ಬೆಂಗಳೂರು: ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವವರು, ಟ್ರಾಫಿಕ್​ ನಿಯಮ ಮೀರಿ ಗಾಡಿ ಓಡಿಸುವವರ ವಿರುದ್ಧದ ಕಾರ್ಯಾಚರಣೆಯನ್ನು ಪೊಲಿಸರು ದಿನೇದಿನೆ ಹೆಚ್ಚಿಸುತ್ತಿದ್ದಾರೆ.  ಬೆಂಗಳೂರು ನಗರ ಸಂಚಾರ ಪೊಲೀಸರು ಕೇವಲ 7 ದಿನಗಳಲ್ಲಿ 86,380 ಸಂಚಾರ ಉಲ್ಲಂಘನೆ ಪ್ರಕರಣ ದಾಖಲಿಸಿ ಬರೋಬ್ಬರಿ 3.63 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.  ಹೆಲ್ಮೆಟ್ ರಹಿತ ಚಾಲನೆ ಮಾಡುತ್ತಿದ್ದ ಸವಾರರ ವಿರುದ್ಧ 28,201 ಪ್ರಕರಣ ದಾಖಲಿಸಿ 10 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಇನ್ನು ನಿಯಮಗಳನ್ನು ಉಲ್ಲಂಘಿಸಿದ ಹಿಂಬದಿ ಸವಾರರ ವಿರುದ್ಧ 17,105 ಕೇಸ್ ದಾಖಲಿಸಿ 6.23 ಲಕ್ಷ ರೂ. ದಂಡ ವಸೂಲಿ ಮಾಡಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದಾದ ಮೇಲೆ ನೋ ಪಾರ್ಕಿಂಗ್ 3526 ಕೇಸ್(1.13 ಲಕ್ಷ ದಂಡ), ಸಿಗ್ನಲ್ ಜಂಪಿಂಗ್-10 ಸಾವಿರ ಕೇಸ್(3.73 ಲಕ್ಷ), ಮೊಬೈಲ್ ಬಳಕೆ-2448 ಕೇಸು(1.68 ಲಕ್ಷ), ಸೀಟ್ ಬೆಲ್ಪ್ ರಹಿತ-4827 ಪ್ರಕರಣ(2.29 ಲಕ್ಷ), 3790 ನೋ ಎಂಟ್ರಿ ಪ್ರಕರಣ (1.44 ಲಕ್ಷ) ದಾಖಲಿಸಿಕೊಂಡಿದ್ದಾರೆ.
ಕರೊನಾ ಲಾಕ್‌ಡೌನ್ ತೆರವಾದ ಮೇಲೆ ಬೇಕಾಬಿಟ್ಟಿ ಸಂಚಾರ ನಡೆಸುತ್ತಿದ್ದ ವಾಹನ ಚಾಲಕ/ ಸವಾರರು ಈಗಲೂ ಮೈಮರೆತು ಸಂಚಾರಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿಲ್ಲ. ಸಂಚಾರ ಪೊಲೀಸರು ಮೊದಲು ಕರೊನಾ ಭೀತಿಯಿಂದ ಯಾರನ್ನೂ ಅಷ್ಟೊಂದು ಪರಿಶೀಲನೆ ಮಾಡುತ್ತಿರಲಿಲ್ಲ. ಆದರೆ ಈಗ ಕಟ್ಟುನಿಟ್ಟಾಗಿ ತಪಾಸಣೆ ಮಾಡುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ.
ಬೀದಿಯಲ್ಲಿ ಮಾಸ್ಕ್ ಮಾರುತ್ತಿರುವ ಕ್ರೀಡಾಪಟು….!!!!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seventeen =
Remember me
