ಬೆಂಗಳೂರು: ಶನಿವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ 36 ತಾಸುಗಳ ಕಾಲ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿರಲಿದೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವಹಿವಾಟು ಸಂಪೂರ್ಣ ಬಂದ್ ಆಗಲಿದೆ.
ರಾಜ್ಯ ಸರ್ಕಾರ ಮೇ 31ರವರೆಗೆ ಕರೊನಾ ಲಾಕ್​ಡೌನ್ ಮುಂದುವರಿಸಿ ಬಹುತೇಕ ಸೇವೆಗಳಿಗೆ ನಿಯಮ ಸಡಿಲಿಕೆ ಮಾಡಿತ್ತು. ಆದರೆ, ಭಾನುವಾರ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಆದೇಶಿಸಿತ್ತು. ಸಡಿಲಿಕೆ ಬಳಿಕ ನಾಳೆ ಮೊದಲ ಭಾನುವಾರವಾಗಿದ್ದು, ರಾಜ್ಯವ್ಯಾಪಿ ಸಂಪೂರ್ಣ ಲಾಕ್​ಡೌನ್ ಇರಲಿದೆ. ಪ್ರಮುಖ ಹೆದ್ದಾರಿ, ರಸ್ತೆಗಳು ಹೊರತುಪಡಿಸಿ ಉಳಿದ ಎಲ್ಲ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗುತ್ತದೆ. ಜಿಲ್ಲಾ ಗಡಿ ಮತ್ತು ಪ್ರಮುಖ ಜಂಕ್ಷನ್​ಗಳಲ್ಲಿ ಪೊಲೀಸರು ಕಾವಲು ಇರಲಿದ್ದಾರೆ. ಅನಗತ್ಯವಾಗಿ ಸಂಚಾರ ನಡೆಸಿದರೆ ಪೊಲೀಸರು ವಾಹನ ಜಪ್ತಿ ಮಾಡಿ, ಕೇಸ್ ದಾಖಲಿಸಲಿದ್ದಾರೆ. ಪೂರ್ವನಿಗದಿತ ಮದುವೆ ಸಮಾರಂಭಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಧರ್ಮ, ರಾಜಕೀಯ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. ಪಾರ್ಕ್ ಮತ್ತು ರಸ್ತೆಗಳಲ್ಲಿ ವಾಯುವಿಹಾರ ನಡೆಸುವಂತಿಲ್ಲ.
ಇದನ್ನೂ ಓದಿಜೂನ್​ 21-28ರ ನಡುವೆ ಗರಿಷ್ಠ ಮಟ್ಟಕ್ಕೆ ಕರೊನಾ ಕೇಸ್​ – ಅಧ್ಯಯನ ವರದಿ ಸುಳಿವು
ಏನಿರಲ್ಲ?
ಬಿಎಂಟಿಸಿ, ಕೆಎಸ್​ಆರ್​ಟಿಸಿ, ರೈಲು, ಕ್ಯಾಬ್, ಟ್ಯಾಕ್ಸಿ, ಆಟೋ ಮದ್ಯದ ಅಂಗಡಿ, ಸಲೂನ್ ಶಾಪ್, ಮೆಕಾನಿಕ್ ಶಾಪ್ ಮಾಲ್, ಸಿನಿಮಾ ಟಾಕೀಸ್, ಕೈಗಾರಿಕೆಗಳು ತೆರೆಯುವುದಿಲ್ಲ ಪಾರ್ಕ್​ಗಳು, ವಾಣಿಜ್ಯ ಚಟುವಟಿಕೆ ಅಂಗಡಿಗಳು, ರಸ್ತೆಗಳೆಲ್ಲ ಬಂದ್
ಏನಿರುತ್ತೆ?
ಹಾಲು, ತರಕಾರಿ, ಔಷಧ ಅಂಗಡಿ ಮಾಂಸದ ಅಂಗಡಿ, ಹೋಟೆಲ್​ನಲ್ಲಿ ಪಾರ್ಸಲ್ ಆನ್​ಲೈನ್ ತರಗತಿ, ಆಸ್ಪತ್ರೆ, ಕ್ಲಿನಿಕ್ ಎಂದಿನಂತೆ ಕಾರ್ಯ
ಆಂಬುಲೆನ್ಸ್, ಪೊಲೀಸ್, ಮಾಧ್ಯಮಗಳ ಸೇವೆ
ಶೀಘ್ರವೇ ಎಫ್​ಎಂ ಮತ್ತು ಸಮುದಾಯ ರೇಡಿಯೋಗಳಲ್ಲಿ ಸುದ್ದಿ ಪ್ರಸಾರ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
