ಬೆಂಗಳೂರು:ಚಿತ್ರದುರ್ಗ ಹೆದ್ದಾರಿಯಲ್ಲಿ 37 ಸಾವು ಸಂಭವಿಸಿರುವ ಕುರಿತು ಟ್ರಾಫಿಕ್ ಆ್ಯಂಡ್ ರೋಡ್ ಸೇಫ್ಟಿ ಎಡಿಜಿಪಿ ಅಲೋಕ್​ ಕುಮಾರ್ ಮಾಹಿತಿ ಹಂಚಿಕೊಂಡಿದ್ದಲ್ಲದೆ, ವಾಹನ ಸವಾರರಿಗೆ ಕಿವಿಮಾತನ್ನೂ ಹೇಳಿದ್ದಾರೆ.
‘ಕರಾಳ ಶನಿವಾರ.. ಇಂದು ಬೆಳಗಿನ ಜಾವ ಚಿತ್ರದುರ್ಗ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾದ ಐವರು ಸೇರಿದಂತೆ 37 ಮಂದಿ ಸಾವಿಗೀಡಾಗಿದ್ದಾರೆ. ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು’ ಎಂದು ಅವರು ಮಾಹಿತಿ ತಿಳಿಸಿದ್ದಾರೆ.
ಈ ಹೆದ್ದಾರಿಯಲ್ಲಿ ಸಾವಿಗೀಡಾದವರ ಪೈಕಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರು. ಅನನುಭವಿ ಚಾಲಕರು ರಾತ್ರಿ ವಾಹನ ಚಲಾಯಿಸುವುದನ್ನು ತಪ್ಪಿಸಬೇಕು ಹಾಗೂ ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಆದರೆ 37 ಸಾವು ಒಂದೇ ದಿನದಲ್ಲಿ ಸಂಭವಿಸಿದ್ದಾ ಅಥವಾ ಇದುವರೆಗೆ ಎಷ್ಟು ಅವಧಿಯಲ್ಲಿ ಸಂಭವಿಸಿದ್ದು ಎನ್ನುವ ಕುರಿತು ಅವರ ಟ್ವೀಟ್​ನಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಗೊಂದಲ ಮೂಡಿರುವುದರಿಂದ ನೆಟ್ಟಿಗರು ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸುವಂತೆ ಅವರಿಗೆ ರಿಪ್ಲೈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Black saturday
37 lives lost including 5 deaths near Chitradurga in early morning today , where the car hit the lorry from behind
Bike riders form the largest chunk
Inexperienced driver must avoid Night driving
Two wheeler riders should use Helmet for their own safetypic.twitter.com/r9GXirggYc
— alok kumar (@alokkumar6994)August 13, 2023

ಏನಾಯ್ತು ಇವರಿಗೆಲ್ಲ? ಇಂದ್ಯಾಕೆ ಈ ಥರ..?: ಇಲ್ಲಿದೆ ವಿವರ…

ರಾಜಭವನದ ಎದುರು ರಸ್ತೆ ಬದಿಯಲ್ಲೇ ಹೆರಿಗೆ!; ಆರೋಗ್ಯ ವ್ಯವಸ್ಥೆ ಬಗ್ಗೆ ವ್ಯಾಪಕ ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 20 =
Remember me
