ಬೆಂಗಳೂರು:2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರ್​ಗಳ ನೇಮಕಾತಿ ವಿವಾದವನ್ನು ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ನಿಯಮ 69ರ ಮೇರೆಗೆ ನಡೆದ ಚರ್ಚೆಯ ನಡುವೆ ಸರ್ಕಾರದ ನಿರ್ಧಾರ ಪ್ರಕಟಿಸಿದ ಸಿಎಂ, ಸದನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದರು. ಕೆಪಿಎಸ್​ಸಿ ನೇಮಕಾತಿ ಪ್ರಕ್ರಿಯೆಯಿಂದ ಹಿಡಿದು ಸರ್ಕಾರದ ತೀರ್ವನ, ಕೆಎಟಿ ಮತ್ತು ನ್ಯಾಯಾಲಯದ ತನಕ ನಡೆದ ಬೆಳವಣಿಗೆಗಳನ್ನು ಸದನಕ್ಕೆ ವಿವರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರ ನಿಮ್ಮೆಲ್ಲರ ಭಾವನೆಗಳ ಪರವಾಗಿದೆ ಎಂದು ತಿಳಿಸಿದರು.
ಮಾಧುಸ್ವಾಮಿ ಉತ್ತರಕ್ಕೆ ತೃಪ್ತರಾಗದ ಎಚ್.ಕೆ.ಪಾಟೀಲ್, ತಮ್ಮದಲ್ಲದ ತಪ್ಪಿಗೆ ಅಭ್ಯರ್ಥಿಗಳು ಪರಿತಪಿಸುವಂತಾಗಿದೆ. ಕಾನೂನು ತೊಡಕು ಇದ್ದರೆ ಅದನ್ನು ಸರಿಪಡಿಸಿ, ಸರ್ಕಾರ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದಾಗ ಎಚ್.ಡಿ.ರೇವಣ್ಣ ಸೇರಿ ಸದನ ಒಕ್ಕೊರಲಿನಿಂದ ಧ್ವನಿಗೂಡಿಸಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಅಗತ್ಯವಿದ್ದರೆ ಮಸೂದೆಯನ್ನು ಜಾರಿಗೆ ತರಲಿ ಎಂದು ಸಲಹೆ ನೀಡಿದರು.
23 ಇಂದಿರಾ ಕ್ಯಾಂಟೀನ್ ರದ್ದು
ರಾಜ್ಯದ 16 ಜಿಲ್ಲೆಗಳ 23 ಇಂದಿರಾ ಕ್ಯಾಂಟೀನ್​ಗಳ ನಿರ್ವಣವನ್ನು ರದ್ದುಪಡಿಸಲಾಗಿದೆ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ತಿಳಿಸಿದರು. ವಿಧಾನಸಭೆಯಲ್ಲಿ ಕಾಂಗ್ರೆಸ್​ನ ಎಸ್.ಎನ್.ಸುಬ್ಬಾರೆಡ್ಡಿ ಪ್ರಶ್ನೆಗೆ ಸಚಿವರು ಉತ್ತರಿಸಿದರು. ನಿವೇಶನ ಲಭ್ಯವಿಲ್ಲದ ಕಾರಣ 16 ಜಿಲ್ಲೆಗಳ 23 ಅಡುಗೆ ಕೋಣೆ ಸಹಿತ ಮತ್ತು 2 ಅಡುಗೆ ಕೋಣೆ ರಹಿತ ಕ್ಯಾಂಟೀನ್​ಗಳನ್ನು ರದ್ದುಗೊಳಿಸಲಾಗಿದೆ ಎಂದರು. ಬಾಗೇಪಲ್ಲಿಯ ಸಂತೆ ಮೈದಾನದಲ್ಲಿ 66 ಕೆ.ವಿ. ಹೈಟೆನ್ಷನ್ ವೈರ್ ಕೆಳ ಭಾಗದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿತ್ತು. ವಿದ್ಯುತ್ ಪ್ರಸರಣ ನಿಗಮ ದೂರು ಕೊಟ್ಟ ನಂತರ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಬೇರೆ ಸ್ಥಳ ಗುರುತಿಸಿದರೆ ಅನುಮೋದನೆ ನೀಡುವುದಾಗಿ ತಿಳಿಸಿದರು.
ಕ್ರಷರ್​ಗಳ ನಿಯಂತ್ರಣ ವಿಧೇಯಕ ಮಂಡನೆ
ಕಲ್ಲುಪುಡಿ ಮಾಡುವ ಘಟಕ ಲೈಸನ್ಸ್ ವರ್ಗಾವಣೆ ಸೇರಿ ವಿವಿಧ ಕಾರಣಗಳಿಗಾಗಿ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕ(ಕ್ರಷರ್)ಗಳ ನಿಯಂತ್ರಣ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಗಣಿ ಮತ್ತು ಭೂ ವಿಜ್ಞಾನ ಮಂತ್ರಿ ಸಿ.ಸಿ.ಪಾಟೀಲ ವಿಧೇಯಕ ಮಂಡಿಸಿದರು. ಐದು ವರ್ಷಗಳವರೆಗೆ ನೀಡುತ್ತಿದ್ದ ಲೈಸನ್ಸ್ ಈ ವಿಧೇಯಕ ಅಂಗೀಕಾರದ ಬಳಿಕ 20 ವರ್ಷಗಳಿಗೆ ದೊರೆಯಲಿದೆ. 2020ಕ್ಕಿಂತ ಮೊದಲು ಮಂಜೂರಾಗಿ ಅಸ್ತಿತ್ವದಲ್ಲಿರುವ ಎಲ್ಲ ಕ್ರಷರ್​ಗಳ ಲೈಸನ್ಸ್ ಮೂಲ ದಿನಾಂಕದಿಂದ 20 ವರ್ಷಗಳ ಅವಧಿಗೆ ಮಂಜೂರಾತಿ ದೊರೆಯಲಿದೆ. ಲೈಸನ್ಸಿಂಗ್ ಪ್ರಾಧಿಕಾರದ ಅನುಮೋದನೆಯೊಡನೆ ಲೈಸನ್ಸ್ ಹೊಂದಿರುವವನು ಬೇರೊಬ್ಬರಿಗೆ ವರ್ಗಾಯಿಸಲು ಈ ವಿಧೇಯಕದಿಂದ ಅವಕಾಶ ದೊರೆಯಲಿದೆ. ಅಷ್ಟೇ ಅಲ್ಲ, ಯಾವುದೇ ದಂಡನೀಯ ಅಪರಾಧಕ್ಕೆ ಅಭಿಯೋಜನೆ ನಡೆಸುವ ಮೊದಲು ಅಥವಾ ತರುವಾಯ ದಂಡ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಿ ಗಣಿ ಇಲಾಖೆ ಉಪ ನಿರ್ದೇಶಕ ಅಥವಾ ಹಿರಿಯ ಭೂವಿಜ್ಞಾನಿ ಅಥವಾ ಸರ್ಕಾರ ಗೊತ್ತುಪಡಿಸಿದ ಅಧಿಕಾರಿಯ ಮೂಲಕ ರಾಜಿ ಮಾಡಿಕೊಳ್ಳಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ತಿದ್ದುಪಡಿ ವಿಧೇಯಕಗಳಿಗೆ ಅಸ್ತು
2020ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕಗಳಿಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಬಹಿರಂಗ ಸ್ಥಳಗಳನ್ನು ವಿರೂಪಗೊಳಿಸುವ ತಿದ್ದುಪಡಿ ವಿಧೇಯಕ್ಕೂ ಸದನ ಅಸ್ತು ಎಂದಿದೆ. ನಿಯಮ ಉಲ್ಲಂಘಿಸಿ ನಿರ್ವಿುಸಿರುವ ಮನೆ ಮತ್ತು ಕಟ್ಟಡಗಳಿಗೆ ತೆರಿಗೆ ಜತೆ ದಂಡ ವಿಧಿಸಲು ಈ ವಿಧೆಯಕ ಅನುವು ಮಾಡಿಕೊಡುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮಾವಳಿ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿರುವ ಮನೆಗಳಿಗೆ ಹೆಚ್ಚುವರಿ ತೆರಿಗೆ ಹಾಕಲು ಅವಕಾಶಗಳಿಲ್ಲ. ಆದಕಾರಣ ದಂಡ ವಿಧಿಸಲು ಈ ವಿದೇಯಕ ತರಲಾಗಿದೆ. ಈ ಮೂಲಕ ಅಕ್ರಮ ತಡೆಯುವುದು ಮಸೂದೆ ಉದ್ದೇಶವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಿಸಿದ ಬಳಿಕ ಸದನ ಒಪ್ಪಿಗೆ ನೀಡಿತು.
ನೋಟಾ ಸೇರ್ಪಡೆ:2020ನೇ ಸಾಲಿನ ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೂ ಒಪ್ಪಿಗೆ ನೀಡಲಾಗಿದ್ದು, ಇನ್ನು ಮುಂದೆ ಮತದಾನ ಪ್ರಕ್ರಿಯೆಯಲ್ಲಿ ನೋಟಾ ಸೇರ್ಪಡೆಯಾಗಲಿದೆ.
ರಾಯಚೂರು ಪ್ರತ್ಯೇಕ ವಿವಿ: ಗುಲ್ಬರ್ಗ ವಿವಿಯಿಂದ ರಾಯ ಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಪ್ರತ್ಯೇಕಿಸಿ ಹೊಸ ವಿವಿ ಪ್ರಾರಂಭಿಸುವ 2020ನೇ ಸಾಲಿನ ಕರ್ನಾಟಕ ರಾಜ್ಯ ವಿವಿ (ತಿದ್ದುಪಡಿ) ವಿಧೇಯಕಕ್ಕೂ ಒಪ್ಪಿಗೆ ನೀಡಲಾಗಿದೆ. ರಾಯಚೂರು ವಿವಿ ಮಾಡುತ್ತಿರುವ ಸರ್ಕಾರದ ಕ್ರಮ ಸ್ವಾಗತಿಸಿದ ಜೆಡಿಎಸ್​ನ ವೆಂಕಟರಾವ್ ನಾಡಗೌಡ ಮತ್ತಿತರರು ಸಿಎಂಗೆ ಅಭಿನಂದನೆ ಸಲ್ಲಿಸಿದರು.
ಕರೋನಾ ಹರಡಿದ್ರೆ ಜೋಕೆ!: ಬಂಧಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ ಎಚ್ಚರಿಕೆ ಎಂದ ಬೆಂಗಳೂರು ಪೊಲೀಸ್ ಕಮಿಷನರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 10 =
Remember me
