ಬೆಂಗಳೂರು:ಮನೆಯಲ್ಲಿ ಒಂಟಿಯಾಗಿದ್ದ 71 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ 31 ವರ್ಷದ ಯುವಕನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ನಿವಾಸಿ ವೃದ್ಧೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಜ್ಯೂಲಿ ರೋಸನ ಎಂಬಾತನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವೃದ್ಧೆಯ ತಾಯಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದು, ಕೋರಮಂಗಲದಲ್ಲಿದ್ದ ಸ್ವಂತ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ನೆರೆ ಮನೆಯಲ್ಲಿ ಬಾಡಿಗೆಗಿದ್ದ ಜ್ಯೂಲಿ ಆಗಾಗ ಬಂದು ಮಾತನಾಡುತ್ತಿದ್ದ.
ಜ.2ರ ಮಧ್ಯಾಹ್ನ 2.30ರಲ್ಲಿ ಕೊಠಡಿಯಲ್ಲಿ ವೃದ್ಧೆ ವಿಶ್ರಾಂತಿ ಪಡೆಯುತ್ತಿದ್ದರು. ಕಾಲಿಂಗ್ ಬೆಲ್ ಶಬ್ದ ಕೇಳಿ ಬಾಗಿಲು ತೆಗೆದು ನೋಡಿದಾಗ ಜ್ಯೂಲಿ ಮನೆ ಮುಂದೆ ನಿಂತಿದ್ದ. ‘ನಿಮ್ಮ ಮನೆಯ ಗಾಜಿನ ಬಾಗಿಲು ಒಡೆದು ಹೋಗಿದೆ. ನನ್ನ ಪರಿಚಿತ ಕಾರ್ಪೆಂಟರ್​ನಿಂದ ರಿಪೇರಿ ಮಾಡಿಸುತ್ತೇನೆ. ನೀವು ಇಲ್ಲೇ ವಿಶ್ರಾಂತಿ ಪಡೆದುಕೊಳ್ಳಿ’ ಎಂದು ಹೇಳಿದ್ದ. ಏನಾಗಿದೆ ಎಂದು ನೋಡಲು ವೃದ್ಧೆ ಬಂದಾಗ, ಆರೋಪಿಯು ಮುಖ್ಯ ದ್ವಾರದ ಗಾಜು ಒಡೆದು ಮನೆಯೊಳಗೆ ಪ್ರವೇಶಿಸಿರುವುದು ಕಂಡುಬಂದಿತ್ತು. ಈ ಬಗ್ಗೆ ಪ್ರಶ್ನಿಸಬೇಕೆನ್ನುವಷ್ಟರಲ್ಲಿ ಕೆಳಮಹಡಿಯಲ್ಲಿರುವ ಬೆಡ್​ರೂಂಗೆ ಹೊತ್ತೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದ.
ನೆರೆಮನೆ ಮಹಿಳೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೋರ ಮಂಗಲ ಠಾಣೆಗೆ ವೃದ್ಧೆಯನ್ನು ಕರೆ ತಂದು ದೂರು ಕೊಡಿಸಿದ್ದಾರೆ. ನಂತರ ಪೊಲೀಸರು ಜ್ಯೂಲಿಯನ್ನು ಬಂಧಿಸಿದ್ದಾರೆ.
ಯುವಕರಿಬ್ಬರ ಸರ ಕಳವು
ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ವಿುಗಳು ನಂದಿನಿ ಲೇಔಟ್ ಹಾಗೂ ಓಕಳಿಪುರದ ಅಂಡರ್​ಪಾಸ್​ನಲ್ಲಿ ಯುವಕರಿಬ್ಬರಿಗೆ ಚೂರಿ ತೋರಿಸಿ ಚಿನ್ನದ ಸರ ದೋಚಿದ್ದಾರೆ. ಮೈಸೂರು ಮೂಲದ ಪುನೀತ್ ಹಾಗೂ ನಂದಿನಿ ಲೇಔಟ್ ನಿವಾಸಿ ಹರೀಶ್ ಬಾಬು ಸುಲಿಗೆಗೊಳಗಾದವರು.
ಪುನೀತ್, ಪತ್ನಿಯನ್ನು ಬಸವೇಶ್ವರನಗರದ ತವರುಮನೆಯಲ್ಲಿ ಬಿಟ್ಟು ಮಹದೇವಪುರದಲ್ಲಿರುವ ಸ್ನೇಹಿತ ಮನು ಮನೆಗೆ ಆತನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ಓಕಳಿಪುರ ಅಂಡರ್​ಪಾಸ್ ಬಳಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಅಲ್ಲಿಗೆ ಆಕ್ಟಿವಾ ಹಾಗೂ ಡಿಯೋ ದ್ವಿಚಕ್ರವಾಹನಲ್ಲಿ ಬಂದ ಇಬ್ಬರು ದುಷ್ಕರ್ವಿುಗಳು ಪುನೀತ್​ಗೆ ಚೂರಿ ತೋರಿಸಿ ಬೆದರಿಸಿ ಸುಲಿಗೆ ಮಾಡಲು ಮುಂದಾಗಿದ್ದರು. ಅದನ್ನು ತಡೆಯಲು ಬಂದ ಮನು ಕೈಗೆ ಚೂರಿಯಿಂದ ಇರಿದ ದುಷ್ಕರ್ವಿುಗಳು, ಪುನೀತ್ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ದರೋಡೆ
ನಂದಿನಿ ಲೇಔಟ್​ನ ಎಸ್​ಎಲ್​ವಿ ಬಾರ್ ಆಂಡ್ ರೆಸ್ಟೋರೆಂಟ್ ಸಮೀಪದಲ್ಲಿ ರಾತ್ರಿ 11.30ರಲ್ಲಿ ಹರೀಶ್ ಬಾಬು ಎಂಬಾತ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಸುಲಿಗೆಕೋರರು ಚೂರಿ ತೋರಿಸಿ ಬೆದರಿಸಿ 30 ಗ್ರಾಂ ಚಿನ್ನದ ಸರವನ್ನು ಸುಲಿಗೆ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
