ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ ರೈಲ್ವೆ ಹಾಲ್ಟ್​ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಪ್ರತಿದಿನ 3 ಜೋಡಿ ರೈಲುಗಳ ಮೂಲಕ ಸೇವೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ವಿಮಾನಯಾನ ಮಾಡಲು ಕೆಐಎಗೆ ತಲುಪಲು ಸಂಚಾರ ದಟ್ಟಣೆ ಸೇರಿ ಇನ್ನಿತರ ಕಾರಣಗಳಿಂದ ಅನುಭವಿಸುತ್ತಿರುವ ಸಮಸ್ಯೆ ನಿವಾರಣೆಗೆ ಕೆಐಎ ಸಮೀಪ ರೈಲ್ವೆ ಹಾಲ್ಟ್​ ನಿಲ್ದಾಣ ನಿಮಿರ್ಸಲಾಗಿದೆ. ಅಲ್ಲಿ ಶ್ರೀದಲ್ಲಿ ರೈಲು ಸೇವೆಯೂ ಆರಂಭವಾಗಲಿದೆ. ಅದಕ್ಕೂ ಮುನ್ನ ರೈಲು ಸೇವೆ ಯಾವ ರೀತಿ ಇರಬೇಕು ಎಂಬುದನ್ನು ನಿರ್ಧರಿಸಿರುವ ನೈಋತ್ಯ ರೈಲ್ವೆ, ಈ ಮಾರ್ಗದಲ್ಲಿ 3 ಜೋಡಿ ರೈಲುಗಳು ಸಂಚರಿಸುವಂತೆ ಮಾಡಲಾಗುತ್ತೆ. ಕೆಎಸ್​ಆರ್​ ರೈಲು ನಿಲ್ದಾಣದಿಂದ ದೇವನಹಳ್ಳಿ ನಿಲ್ದಾಣದವರೆಗೆ ಈ ರೈಲುಗಳು ಸೇವೆ ನೀಡಲಿದೆ. ಮಾರ್ಗ ಮಧ್ಯದಲ್ಲಿ ಬರುವ ಕೆಐಎ ಹಾಲ್ಟ್​ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತದೆ. ಜನ ಸಂದಣಿ ಹೆಚ್ಚಿರುವ ಸಮಯವನ್ನು ಗುರುತಿಸಿ, ಆ ಅವಧಿಯಲ್ಲಿ ರೈಲುಗಳು ಸಂಚರಿಸಲಿವೆ.
ಸಮಯ ಉಳಿತಾಯ: ವಿಮಾನ ನಿಲ್ದಾಣದವರೆಗೆ ರೈಲು ಸೇವೆ ನೀಡುತ್ತಿರುವ ಕಾರಣ ಕೆಐಎಗೆ ತೆರಳುವವರಿಗೆ ಸಮಯ ಉಳಿತಾಯವಾಗಲಿದೆ. ಕೆಎಸ್​ಆರ್​ ರೈಲು ನಿಲ್ದಾಣದಿಂದ ಕೆಐಎ ಹಾಲ್ಟ್​ ನಿಲ್ದಾಣಕ್ಕೆ 30&40 ನಿಮಿಷದಲ್ಲಿ ತಲುಪಬಹುದಾಗಿದೆ. ಬಳಿಕ ಆ ಹಾಲ್ಟ್​ ನಿಲ್ದಾಣದಿಂದ ವಿಮಾನನಿಲ್ದಾಣಕ್ಕೆ ಶೆಟಲ್​ ಬಸ್​ಗಳ ಮೂಲಕ 10ರಿಂದ 15 ನಿಮಿಷದಲ್ಲಿ ತೆರಳಬಹುದು. ಒಟ್ಟಾರೆ 40ರಿಂದ 50 ನಿಮಿಷದೊಳಗಾಗಿ ಮೆಜೆಸ್ಟಿಕ್​ನಿಂದ ವಿಮಾನನಿಲ್ದಾಣಕ್ಕೆ ಹೋಗುವ ವ್ಯವಸ್ಥೆಯಾಗಲಿದೆ.
ಸದ್ಯದಲ್ಲೇ ಸೇವೆ ಆರಂಭ : ಹಾಲ್ಟ್​ ನಿಲ್ದಾಣ ನಿರ್ಮಾಣ ಕಾರ್ಯ ಕಳೆದೆರಡು ತಿಂಗಳ ಹಿಂದೆಯೇ ರ್ಪೂಣಗೊಂಡಿದೆ. ಆದರೆ, ರೈಲ್ವೆ ಮಂಡಳಿಯಿಂದ ಹಾಲ್ಟ್​ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಇನ್ನೂ ಅನುಮತಿ ದೊರೆತಿಲ್ಲ. ಆ ಕುರಿತಂತೆ ಈಗಾಗಲೆ ನೈಋತ್ಯ ರೈಲ್ವೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದ್ದು, ಸದ್ಯದಲ್ಲೇ ಅನುಮತಿ ದೊರೆಯುವ ಸಾಧ್ಯತೆಗಳಿವೆ. ಅದಾದ ನಂತರ ರೈಲು ನಿಲುಗಡೆ ವ್ಯವಸ್ಥೆಯಾಗಲಿದೆ.
ಸಕಲ ವ್ಯವಸ್ಥೆ: ನೈಋತ್ಯ ರೈಲ್ವೆ ಮತ್ತು ಬಿಐಎಎಲ್​ ಸಹಯೋಗದಲ್ಲಿ ಹಾಲ್ಟ್​ ನಿಲ್ದಾಣ ನಿಮಿರ್ಸಲಾಗಿದೆ. ಅದಕ್ಕೆ ಬಿಐಎಎಲ್​ 3 ಕೋಟ ರೂ. ವ್ಯಯಿಸಿದ್ದು, ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಟಿಕೆಟ್​ ಕೌಂಟರ್​, ವಾಹನ ನಿಲುಗಡೆಗೆ ಅವಕಾಶ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಪ್ರಯಾಣಿಕರು ಕುಳಿತುಕೊಳ್ಳಲು ಬೆಂಚ್​ಗಳ ಅಳವಡಿಕೆ ಮಾಡಲಾಗಿದೆ.
ಬೆಂಗಳೂರಿನ ನಂದಿನಿ ಲೇ ಔಟ್​ನಲ್ಲಿ ನಸುಕಿನಲ್ಲಿ ಮೊಳಗಿತು ಗುಂಡಿನ ಸದ್ದು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
