ಮಂಗಳೂರು:30 ವರ್ಷದ ವ್ಯಕ್ತಿಯೊಬ್ಬರು ಸ್ವಿಮಿಂಗ್ ಪೂಲ್​ನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ಮಂಗಳವಾರ (ಡಿ.12) ವರದಿಯಾಗಿದೆ. ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಶೀಘ್ರವೇ ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ವ್ಯಕ್ತಿ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ:ಈ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಸಂಭವಿಸುವ ಅಪಾಯ!
ಮೃತ ವ್ಯಕ್ತಿಯನ್ನು ಗುರುಗ್ರಾಮ ಮೂಲದ ಅಭಿಷೇಕ್ ಆನಂದ್ ಎಂದು ಗುರುತಿಸಲಾಗಿದ್ದು, ವ್ಯಕ್ತಿ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದ ಎಂದು ಹೇಳಲಾಗಿದೆ. ಈ ವೇಳೆ ಮೋಜಿನಿಂದ ಕೂಡಿದ್ದ ದಿನದಂದು ಜನಪ್ರಿಯ ಮಂಗಳಾ ಈಜುಕೊಳದಲ್ಲಿ ಈಜಲು ಹೋಗಿ ದಾರುಣವಾಗಿ ಸಾವನ್ನಪಿದ್ದಾರೆ.
ಸ್ವಿಮಿಂಗ್ ಪೂಲ್ ಬಳಿ ಜೀವರಕ್ಷಕರು ಮತ್ತು ಹಲವಾರು ಜನರು ಸ್ಥಳದಲ್ಲಿದ್ದರು ಕೂಡ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಆನಂದ್​ ಕೊಳದ ಆಳವಾದ ಜಾಗಕ್ಕೆ ಪ್ರವೇಶಿಸಿದ ಬಳಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಭಿಷೇಕ್ ಆನಂದ್ ಮುಳುಗಲು ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಭ್ರೂಣ ಹತ್ಯೆ ತಡೆಗೆ ಕಾರ್ಯ ಪಡೆ ರಚನೆ: 3 ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ
ಜೀವರಕ್ಷಕರ ಉಪಸ್ಥಿತಿಯ ಹೊರತಾಗಿಯೂ ಘಟನೆ ಸಂಭವಿಸಿದೆ ಎಂದು ಪರಿಗಣಿಸಿ, ಅವರಿಗೆ ಈಜುವ ಕೌಶಲ್ಯ ಇತ್ತೋ ಅಥವಾ ಇರಲಿಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಮೃತ ಅಭಿಷೇಕ್ ಕುಟುಂಬದ ಸದಸ್ಯರು ಇಂದು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ನಿತ್ಯಭವಿಷ್ಯ: ಈ ರಾಶಿಯವರಿಂದು ಸ್ನೇಹಿತನ ಸಾಲ ತೀರಿಸಲು ಹಣ ನೀಡುವಿರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + ten =
Remember me
