|ಎನ್.ಎಲ್.ಶಿವಮಾದು ಬೆಂಗಳೂರುಶಾಲಾ ಮಕ್ಕಳಿಗೆ 3 ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಉಡಾಫೆಯಾಗಿ ಪರಿಗಣಿಸುವುದಲ್ಲದೆ, ಪರೀಕ್ಷೆ ಪಾವಿತ್ರ್ಯತೆಗೆ ಧಕ್ಕೆ ಬರಲಿದೆ. ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ಕನಿಷ್ಠ 6 ತಿಂಗಳ ಕಾಲ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ ಎಂದು ಶಿಕ್ಷಕ ವರ್ಗ ಆಕ್ಷೇಪ ವ್ಯಕ್ತಪಡಿಸಿದೆ.
ಶಿಕ್ಷಕರು ಕನಿಷ್ಠ ಅರ್ಧ ವರ್ಷ ಅಂದರೆ, ಮಾರ್ಚ್​ನಿಂದ ಆಗಸ್ಟ್​ವರೆಗೂ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿಯೇ ತೊಡಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಶಿಕ್ಷಕರ ಬೋಧನಾ ಅವಧಿ ಕಡಿತವಾಗಲಿದೆ. ಇದೆಲ್ಲವನ್ನೂ ತಿಳಿದಿದ್ದು, ಇಲಾಖೆಯ ಯಾವುದೇ ಸಮಿತಿಗಳನ್ನು ಕೂಡ ನೇಮಕ ಮಾಡದೆ, ಶಿಕ್ಷಕರೊಂದಿಗೂ ರ್ಚಚಿಸಿಲ್ಲ ಎಂದು ದೂರಿದ್ದಾರೆ.
ಏಕಪಕ್ಷೀಯ ನಿರ್ಧಾರ: ಶಿಕ್ಷಣ ಇಲಾಖೆಯು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ವೇಳೆ ಯೋಜನೆಯಿಂದಾಗಬಹುದಾದ ಸಾಧಕ-ಬಾಧಕಗಳನ್ನು ರ್ಚಚಿಸಬೇಕಿತ್ತು. 3 ಪರೀಕ್ಷೆಗಳನ್ನು ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಎಲ್ಲಿಯೂ ರ್ಚಚಿಸದೆ ಸರ್ಕಾರವು ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎನ್. ನಿಂಗೇಗೌಡ ತಿಳಿಸಿದರು.
ಯೋಜನೆ ವಿರುದ್ಧ ನಿರ್ಣಯ: ಕೂಡಲೇ ಯೋಜನೆಯನ್ನು ಕೈಬಿಡಬೇಕೆಂದು ಪಿಯು ಉಪನ್ಯಾಸಕರ ಸಂಘವು ನಿರ್ಣಯ ಕೈಗೊಂಡಿದೆ. 3 ಪರೀಕ್ಷೆಗಳನ್ನು ನಡೆಸುವುದರಿಂದ ಎದುರಾಗಬಹುದಾದ ಸಮಸ್ಯೆಗಳು, ಉಪನ್ಯಾಸಕರಿಗೆ ಆಗುವ ತೊಂದರೆಗಳು ಮತ್ತು ಕಲಿಕೆ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ. ಒಂದು ವೇಳೆ ಸರ್ಕಾರವು ನಮ್ಮ ಅಭಿಪ್ರಾಯವನ್ನು ಪರಿಗಣಿಸದಿದ್ದರೆ, ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಶಿಕ್ಷಕರಿಗೆ ಹೊರೆ ಹೇಗೆ?; ಶಿಕ್ಷಣ ಇಲಾಖೆಯಲ್ಲಿ ವಾರ್ಷಿಕ 365 ದಿನಗಳಲ್ಲಿ 240 ದಿನಗಳನ್ನು ಬೋಧನೆಗೆ ನಿಗದಿ ಮಾಡಿದೆ. ಆದರೆ, ಶಿಕ್ಷಕರು ಬೋಧನೆ ಜತೆಗೆ ಚುನಾವಣೆಯ ಬಿಎಲ್​ಒ ಕೆಲಸ, ಸಮವಸ್ತ್ರ, ಮೊಟ್ಟೆ/ಬಾಳೇಹಣ್ಣು, ಪಠ್ಯಪುಸ್ತಕ ವಿತರಣೆ, ಇತರ ತರಬೇತಿ ಪಡೆಯಲು ಸಮಯ ನೀಡಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿವೇತನ ವಿತರಣೆಗೆ ಅರ್ಜಿ ಸಲ್ಲಿಕೆ, ಆಧಾರ್ ಅಪ್​ಡೇಟ್, ರಾಷ್ಟ್ರೀಯ ದಿನಾಚರಣೆಗಳಿಗೆ ತಾಲೀಮು ನಡೆಸುವುದು, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ, ಪರೀಕ್ಷೆಗಳಿಗೆ ನೋಂದಣಿ, ಪರಿಶೀಲನೆ, ಶುಲ್ಕ ಪಾವತಿ, ಪ್ರವೇಶ ಪತ್ರ ವಿತರಣೆ, ಅಂಕಪಟ್ಟಿ ವಿತರಣೆ ಸೇರಿ ಇನ್ನಿತರೆ ಪಠ್ಯೇತರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.ಇದರ ಜತೆಗೆ ಮೂರು ಪರೀಕ್ಷೆಗಳನ್ನು ನಡೆಸಿದರೆ ಶಿಕ್ಷಕರಿಗೆ ಪರೀಕ್ಷಾ ಕಾರ್ಯದ ಹೊಣೆಗಾರಿಕೆಯಿಂದ ಬೋಧನಾ ಅವಧಿ ಕಡಿತವಾಗಲಿದೆ ಎಂಬುದು ಅಭಿಪ್ರಾಯವಾಗಿದೆ.
ಶಿಕ್ಷಕರಿಗೆ ಇನ್ನಿತರ ತರಬೇತಿಗಳು ಹಾಗೂ ಹೊಣೆಗಾರಿಕೆ ಇರುವುದರಿಂದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲರು ಹಾಗೂ ಇತರೆ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳ ನೋಂದಣಿ, ದಾಖಲಾತಿ ಪರಿಶೀಲನೆ, ಶುಲ್ಕ ಪಾವತಿ ಮತ್ತು ಪ್ರವೇಶಪತ್ರ ಡೌನ್​ಲೋಡ್ ಮಾಡಿ ವಿತರಿಸುವ ಕೆಲಸಗಳನ್ನು ಡಯಟ್ ವಹಿಸಿದರೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ ಎಂದು ಶಿಕ್ಷಕರೊಬ್ಬರು ಸಲಹೆ ನೀಡಿದ್ದಾರೆ.
ಸರ್ಕಾರವು 3 ಪರೀಕ್ಷೆಗಳನ್ನು ನಡೆಸುವುದಕ್ಕಿಂತ ಮಕ್ಕಳು ಯಾವ ಕಾರಣದಿಂದ ಅನುತ್ತೀರ್ಣರಾದರು ಎಂಬ ಕಾರಣ ತಿಳಿದು ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಮತ್ತು ಮಕ್ಕಳ ಸಾಮರ್ಥ್ಯದ ಮನಸ್ಥಿತಿ ತಿಳಿಯುವ ಕೆಲಸವಾಗಬೇಕು.
| ಎಂ.ಕೆ. ಬಿರಾದಾರ. ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
