|ದೇವರಾಜ್ ಕನಕಪುರಬೆಂಗಳೂರು
ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಮಾನದಂಡ ರೂಪಿಸುವುದಕ್ಕಾಗಿ ರಚಿಸಿದ್ದ 12 ತಜ್ಞರ ಸಮಿತಿ ಮೂರು ಸೂತ್ರಗಳನ್ನು ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಈ ಮೂರರಲ್ಲಿ ಒಂದು ಸೂತ್ರವನ್ನು ಸರ್ಕಾರ ಅಂತಿಮಗೊಳಿಸಬೇಕಿದೆ. ಗ್ರೇಡಿಂಗ್ ಮೂಲಕ ಪಾಸ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಪಾಲಕರು ಮತ್ತು ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂಕಗಳನ್ನು ನೀಡುವ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ 6.25 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
2ನೇ ವಾರ ರಿಸಲ್ಟ್:ದ್ವಿತೀಯ ಪಿಯು ಫಲಿತಾಂಶವನ್ನು ಜುಲೈ ಅಂತ್ಯದೊಳಗೆ ಪ್ರಕಟಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ 2ನೇ ವಾರ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ. ಈ ಮೊದಲು ಜೂನ್ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿ ಗಳನ್ನು ತೇರ್ಗಡೆ ಮಾಡುವ ಕುರಿತಂತೆ ನಿರ್ಧಾರವಾಗದೆ ಫಲಿತಾಂಶ ಪ್ರಕಟಿಸು ವಂತಿಲ್ಲ ಎಂಬ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಗೆ ತೊಡಕು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 12 ತಜ್ಞರ ಸಮಿತಿ ರಚಿಸಿ 10 ದಿನದೊಳಗೆ ವರದಿ ನೀಡುವಂತೆ ಡೆಡ್​ಲೈನ್ ನಿಗದಿ ಪಡಿಸಿತ್ತು.
50:50 ಸೂತ್ರ:ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುನಲ್ಲಿ ಪಡೆದಿರುವ ಅಂಕಗಳನ್ನು ತಲಾ ಶೇ.50ರಷ್ಟು ಲೆಕ್ಕ ಹಾಕಿ ಗರಿಷ್ಠ 600ಕ್ಕೆ ದ್ವಿತೀಯ ಪಿಯು ಅಂಕ ನಿಗದಿ ಮಾಡುವುದು.
65:35 ಅನುಪಾತ:ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿಗಿಂತ ಪಿಯುನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಥಮ ಪಿಯುನಲ್ಲಿ ಪಡೆದಿರುವ ಅಂಕದ ಶೇ.60 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಶೇ.35 ಅಂಕ ಸಮೀಕರಿಸಿ ಒಟ್ಟಾರೆ 600 ಅಂಕಗಳಿಗೆ ಲೆಕ್ಕ ಹಾಕುವುದು. ಇದರಿಂದ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕಗಳಿಸಿದ್ದರೂ, ದ್ವಿತೀಯ ಪಿಯುನಲ್ಲಿ ಹೆಚ್ಚಿನ ಅಂಕಗಳಿಸುವ ಸಾಧ್ಯತೆ ಇರುತ್ತದೆ.
ಫಾರ್ಮುಲಾ ಕೃಪಾಂಕ:ಎಸ್ಸೆಸ್ಸೆಲ್ಸಿಯಲ್ಲಿ ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳು ಪ್ರಥಮ ಪಿಯುನಲ್ಲಿ ಕಡಿಮೆ ಅಂಕಗಳಿಸಿರುವ ಪ್ರಕರಣಗಳು ಇದೆ. ಆದರೆ, ದ್ವಿತೀಯ ಪಿಯುನಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಎಲ್ಲರನ್ನೂ ಪಾಸ್ ಮಾಡುವುದಾಗಿ ಈಗಾಗಲೇ ಸರ್ಕಾರ ಹೇಳಿರುವುದರಿಂದ ವಿದ್ಯಾರ್ಥಿಯು ಎಸ್ಸೆಸ್ಸೆಲ್ಸಿಯಲ್ಲಿ ತೆಗೆದುಕೊಂಡಿರುವ ಹೆಚ್ಚಿನ ಅಂಕಗಳನ್ನು ಪಿಯುಗೆ ಕೃಪಾಂಕ ಎಂದು ಪರಿಗಣಿಸಿ ಫೇಲ್ ಆಗದಂತೆ ನೋಡಿಕೊಳ್ಳಲಾಗುತ್ತದೆ.
ಸಿಬಿಎಸ್​ಇನಲ್ಲಿ ಹೇಗೆ?:ಸಿಬಿಎಸ್​ಇ ಪಠ್ಯಕ್ರಮದ 12ನೇ ತರಗತಿಯ ವಿದ್ಯಾರ್ಥಿಗಳನ್ನು 10,11 ಮತ್ತು 12ನೇ ತರಗತಿಯಲ್ಲಿ ವಿದ್ಯಾರ್ಥಿಗಳ ನಿರ್ವಹಣೆ ಆಧರಿಸಿ 30:30:40 ಅನುಪಾತದಲ್ಲಿ ಅಂಕ ನಿರ್ಧರಿಸಲು ಸಿಬಿಎಸ್​ಇ ಮಂಡಳಿ ನಿರ್ಧರಿಸಿದೆ.
ಪುನರಾವರ್ತಿತ ಅಭ್ಯರ್ಥಿಗಳ ಪಾಸ್ ವಿಚಾರಣೆ ಜು.5ಕ್ಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದು ಸರಿಯಲ್ಲ. ಪುನರಾವರ್ತಿತ ಅಭ್ಯರ್ಥಿಗಳಿಗೂ ಪರೀಕ್ಷೆ ರದ್ದು ಮಾಡಿ ಪಾಸ್ ಮಾಡಬೇಕೆಂಬ ವಿಚಾರ ಕೋರ್ಟ್​ನಲ್ಲಿದ್ದು, ಜು.5ರಂದು ಮರು ವಿಚಾರಣೆ ಬರಲಿದೆ.
ಶೇ.50-50 ಸೂತ್ರ ಅಂತಿಮ ಸಾಧ್ಯತೆ:ಸದ್ಯ 3 ಫಾರ್ಮ್ಯುಲಲಾ ಶೇ.50-ಶೇ.50 ಅನುಪಾತವೇ ಉತ್ತಮವಾಗಿರುವುದರಿಂದ ಇದನ್ನೇ ಅಂತಿಮ ಮಾಡಲು ರಾಜ್ಯ ಸರ್ಕಾರ ತೀರ್ವನಿಸಿದೆ ಎಂದು ತಿಳಿದು ಬಂದಿದೆ.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಿರ್ಧಾರಕ್ಕೆ ಸಂಬಂಧಿಸಿದ ಆಕ್ಷೇಪವು ವಿವಾದದ ತಿರುವು ಪಡೆಯುವ ಮುನ್ನವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪೂರ್ವಭಾವಿಯಾಗಿ ನನ್ನೊಂದಿಗೆ ರ್ಚಚಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ನಿಗದಿಪಡಿಸಿದ್ದು, ಏಕಪಕ್ಷೀಯ ತೀರ್ವನವಲ್ಲವೆಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಸಮಗ್ರವಾಗಿ ರ್ಚಚಿಸಿದ ಬಳಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಾರಿ ಎರಡು ದಿನಗಳ ಕಾಲ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಗೊಂದಲ ಅನಗತ್ಯವೆಂದು ಸಿಎಂ ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ. ಕರೊನಾ ಡೆಲ್ಟ್ ಪ್ಲಸ್ ವೈರಾಣು ಹಾಗೂ ಮೂರನೇ ಅಲೆಯ ಭೀತಿಯಿದ್ದರೂ ಎಸ್.ಸುರೇಶ್ ಕುಮಾರ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡು, ಎಸ್ಸೆಸ್ಸೆಲ್ಸಿ ಎಕ್ಸಾಂ ದಿನಾಂಕ ಫಿಕ್ಸ್ ಮಾಡಿದ್ದಾರೆ ಎಂಬ ಅಪಸ್ವರ ಕೇಳಿಬಂದಿತ್ತು.ಸಿಎಂ ನಿಲುವು ಅರಿತ ಸಚಿವ ಡಾ.ಕೆ.ಸುಧಾಕರ್ ಕೂಡ ಯಾವುದೇ ಗೊಂದಲವಿಲ್ಲವೆಂದು ಧ್ವನಿಗೂಡಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
