೂರಿನ ಮಾರುತೇಶ್ವರ ದೇವಸ್ಥಾನಕ್ಕೆ ತೇರು ನಿರ್ವಿುಸಿಕೊಡುವಂತೆ ಕೇಳಿಕೊಂಡಿದ್ದರು. ಈ ಸಂಬಂಧ ಒಪ್ಪಂದವೂ ಆಗಿತ್ತು. ಆದರೆ ಒಪ್ಪಂದವಾದ ಕೆಲವೇ ದಿನಗಳಲ್ಲಿ ರಥಶಿಲ್ಪಿ ನಿಧನರಾದರು. 2018ರಲ್ಲಿ ಒಪ್ಪಂದ ಏರ್ಪಟ್ಟ ಬಳಿಕ ಒಂದು ವರ್ಷದಲ್ಲಿ ಮಕ್ಕಳು ತೇರು ನಿರ್ವಿುಸಿಕೊಟ್ಟಿದ್ದಾರೆ. ಈ ತೇರನ್ನು ಏ.16ರ ಜಾತ್ರಾ ಮಹೋತ್ಸವದಲ್ಲಿ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಕಣ್ಣನ್ನು ಕಸಿದ ಕಾಯಿಲೆ:ಈ ಸೋದರರು ಹುಟ್ಟುಕುರುಡರಲ್ಲ. 2007ರಲ್ಲಿ ರೆಟಿನಾಟಿಕ್ ಪ್ರಿಗ್ಮೆಂಟೋಜಾ (ಆರ್​ಪಿ) ಕಾಯಿಲೆಗೆ ತುತ್ತಾಗಿ ಕಣ್ಣು ಕಳೆದುಕೊಂಡಿದ್ದಾರೆ. ‘ಈ ಕಾಯಿಲೆಗೆ ಜಗತ್ತಿನ ಎಲ್ಲಿಯೂ ಚಿಕಿತ್ಸೆಯಿಲ್ಲ ಎಂಬುದನ್ನು ತಿಳಿದು ತಂದೆ ಕಲಿಸಿಕೊಟ್ಟ ಕಲೆಯನ್ನೇ ಸ್ಪರ್ಶಜ್ಞಾನದಿಂದ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ಎನ್ನುತ್ತಾರೆ ಮಹೇಶ ಬಡಿಗೇರ. ಸಹೋದರರ ಕೆಲಸಕ್ಕೆ ಅವರ ಮಕ್ಕಳು ಹಾಗೂ ತಾಯಿ ಕಣ್ಣಾಗಿ ಕೈಜೋಡಿಸುತ್ತಿದ್ದಾರೆ.
ಸುರೇಶ, ಮಹೇಶ ಅಂಧರಾದರೂ ತೇರು ನಿರ್ಮಾಣ ಮಾಡಿದ್ದಾರೆ. ಅವರ ಕಲೆ ಎಂಥವರನ್ನೂ ನಿಬ್ಬೆರಗಾಗುವಂತೆ ಮಾಡುತ್ತದೆ.
|ಹೊನ್ನಪ್ಪ ರಾಜೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
