ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದ್ದು, 6,75,277 ಮಂದಿ ಪೈಕಿ 4, 17, 297 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಪೈಕಿ ವಿಭಾಗವಾರು ಅಂದರೆ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಟಾಪರ್ಸ್​​ ಲಿಸ್ಟ್ ಅನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಟಾಪ್​ 3 ಬಂದವರ ವಿವರ ಇಲ್ಲಿದೆ.
ವಿಜ್ಞಾನ ವಿಭಾಗ:ವಿಜ್ಞಾನದಲ್ಲಿ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ರಾವ್​ ಮತ್ತು ಬೆಂಗಳೂರಿನ ವಿದ್ಯಾಮಂದಿರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ಎನ್​.ಪ್ರೇರಣಾ 596 ಅಂಕಗಳಿಸುವ ಮೂಲಕ ಇಬ್ಬರೂ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. 595 ಅಂಕ ಪಡೆದ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಆಕಾಂಕ್ಷ ಪೈ ದ್ವತೀಯ ಸ್ಥಾನ ಗಳಿಸಿದ್ದಾರೆ. 594 ಅಂಕವನ್ನು ನಾಲ್ವರು ಪಡೆದಿದ್ದು, 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅವರ ವಿವರ ಇಲ್ಲಿದೆ. ಯಶಸ್ ಎಂ.ಎಸ್.- ಗೋಪಾಲಸ್ವಾಮಿ ಎಸ್‍ವಿ ಪಿಯು ಕಾಲೇಜು, ಮೈಸೂರು. ಶಿಫಾಲಿ ಎಂ.ಎಸ್.- ಎಬಿಸಿ ಪಿಯು ಕಾಲೇಜು, ಬೆಂಗಳೂರು. ಅಖಿಲಾ ಯು. ಹೆಗ್ಡೆ- ಸರ್ಕಾರಿ ಪಿಯು ಕಾಲೇಜು, ಶಿವಮೊಗ್ಗ, ಆಲ್ಮಾಸ್ ಬಾನು- ಜ್ಞಾನಭಾರತಿ ಪಿಯು ಕಾಲೇಜು,  ತುಮಕೂರು.
ವಾಣಿಜ್ಯ ವಿಭಾಗ:ಟಿಸಿಎಸ್ ಅರವಿಂದ್ ಶ್ರೀವಾತ್ಸವ್(ಪ್ರಥಮ)- ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ. ಬೃಂದಾ ಜೆ.ಎನ್.(ದ್ವಿತೀಯ)- ಎಜಿಎಸ್ ಗರ್ಲ್ಸ್ ಪಿಯು ಕಾಲೇಜು, ಮೈಸೂರು. ಸಿಂಧು ಜಿ.ಎಂ. (ತೃತೀಯ)- ಸರ್ಕಾರಿ ಪಿಯು ಕಾಲೇಜು, ಸಾಗರ.ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಕಲಾ ವಿಭಾಗ:ಕರಿಗೌಡ ದಾಸನಗೌಡ್ರ(ಪ್ರಥಮ)- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ. ಸ್ವಾಮಿ ಆರ್‌.ಎಂ.(ದ್ವಿತೀಯ)- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ. ಮೊಹಮ್ಮದ್ ರಫೀಕ್ ಎಚ್.(ತೃತೀಯ)- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.
ದ್ವಿತೀಯ ಪಿಯು ರಿಸಲ್ಟ್; ಹೆಣ್ಮಕ್ಳೇ ಸ್ಟ್ರಾಂಗ್​, ಉಡುಪಿ-ದಕ್ಷಿಣ ಕನ್ನಡ ಫಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
