ಬೆಂಗಳೂರು:ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಕಲಿ ನೋಟ್ ದಂಧೆಗೆ ಇದೀಗ ಅದಕ್ಕೆ ಬ್ರೇಕ್ ಬಿದ್ದಿದ್ದು ಬಿಹಾರದಿಂದ ನಕಲಿ ನೋಟ್ ತಂದು ಬೆಂಗಳೂರಿನಲ್ಲಿ ಮಾರಟ ಮಾಡುತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಶರವಣ ಎಂದು ಗುರುತಿಸಲಾಗಿದ್ದು ಇನ್​ಸ್ಟಾಗ್ರಾಮ್ ಮೂಲಕ ಗ್ರಾಹಕರಿಗೆ ಗಾಳ ಹಾಕಿ ಕೃತ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಈತ ಇನ್​ಸ್ಟಾಗ್ರಾಂನಲ್ಲಿ ಫೇಕ್​ನೋಟ್ ಎಂದು ಐಡಿ ಕ್ರಿಯೇಟ್ ಮಾಡಿ ನಕಲಿ ನೋಟುಗಳನ್ನು ಮಾರಾಟ ಮಾಡುತ್ತಿದ್ದ.
ಇದನ್ನೂ ಓದಿ:ಯೂಟ್ಯೂಬ್​ನಲ್ಲಿ ಕಲಿತು ಮನೆಯಲ್ಲೇ ಗರಿಗರಿಯಾದ ನಕಲಿ ನೋಟ್ ಪ್ರಿಂಟ್ ಮಾಡಿದ ಪುಂಡ!
ಎಲ್ಲಾ ವ್ಯವಹಾರವನ್ನೂ ಇನ್​​ಸ್ಟಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ ಬಿಹಾರದ ಮೂಲಕ ನಕಲಿ ನೋಟು ತರುತಿದ್ದ. ಈತ ಬಿಹಾರಕ್ಕೆ ತೆರಳಿ 10 ಲಕ್ಷ ನೋಟಿಗೆ 3ಲಕ್ಷ ರೂ. ಅಸಲಿ ನೋಟು ನೀಡಿ ತಂದು ಬಳಿಕ ಬೆಂಗಳೂರಿನಲ್ಲಿ 4 ಲಕ್ಷ ರೂ. ಅಸಲಿ ನೋಟಿಗೆ 10 ಲಕ್ಷ ರೂ.ಯ ನಕಲಿ ನೋಟು ನೀಡುತಿದ್ದ.
ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳನ್ನೂ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ. 6 ಲಕ್ಷಕ್ಕೂ ಅಧಿಕ ನಕಲಿ ನೋಟ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
