ಬೆಂಗಳೂರು:ಮಧ್ಯಪ್ರದೇಶದ ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಅನ್ವಯಿಕ ಸೇವೆಗಳು, ಜವಳಿ, ಕೃಷಿ, ಆಹಾರ ಸಂಸ್ಕರಣೆ ವಲಯದಲ್ಲಿ ಒಟ್ಟು 3,200 ಕೋಟಿ ರೂ. ಹೂಡಿಕೆಗೆ ಕಂಪನಿಗಳು ಉತ್ಸುಕತೆ ತೋರಿವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಮಾಹಿತಿ ನೀಡಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ವಿವಿಧ ಕಂಪನಿಗಳು, ಉದ್ಯಮಿಗಳು, ಹೂಡಿಕೆದಾರರ ಜತೆಗೆ ದುಂಡು ಮೇಜಿನ ಸಭೆ, ಮುಖಾಮುಖಿ ಚರ್ಚೆ, ಸಮಾಲೋಚನೆ ಬಳಿಕ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭೋಪಾಲ್‌ನಲ್ಲಿ 2025ರ ೆಬ್ರವರಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ಬೆಂಗಳೂರಿಗೆ ನೀಡಿದ ಭೇಟಿಯು ಲಪ್ರದವಾಗಿದೆ ಎಂದರು.
ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು 550 ಬಿಲಿಯನ್ ಡಾಲರ್‌ಗೆ ತಲುಪುವುದು ಉದ್ಯಮ, ವಹಿವಾಟು, ಹೂಡಿಕೆ ಮತ್ತಿತರ ಚಟುವಟಿಕೆಗಳ ಗುರಿಯಾಗಿದೆ. ಈ ನಿಟ್ಟಿನಲ್ಲಿ ಇನ್ವೆಸ್ಟ್ ಮಧ್ಯಪ್ರದೇಶ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ-2025 ಮಹತ್ವದಪಾತ್ರವಹಿಸುವ ನಿರೀಕ್ಷೆಯಿದೆ.
ಮಧ್ಯಪ್ರದೇಶದ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮದೊಂದಿಗೆ ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್, ಅಸೋಸಿಯೇಷನ್, ಟಿಐಇ ಗ್ಲೋಬಲ್, ಎಸಿಎಲ್‌ಐಎನ್‌ಎ, ಎಜಿಐ ಸೇರಿ ಒಟ್ಟು ನಾಲ್ಕು ಒಡಂಬಡಿಕೆಗಳು ಏರ್ಪಟ್ಟಿರುವುದು ಗಮನಾರ್ಹ.
ಐಟಿ, ಐಟಿಇಎಸ್, ಮತ್ತು ಇಎಸ್‌ಡಿಎಮ್ ಕ್ಷೇತ್ರಗಳಲ್ಲಿ ಹೂಡಿಕೆ ಪ್ರಸ್ತಾವನೆಗಳನ್ನು ಈ ಒಪ್ಪಂದಗಳು ಒಳಗೊಂಡಿವೆ. ಗೂಗಲ್ ಕ್ಲೌಡ್ ಕಂಪನಿಯು ಸ್ಟಾರ್ಟಪ್ ಹಬ್ ಕೇಂದ್ರ ಸ್ಥಾಪಿಸಲು ಆಸಕ್ತಿವಹಿಸಿದೆ ಎಂದು ಡಾ.ಮೋಹನ್ ಯಾದವ್ ತಿಳಿಸಿದರು.
ಐಟಿ-ಬಿಟಿ, ನವೋದ್ಯಮ, ಬಾಹ್ಯಾಕಾಶ ತಂತ್ರಜ್ಞಾನ ಸೇರಿ ಹಲವು ಕ್ಷೇತ್ರಗಳಲ್ಲಿ ಬೆಂಗಳೂರು ತನ್ನದೇ ಹಿರಿಮೆಯನ್ನು ಹೊಂದಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ಭ್ರಾತೃತ್ವ ಸಂಬಂಧವಿದೆ ಎಂದು ಹೇಳಿದರು.
ಭಾರತದ ಭವಿಷ್ಯ ಉಜ್ವಲಗೊಳಿಸುವಲ್ಲಿ ನಿರ್ಣಾಯಕವಾಗಿರುವ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶ ಒಂದಾಗಿದೆ ಎಂದು ಪ್ರತಿಷ್ಠಿತ ಉದ್ಯಮಿ ಮೋಹನ್ ದಾಸ್ ಪೈ ಮೆಚ್ಚುಗೆ ವ್ಯಕ್ತಪಡಿಸಿದರು.
ಚರ್ಚೆ, ಸಭೆ ವೇಳೆ ಸುಸ್ಥಿರ ಸರ್ಕಾರ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆ, ಕಡಿಮೆ ಉತ್ಪಾದನಾ ವೆಚ್ಚ, 31 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ, ಜಮೀನು ಲಭ್ಯತೆ, ಕೈಗಾರಿಕಾ ನೀತಿ ಮತ್ತಿತರ ಅನುಕೂಲತೆಗಳತ್ತ ಗಮನಸೆಳೆಯಲಾಯಿತು.
ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಗೆ ಭೇಟಿ, ರಕ್ಷಣಾ ಸಾಧನಗಳ ನಿರ್ಮಾಣ ಪ್ರಕ್ರಿಯೆ, ತೇಜಸ್ ವಿಮಾನ ವೀಕ್ಷಣೆಯೊಂದಿಗೆ ಬೆಂಗಳೂರಿನಲ್ಲಿ ಸಭೆ, ಮುಖಾಮುಖಿ ಚರ್ಚೆಗಳು ಶುರುವಾದವು ಎಂದು ಡಾ.ಮೋಹನ್ ಯಾದವ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + seventeen =
Remember me
