| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು, ನೋವುಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿವೆ. ರಾಜ್ಯದಲ್ಲಿ ಸರಾಸರಿ ನಿತ್ಯ 32 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 30 ಮಂದಿ ಪ್ರಾಣ ಕಳೆದುಕೊಂಡರೆ, 96 ಮಂದಿ ಗಾಯಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ದಿನಕ್ಕೆ 2- 3 ರಸ್ತೆ ಅಪಘಾತಗಳು ಸಾಮಾನ್ಯ ಎಂಬಂತಾಗಿದ್ದು, ಕನಿಷ್ಠ ಇಬ್ಬರು ಅಥವಾ ಮೂವರು ಸಾವನ್ನಪು್ಪತ್ತಿದ್ದಾರೆ. ಇದು ರಾಜ್ಯ ಅಪರಾಧ ದಾಖಲಾತಿ ವಿಭಾಗ (ಎಸ್​ಸಿಆರ್​ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ 2023ನೇ ಸಾಲಿನಲ್ಲಿ 10,830 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಒಟ್ಟಾರೆ 11,489 ಮಂದಿ ಮೃತಪಟ್ಟಿ ದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ.32 ಅಪಘಾತಗಳು ಸಂಭವಿಸಿದರೆ, ರಾಜ್ಯ ಹೆದ್ದಾರಿಯಲ್ಲಿ ಶೇ.30, ಹಳ್ಳಿಗಾಡು ರಸ್ತೆಗಳಲ್ಲಿನ ಅಪಘಾತ ಪ್ರಮಾಣ ಶೇ.38 ಆಗಿದೆ.
ಬೆಂಗಳೂರಿನಲ್ಲಿ 880 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 909 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿಯಲ್ಲಿಯೇ ಹೆಚ್ಚು ಜನಸಂಖ್ಯೆ ಮತ್ತು ವಾಹನದಟ್ಟಣೆ ಕಾರಣಕ್ಕೆ ಸಾವು, ನೋವುಗಳ ಪ್ರಮಾಣದಲ್ಲಿಯೂ ಅಧಿಕ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.
ರಸ್ತೆ ಅಪಘಾತಕ್ಕೆ ವಾಹನ ಫಿಟ್​ನೆಸ್, ಚಾಲಕ, ಹವಾಮಾನ ಮತ್ತು ರಸ್ತೆ ಗುಣಮಟ್ಟ ಪ್ರಮುಖ ಕಾರಣವಾಗಿವೆ. ಕಾಲಕಾಲಕ್ಕೆ ವಾಹನವನ್ನು ಸರ್ವೀಸ್ ಮಾಡಿಸಬೇಕು. ತಯಾರಿಕಾ ಕಂಪನಿ ನೀಡಿರುವ ವಾಹನ ಸಾಮರ್ಥ್ಯಕ್ಕೆ ತಕ್ಕಂತೆ ಚಲಾಯಿಸಬೇಕು. ಇಲ್ಲವಾದರೆ, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತವೆ. ಚಾಲಕ, ಸವಾರರು, ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮತ್ತಿನಲ್ಲಿ, ವಿಶ್ರಾಂತಿ ಇಲ್ಲದೆ ಡ್ರೖೆವಿಂಗ್ ಮಾಡುವುದು, ಅಡ್ಡಾದಿಡ್ಡಿ, ಅಜಾಗರೂಕ ಚಾಲನೆ ಆಕ್ಸಿಡೆಂಟ್​ಗೆ ಕಾರಣವಾಗುತ್ತಿವೆ. ಹವಾಮಾನ ವೈಪರೀತ್ಯ ಸಹ ಅಪಘಾತಕ್ಕೆ ಕಾರಣವಾಗಿದ್ದು, ಚಳಿಗಾಲದಲ್ಲಿ ಇವುಗಳ ಪ್ರಮಾಣ ಹೆಚ್ಚು. ಮಳೆ ಸುರಿದಾಗ ಬ್ರೇಕ್ ಹಿಡಿಯದೆ ಚಾಲಕನ ನಿಯಂತ್ರಣ ತಪು್ಪವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಗುಣಮಟ್ಟದ ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣ ಮಾಡಬೇಕಾಗಿದೆ. ಅವೈಜ್ಞಾನಿಕ ತಿರುವು, ರಸ್ತೆಉಬ್ಬು ಮತ್ತು ಸೂಚನಾಫಲಕ ಅಳವಡಿಸುವಲ್ಲಿ ನಿರ್ಲಕ್ಷ್ಯ ಹಾಗೂ ಜನವಸತಿ ಪ್ರದೇಶದಲ್ಲಿ ವಿದ್ಯುತ್ ದೀಪ ಅಳವಡಿಸದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ವಿಶ್ಲೇಷಿಸಲಾಗಿದೆ.
ಬ್ಲ್ಯಾಕ್​ ​ಸ್ಪಾಟ್​ಗಳಿಗೆ ಸಿಗದ ಮುಕ್ತಿ:3 ವರ್ಷಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ 5 ಅಫಘಾತ ಸಂಭವಿಸಿ 10 ಮಂದಿ ಸಾವನ್ನಪ್ಪಿದರೆ ಅಂತಹ ಸ್ಥಳ ವನ್ನು ‘ಬ್ಲಾ್ಯಕ್​ಸ್ಪಾಟ್’ ಎಂದು ಗುರುತಿಸಿ ಆ ಸ್ಥಳದಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ. 2016-18ರಲ್ಲಿ ಗುರುತಿಸಿರುವ ಬ್ಲಾ್ಯಕ್​ಸ್ಪಾಟ್​ಗಳ ಅಭಿವೃದ್ಧಿಯೇ ಆಗಿಲ್ಲ. ಇದಾದ ಮೇಲೆ 2018-21ನೇ ಸಾಲಿನಲ್ಲೂ ವರದಿ ಸಲ್ಲಿಸಲಾಗಿದೆ. ಇದೀಗ 2021-24ನೇ ಸಾಲಿನ ಬ್ಲಾ್ಯಕ್​ಸ್ಪಾಟ್ ವರದಿಯನ್ನು ರಾಜ್ಯ ಪೊಲೀಸ್ ಇಲಾಖೆ ಸಿದ್ದಪಡಿಸುತ್ತಿದೆ.
ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − three =
Remember me
