ಬೆಂಗಳೂರು:ಕಳೆದ ಸಾಲಿನಲ್ಲಿ ಮಾರಾಟ ಮಹಾಮಂಡಳವು 2,584 ಕೋಟಿ ರೂ. ವ್ಯವಹಾರ ನಡೆಸಿದ್ದು, ಅಂದಾಜು 34.22 ಕೋಟಿ ರೂ.ಲಾಭಗಳಿಸಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ.
ಪ್ರಸ್ತುತ ವರ್ಷ ಒಟ್ಟು 3.84 ಲಕ್ಷ ಮೆ.ಟನ್ ರಸಗೊಬ್ಬರ ಪೈಕಿ 360.48 ಕೋಟಿ ರೂ.ಮೌಲ್ಯದ 2.89 ಲಕ್ಷ ಮೆ.ಟನ್ ಸರಬರಾಜು ಮಾಡಲಾಗಿದೆ. ಅ.31 ಅಂತ್ಯಕ್ಕೆ 94,661 ಮೆ.ಟನ್ ದಾಸ್ತಾನು ಇದೆ. ಕಳೆದ 5 ವರ್ಷಗಳಲ್ಲಿ 1,514 ಕೋಟಿ ರೂ.ಮೌಲ್ಯದ ರಸಗೊಬ್ಬರ ಮಾರಾಟ ಮಾಡಲಾಗಿದೆ.ರಾಜ್ಯಾದ್ಯಂತ 40 ಶಾಖೆಗಳ ಮುಖಾಂತರ ರಸಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ. ಜತೆಗೆ, ಸಹಕಾರ ಸಂಸ್ಥೆಗಳ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ ಎಂದು ಬುಧವಾರ ಕೇಂದ್ರ ಕಚೇರಿಯಲ್ಲಿ ನಡೆದ ಗೋಷ್ಠಿಯಲ್ಲಿ ತಿಳಿಸಿದರು.
ಅನಮತಿಗೆ ಕಾಯುತ್ತಿರುವ ಮಂಡಳದಾವಣಗೆರೆಯಲ್ಲಿ 12.50 ಲಕ್ಷ ಮೆ.ಟನ್ ಸಾಮರ್ಥ್ಯದ ‘ಗ್ರೀನ್ ಫೀಲ್ಡ್ ಯೂರಿಯಾ’ಉತ್ಪಾದನಾ ಘಟಕ ಪ್ರಾರಂಭಿಸಲು ಅನುಮತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಮಾರುಕಟ್ಟೆ ಮಧ್ಯೆ ಪ್ರವೇಶ(ಎಂಐಎಸ್) ಹಾಗೂ ಬೆಲೆ ಸ್ಥಿರೀಕರಣ ನಿಧಿ(ಪಿಎಸ್‌ಎ್) ಯೋಜನೆಗಳಡಿ ಮಂಡಳವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.ರೈತರ ಅನುಕೂಲಕ್ಕಾಗಿ ಚಿಲ್ಲರೆ ರೂಪದಲ್ಲಿ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯದಲ್ಲಿ 50 ಸ್ಥಳಗಳನ್ನು ಗುರುತಿಸಿರುವ ಪೈಕಿ ಈಗಾಗಲೇ 10 ಸ್ಥಳಗಳಲ್ಲಿ ಕಾರ್ಯಾರಂಭ ಮಾಡಿವೆ. ಉಳಿದ ಮಾರಾಟ ಮಳಿಗೆಗಳನ್ನು ಆರಂಭಿಸಲು ಶೀಘ್ರವೇ ಕ್ರಮವಹಿಸಲಾಗುವುದು ಎಂದು ರಾಜೇಂದ್ರಕುಮಾರ್ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
