ಬೆಂಗಳೂರು:ಕುಟುಂಬದ ಕಷ್ಟವನ್ನೆಲ್ಲ ಒಂದೇ ಬಾರಿಗೆ ತೀರಿಸುವ ಉದ್ದೇಶಕ್ಕೆ ತನ್ನ ಕಿಡ್ನಿಯನ್ನೇ ಮಾರಾಟಕ್ಕಿಟ್ಟ 24 ವರ್ಷದ ಯುವತಿಗೆ ಸೈಬರ್ ಖದೀಮರು 3.14 ಲಕ್ಷ ರೂ. ವಂಚಿಸಿದ್ದಾರೆ. ನೊಂದ ಯುವತಿ ನ್ಯಾಯ ಕೋರಿ ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಹಾಡಾ ಫಂಗ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಿ, ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ನಗರದಲ್ಲಿ ತಂದೆ-ತಾಯಿ ಜತೆ ನೆಲೆಸಿರುವ ಯುವತಿ, ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿದ್ದಾರೆ. ಮಧ್ಯಮ ವರ್ಗದ ಕುಟುಂಬವಾದ ಹಿನ್ನೆಲೆ ಆರ್ಥಿಕ ಸಮಸ್ಯೆ ಕಾಡುತ್ತಿತ್ತು. ಈ ನಡುವೆ, ಕಿಡ್ನಿ ದಾನ ಮಾಡಿದರೆ 1 ಕೋಟಿ ರೂ. ಕೊಡುವುದಾಗಿ ಜಾಲತಾಣದಲ್ಲಿ ಜಾಹೀರಾತು ಗಮನಿಸಿ, ಅಲ್ಲಿ ಸಿಕ್ಕ ಮೊಬೈಲ್​ಗೆ ಕರೆ ಮಾಡಿ ವಿಚಾರಿಸಿದ್ದಳು. ಆಮೇಲೆ ಆರೋಪಿಯೇ ಯುವತಿಗೆ ಕರೆ ಮಾಡಿ ‘ನೀವು ಕಿಡ್ನಿ ಕೊಡಬೇಕಾದರೆ ಮೊದಲು ಕೆಲ ಶುಲ್ಕ ಪಾವತಿಸಬೇಕು. ಪೊಲೀಸ್ ಪ್ರಮಾಣ ಪತ್ರ, ತೆರಿಗೆ, ಮತ್ತು ವಿಮೆ ಮಾಡಿಸಿಕೊಳ್ಳಬೇಕು’ ಎಂದಿದ್ದ. ನಂಬಿದ ಯುವತಿ, ಆರೋಪಿ ನೀಡಿದ ಖಾಸಗಿ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣ ಜಮೆ ಮಾಡಿದ್ದಾರೆ.
ಲಾಕ್​ಡೌನ್​ನಲ್ಲಿ ಕೆಲಸ ಇಲ್ಲದೆ ಖಾಲಿ ಕೈಯಲ್ಲಿದ್ದ ಯುವತಿ, ಮನೆಯಲ್ಲಿದ್ದ ಚಿನ್ನಾಭರಣ ಮಾರಿ ಹಣ ಕೊಟ್ಟಿದ್ದಳು. ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಪ್ರಶ್ನಿಸಿದಾಗ, ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಐಷಾರಾಮಿ ಜೀವನಕ್ಕಾಗಿ ತಾಯಿಯನ್ನೇ ಯುವತಿಯನ್ನಾಗಿಸಿದ ಮಗ: ಇವರ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 19 =
Remember me
