ಬೆಳಗಾವಿ:ಮುಂಬರುವ ವಿಧಾನಸಭೆ ಚುನಾವಣೆ ತಯಾರಿಗೆ 300 ಕೋಟಿ ರೂ., ಚರ್ಮಗಂಟು ರೋಗದಿಂದ ಮೖತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ನೀಡುವುದು ಸೇರಿ ಗಣ್ಯರು ಬಳಸುವ ಹೆಲಿಕಾಪ್ಟರ್ ಮತ್ತು ವಿಮಾನದ ಬಾಡಿಗೆ ಪಾವತಿಸುವುದಕ್ಕೆ 6 ಕೋಟಿ ರೂ. ಮೀಸಲಿಡುವುದು ಒಳಗೊಂಡಂತೆ 8,001.13 ಕೋಟಿ ರೂ.ಗಳ ಪೂರಕ ಅಂದಾಜುಗಳನ್ನು (ಸಪ್ಲಿಮೆಂಟರಿ ಬಜೆಟ್)
ಸೋಮವಾರ ಸರ್ಕಾರ ಮಂಡಿಸಿದೆ. ಮಳೆಗಾಲದ ಅಧಿವೇಶನದಲ್ಲಿ ಚರ್ಮಗಂಟು ರೋಗ ಉಲ್ಬಣಿಸುತ್ತಲೇ ಹೋಗಿ ನೂರಾರು ರಾಸುಗಳು ಮೃತಪಟ್ಟಿದ್ದ ಬಗ್ಗೆ ಚರ್ಚೆಯಾಗಿತ್ತು. ಇದೀಗ ಚರ್ಮಗಂಟು ರೋಗದಿಂದ ಮೖತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ನೀಡುವುದಕ್ಕೆ 30 ಕೋಟಿ ರೂ. ನಿಗದಿ ಮಾಡಿರುವುದು ಗಮನಾರ್ಹ. ನಿವೖತ್ತಿ ಹೊಂದುವ ಅಧಿಕಾರಿ ಮತ್ತು ಸಿಬ್ಬಂದಿಯ ಅಂತಿಮ ಹಂತದ ರಜೆ ನಗದೀಕರಣಕ್ಕಾಗಿ 8 ಕೋಟಿ ರೂ. ಒದಗಿಸಲಾಗಿದೆ. ಅಬಕಾರಿ ಇಲಾಖೆಯ ಕೇಂದ್ರೀಯ ರಾಸಾಯನಿಕ ಪ್ರಯೋಗಾಲಯದ ಉನ್ನತೀಕರಣಕ್ಕಾಗಿ 45 ಲಕ್ಷ ರೂ., ಐಐಎಂಗೆ ಶುಲ್ಕವಾಗಿ ಪಾವತಿಸಲು ವಾಣಿಜ್ಯ ತೆರಿಗೆ ಇಲಾಖೆಗೆ 3 ಕೋಟಿ ರೂ. ಒದಗಿಸಲಾಗಿದೆ.
ಸಮುದಾಯಗಳಿಗೆ ಅಭಿವೃದ್ಧಿ ಕೊಡುಗೆ:ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್​ನ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸರ್ವಾಂಗೀಣ ಅಭಿವೃದ್ಧಿಗೆ 3.50 ಕೋಟಿ ರೂ., ಚಾಮರಾಜನಗರ ಜಿಲ್ಲೆ ಚಿಕ್ಕಲ್ಲೂರು ಹೊಸ ಮಠದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ನಿರ್ವಿುಸುವ ಸಮುದಾಯ ಭವನಕ್ಕೆ 2 ಕೋಟಿ ರೂ., ಅಖಿಲ ಭಾರತ ಗಾಣಿಗರ ಕ್ಷೇಮಾಭಿವೃದ್ಧಿ ಸಂಘ ಹಿರಿಯೂರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ., ಕೊಡವ ಸಮಾಜ ಮಾದಾಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ1 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗಿದೆ. ಅದೇ ರೀತಿ ಈಡಿಗ, ಬಿಲ್ಲವ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕೋಶ ಸೃಜಿಸಲು10 ಕೋಟಿ ರೂ. ನೀಡಲಾಗಿದೆ.

ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − one =
Remember me
