ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳಿಸಿದ ಬಳಿಕ ಆರಂಭದ ಒಂದು ತಿಂಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಆ ಬಳಿಕ ಅಗತ್ಯವಾದರೆ ರಾಜ್ಯಾದ್ಯಂತ ಈ ನಿಷೇಧವನ್ನು ಇನ್ನೊಂದು ತಿಂಗಳಲ್ಲಿ ಜಾರಿಗೆ ತರಲಿಕ್ಕೂ ಸರ್ಕಾರ ಚಿಂತನೆ ನಡೆಸಿದೆ. ದೇಶಾದ್ಯಂತ ಜಲಾಶಯಗಳ ನೀರಿನ ಸಂಗ್ರಹ ಶೇ. 37ಕ್ಕೆ ಕುಸಿದಿದ್ದು, ಆ ಪೈಕಿ ಕರ್ನಾಟಕದಲ್ಲೇ ಜಲಸಂಗ್ರಹದಲ್ಲಿ ಗಣನೀಯ ಕುಸಿತ ಉಂಟಾಗಿರುವುದು ಕಂಡುಬಂದಿದೆ. ಮತ್ತೊಂದೆಡೆ ಮಹಾನಗರ ಬೆಂಗಳೂರಿನಲ್ಲಿ ಈಗಾಗಲೇ ಜಲಕ್ಷಾಮ ತಲೆದೋರಿದ್ದು, ಬಿಸಿಲ ಬೇಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಾಗಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂಬುದನ್ನು ಬಿಬಿಎಂಪಿ ಹಾಗೂ ಬಿಡಬ್ಲುೃಎಸ್‌ಎಸ್‌ಬಿ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಅಂದಾಜಿಸಿದ್ದಾರೆ.
*ಆದೇಶಕ್ಕಿಲ್ಲ ಅಡಚಣೆ:ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಈ ವಿಷಯವಾಗಿ ಸಚಿವರು-ಶಾಸಕರು ಮಧ್ಯಪ್ರವೇಶ ಮಾಡಲು ಸಾಧ್ಯವಿರದ್ದರಿಂದ ಹೋಟೆಲ್‌ಗಳಲ್ಲಿನ ಇಡ್ಲಿ ತಯಾರಿಕೆ ನಿಷೇಧ ಸಂಬಂಧ ಅಧಿಕೃತ ಆದೇಶ ಸೋಮವಾರ ರಾತ್ರಿಯೊಳಗೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.
* ಸಾಲದ್ದಕ್ಕೆ ಮತ್ತಷ್ಟು ಕಠಿಣ ಕ್ರಮ:ಬೈಕ್-ಕಾರು ಮುಂತಾದ ವಾಹನಗಳ ಸ್ವಚ್ಛತೆ ಇತ್ಯಾದಿಗೆ ಕುಡಿಯುವ ನೀರನ್ನು ಬಳಸಿ ಪೋಲು ಮಾಡದಂತೆ ಬೆಂಗಳೂರು ಜಲಮಂಡಳಿ ಈಗಾಗಲೇ ಆದೇಶ ಹೊರಡಿಸಿದ್ದು, ಅಂಥ ತಪ್ಪುಗಳನ್ನು ಮಾಡಿದವರ ವಿರುದ್ಧ ದಂಡ ವಿಧಿಸಿ ಕ್ರಮಗಳನ್ನೂ ಕೈಗೊಂಡಿದೆ. ಮತ್ತೊಂದೆಡೆ ಹೋಟೆಲ್, ಮಾಲ್, ವಾಣಿಜ್ಯ ಸಂಕೀರ್ಣ, ಸಕಾರಿ ಕಚೇರಿ ಮುಂತಾದವುಗಳಲ್ಲಿನ ನಲ್ಲಿಗೆ ‘ಹರಿವು ನಿಯಂತ್ರಕ’ಗಳನ್ನು ಅಳವಡಿಸುವಂತೆ ಮಾ.31ರ ವರೆಗೆ ಗಡುವು ನೀಡಿದ್ದ ಜಲಮಂಡಳಿ, ನಿರೀಕ್ಷಿತ ಪ್ರಮಾಣದಲ್ಲಿ ಈ ಕ್ರಮ ಜರುಗದ ಹಿನ್ನೆಲೆಯಲ್ಲಿ ಗಡುವನ್ನು ಏ.7ರವರೆಗೆ ವಿಸ್ತರಿಸಿದೆ. ಆ ಬಳಿಕವೂ ‘ಹರಿವು ನಿಯಂತ್ರಕ’ ಅಳವಡಿಸಿಕೊಳ್ಳದಿದ್ದರೆ ನೀರು ಪೂರೈಕೆಯಲ್ಲಿ ಶೇ.50 ಕಡಿತಗೊಳಿಸುವ ಜತೆಗೆ ದಂಡವನ್ನೂ ವಿಧಿಸುವುದಾಗಿ ಎಚ್ಚರಿಸಿದೆ. ಜತೆಗೆ ಬಿಎಂಟಿಸಿ ಬಸ್‌ಗಳ ಸ್ವಚ್ಛತೆಗೂ ಅತಿ ಕಡಿಮೆ ಪ್ರಮಾಣದಲ್ಲಿ ನೀರು ಬಳಸುವಂತೆಯೂ ನಿರ್ದೇಶನ ನೀಡಲಾಗಿದೆ. ಈ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ನೀರಿನ ಕೊರತೆಯ ಸಮಸ್ಯೆಗಳನ್ನು ನಿಭಾಯಿಸಲು ಕಷ್ಟವಾದ್ದರಿಂದ ಸರ್ಕಾರ ಇನ್ನಷ್ಟು ಕಠಿಣ ಕ್ರಮಕೈಗೊಳ್ಳುವ ಸಲುವಾಗಿ ಇಡ್ಲಿ ತಯಾರಿಕೆ ನಿಷೇಧಕ್ಕೆ ಮುಂದಾಗಿದೆ.
* ಆತಂಕ ಯಾಕೆ?ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಮಾ.29ರಂದು 36.4 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದು ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಹಾಗೂ ಕಳೆದ ಹತ್ತು ವರ್ಷಗಳ ಅತ್ಯಧಿಕ ತಾಪಮಾನಗಳ ಪೈಕಿ ಮೂರನೆಯದ್ದಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಬಿಸಿಲ ಬೇಗೆ ತೀವ್ರ ಆಗಲಿರುವುದರಿಂದ ಸರ್ಕಾರ ಸಂಭಾವ್ಯ ಜಲಕ್ಷಾಮ ಹೆಚ್ಚಳದ ಪರಿಣಾಮಗಳ ಕುರಿತು ಆತಂಕ ಹೊಂದಿದ್ದು, ಅದಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಆ ಪೈಕಿ ಇಡ್ಲಿ ತಯಾರಿಕೆ ನಿಷೇಧ ಪ್ರಮುಖವಾದುದಾಗಿದೆ.
* ನಿಷೇಧ ಯಾಕೆ?ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿಬದಿ ಅಂಗಡಿಗಳು, ದರ್ಶಿನಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮುಂತಾದವು ಸೇರಿ ಹತ್ತು ಸಾವಿರಕ್ಕೂ ಅಧಿಕ ಕಡೆಗಳಲ್ಲಿ ನಿತ್ಯವೂ ಲಕ್ಷಾಂತರ ಇಡ್ಲಿಗಳು ತಯಾರಾಗುತ್ತವೆ. ಅದರಲ್ಲೂ ‘ವಿಶ್ವ ಇಡ್ಲಿ ದಿನ’ ಪ್ರಯುಕ್ತ ‘ಸ್ವಿಗ್ಗಿ’ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಅತ್ಯಧಿಕ ಇಡ್ಲಿ ಆರ್ಡರ್ ಮಾಡುವ ಟಾಪ್-3 ನಗರಗಳಲ್ಲಿ ಬೆಂಗಳೂರು ಕೂಡ ಇದೆ. ಇಷ್ಟು ಪ್ರಮಾಣದ ಇಡ್ಲಿ ತಯಾರಿಕೆಗೆಂದೇ ರಾಜಧಾನಿಯಲ್ಲಿ ನಿತ್ಯ ಕನಿಷ್ಠ 50 ಸಾವಿರ ಲೀ. ನೀರು ಬಳಕೆ ಆಗುತ್ತಿದೆ. ಈ ನೀರಿನಲ್ಲಿ ಶೇ.75ಕ್ಕೂ ಅಧಿಕ ಭಾಗ ಆವಿಯಾಗಿ ಹೋಗುತ್ತದೆ. ಅಲ್ಲದೆ ಇಡ್ಲಿ ಜತೆಗೆ ಸಾಂಬಾರ್ ಹಾಗೂ ನೀರು ಚಟ್ನಿಯೂ ಅಗತ್ಯವಾದ್ದರಿಂದ ಅವುಗಳ ತಯಾರಿಕೆಗೂ ಮತ್ತಷ್ಟು ನೀರಿನ ಬಳಕೆ ಹೆಚ್ಚಾಗುತ್ತಿದೆ ಎಂಬುದು ಬಿಬಿಎಂಪಿ- ಬಿಡಬ್ಲುೃಎಸ್‌ಎಸ್‌ಬಿ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಇಡ್ಲಿ ಸೇವನೆ ಮನುಷ್ಯನ ದಾಹ ಹೆಚ್ಚಿಸುವುದರಿಂದ ಹೆಚ್ಚು ಹೆಚ್ಚು ನೀರು ಕುಡಿಯಬೇಕನಿಸುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿನ ಇಡ್ಲಿ ತಯಾರಿಕೆಗೆ ತಾತ್ಕಾಲಿಕ ನಿಷೇಧ ಹೇರಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
